Adalia Rose Williams Death: 15ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ವೃದ್ಧೆ: ಏನಿದು ವಿಚಿತ್ರ ಕಾಯಿಲೆ?

ಅಡಾಲಿಯಾ ರೋಸ್ ವಿಲಿಯಮ್ಸ್ ಅಪರೂಪದ ಆನುವಂಶಿಕ ಸ್ಥಿತಿಯನ್ನು ಹೊಂದಿದ್ದು,  ಕೂದಲು ಉದುರುವಿಕೆ ಮತ್ತು ಕುಂಠಿತ ಬೆಳವಣಿಗೆ ಸೇರಿದಂತೆ ಇತರ ರೋಗಲಕ್ಷಣಗಳೊಂದಿಗೆ ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ವಯಸ್ಸಾಗುವ ಕಾಯಿಲೆಯಿಂದ ಬಳಲುತ್ತಿದ್ದರು.

Adalia Rose Williams a social media star has died at 15 Hutchinson Gilford progeria syndrome mnj

ಟೆಕ್ಸಾಸ್‌ (ಜ. 15): ತಮ್ಮ ಜೀವನವನ್ನು ಸಾಮಾಜಿಕ ಮಾಧ್ಯಮದ (Social Media) ಮೂಲಕ ಇಡೀ ಜಗತ್ತಿಗೆ ಬಹಿರಂಗಪಡಿಸುತ್ತಿದ್ದ, ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ತಾರೆ ಅಡಾಲಿಯಾ ರೋಸ್ ವಿಲಿಯಮ್ಸ್ (Adalia Rose Williams) 15ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಬುಧವಾರ ಸಂಜೆ (ಜ. 12) ನಿಧನರಾದರು ಎಂದು ಅವರ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಯಲ್ಲಿ ತಿಳಿಸಲಾಗಿದೆ.   ಕೂದಲು ಉದುರುವಿಕೆ ಮತ್ತು ಕುಂಠಿತ ಬೆಳವಣಿಗೆ ಸೇರಿದಂತೆ ಇತರ ರೋಗಲಕ್ಷಣಗಳೊಂದಿಗೆ ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ವಯಸ್ಸಾಗುವ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಅವರ ವಯಸ್ಸು ಮಾತ್ರ 15 ಆದರೆ ಅವರ ದೇಹ ಅವರ ವಯ್ಸಸ್ಸನ್ನು ಮೀರಿ ಬೆಳೆದಿತ್ತು.  

ಹೌದು! ವಿಲಿಯಮ್ಸ್ ಅವರು ಸುಮಾರು 3 ತಿಂಗಳ ಮಗುವಾಗಿದ್ದಾಗಿನಿಂದ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್‌ನಿಂದ (Hutchinson-Gilford progeria syndrome) ಬಳಲುತ್ತಿದ್ದಾರೆ ಎಂದು ಅವರ ತಾಯಿ ನಟಾಲಿಯಾ ಪಲ್ಲಂಟೆ 2018 ರಲ್ಲಿ ನ್ಯೂಜಿಲೆಂಡ್ ಹೆರಾಲ್ಡ್‌ಗೆ ತಿಳಿಸಿದ್ದರು. ಮೇಯೊ ಕ್ಲಿನಿಕ್ ಪ್ರಕಾರ, ಪ್ರೊಜೆರಿಯಾ ಎಂದೂ ಕರೆಯಲ್ಪಡುವ ಈ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ ಮತ್ತು ಕೂದಲು ಉದುರುವಿಕೆ ಮತ್ತು ಕುಂಠಿತ ಬೆಳವಣಿಗೆ ಸೇರಿದಂತೆ ಇತರ ರೋಗಲಕ್ಷಣಗಳೊಂದಿಗೆ ಮಕ್ಕಳು ಸಾಮಾನ್ಯಕ್ಕಿಂತ ಹೆಚ್ಚು ವೇಗವಾಗಿ ವಯಸ್ಸಾಗುತ್ತಾರೆ. ಹೀಗಾಗಿ ರೋಸ್ ವಿಲಿಯಮ್ಸ್  ತೀರಾ ವಯಸ್ಸಾದವರಂತೆ ಕಾಣುತ್ತಿದ್ದರು. ಮೇಯೊ ಕ್ಲಿನಿಕ್ ಪ್ರಕಾರ, ಈ ಸ್ಥಿತಿಯನ್ನು ಹೊಂದಿರುವ ಮಗುವಿಗೆ ಸರಾಸರಿ ಜೀವಿತಾವಧಿ ಕೇವಲ 13 ವರ್ಷಗಳು ಮಾತ್ರ.

ಇದನ್ನೂ ಓದಿ: Pig Heart Implant: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

ಪ್ರೊಜೆರಿಯಾ ರಿಸರ್ಚ್ ಫೌಂಡೇಶನ್ ಪ್ರಕಾರ, ಜಗತ್ತಿನಾದ್ಯಂತ ಸುಮಾರು 400 ಮಕ್ಕಳು ಈ ಸ್ಥಿತಿಯನ್ನು ಹೊಂದಿದ್ದಾರೆ.  2012ರ ರಿಂದ ವಿಲಿಯಮ್ಸ್  ವೀಡಿಯೊಗಳು ಅಪ್‌ಲೋಡ್‌ ಮಾಡಲು ಪ್ರಾರಂಭಿಸಿದ್ದರು. ಈ ವಿಡಿಯೋಗಳು ಅವರ ಹಲವಾರು ನೃತ್ಯಗಳನ್ನು ಒಳಗೊಂಡಿವೆ. ನವೆಂಬರ್‌ನಲ್ಲಿ ಪೋಸ್ಟ್ ಮಾಡಲಾದ ಯುಟ್ಯೂಬ್ ತಾರೆಯ ಇತ್ತೀಚಿನ ವೀಡಿಯೊ, ಲುಕಾ ಎಂಬ ಹೆಸರಿನ ಸಿಲಿಕೋನ್ ಬೇಬಿ ಗೊಂಬೆಯನ್ನು ಅನ್‌ಬಾಕ್ಸಿಂಗ್ ಮಾಡುತ್ತಿರುವುದನ್ನು ತೋರಿಸುತ್ತದೆ. ಆಕೆಯ ಚಾನಲ್ 339 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.‌

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್: ಟೆಕ್ಸಾಸ್  ಮೂಲದ ಅಡಾಲಿಯಾ ರೋಸ್ ವಿಲಿಯಮ್ಸ್  12 ಮಿಲಿಯನ್ ಫೇಸ್‌ಬುಕ್ ಫಾಲೋವರ್ಸ್‌, ಸುಮಾರು 4 ಲಕ್ಷ ಇನ್ಸ್ಟಾಗ್ರಾಮ್‌ ಫಾಲೊವರ್ಸ್ ಹಾಗೂ 2.9 ಮಿಲಿಯನ್ ಯೂಟ್ಯೂಬ್‌ ಚಂದಾದಾರರನ್ನು (Subscribers) ಹೊಂದಿದ್ದರು, ಅಲ್ಲಿ ಅವರು ಆರೋಗ್ಯದ ಬಗ್ಗೆ ಅಪ್‌ಡೇಟ್, ಮೇಕಪ್ ವೀಡಿಯೊಗಳು, ಹಾಸ್ಯಭರಿತ ವಿಡಿಯೋಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಹಲವು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.

‌ಇದನ್ನೂ ಓದಿ: Stone Man Syndrome: ಹೆಪ್ಪುಗಟ್ಟುತ್ತಿವೆ 29ರ ಯುವಕನ ಸ್ನಾಯುಗಳು: ಏನಿದು ಅಪರೂಪದ ಕಾಯಿಲೆ?

ಅವಳನ್ನು ಪ್ರೀತಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ: "ಜನವರಿ 12, 2022 ರಂದು ಸಂಜೆ 7 ಗಂಟೆಗೆ ಅಡಾಲಿಯಾ ರೋಸ್ ವಿಲಿಯಮ್ಸ್ ಅವರನ್ನು ಈ ಪ್ರಪಂಚದಿಂದ ಮುಕ್ತಗೊಳಿಸಲಾಯಿತು. ಅವಳು ಸದ್ದಿಲ್ಲದೆ ಅದರೊಳಗೆ ಬಂದು ಸದ್ದಿಲ್ಲದೆ ಹೊರಟುಹೋದಳು, ಆದರೆ ಅವಳ ಜೀವನವು ಅದರಿಂದ ದೂರವಿತ್ತು. ಅವಳು ಲಕ್ಷಾಂತರ ಜನರನ್ನು ಮುಟ್ಟಿದಳು ಮತ್ತು ಅವಳನ್ನು ತಿಳಿದಿರುವ ಪ್ರತಿಯೊಬ್ಬರಲ್ಲೂ ದೊಡ್ಡ  ಛಾಪು ಮೂಡಿಸಿದಳು. ಅವಳು ಇನ್ನು ಮುಂದೆ ನೋವನ್ನು ಅನುಭವಿಸುವುದಿಲ್ಲ ಮತ್ತು ಈಗ ಅವಳು ಇಷ್ಟಪಡುವ  ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾಳೆ. ಈ ಸುದ್ದಿ ಸತ್ಯವಲ್ಲ ಎಂದು ನಾನು ನಿಜವಾಗಿಯೂ ಕೇಳಲು ಬಯಸುತ್ತೇನೆ ಆದರೆ ದುರದೃಷ್ಟವಶಾತ್ ಅವಳು ನಮ್ಮನ್ನು ಅಗಲಿದ್ದಾರೆ. ಅವಳನ್ನು ಪ್ರೀತಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಆಕೆಯ ಆರೋಗ್ಯವನ್ನು ಕಾಪಾಡಲು ವರ್ಷಗಳ ಕಾಲ ಶ್ರಮಿಸಿದ ಆಕೆಯ ಎಲ್ಲಾ ವೈದ್ಯರು ಮತ್ತು ದಾದಿಯರಿಗೆ ಧನ್ಯವಾದಗಳು. ಕುಟುಂಬವು ಈಗ ಈ ದೊಡ್ಡ ನಷ್ಟವನ್ನು ಖಾಸಗಿಯಾಗಿ ದುಃಖಿಸಲು ಬಯಸುತ್ತದೆ" ಎಂದು ಅಡಾಲಿಯಾ ರೋಸ್ ವಿಲಿಯಮ್ಸ್ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಿಳಿಸಲಾಗಿದೆ. 

 

 

Latest Videos
Follow Us:
Download App:
  • android
  • ios