ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ವರದಿಯೊಂದು ಹೇಳಿದೆ. ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಹೊರತಂದ ವರದಿಯಲ್ಲಿ ವಿಶ್ವದಲ್ಲಿ ಒಟ್ಟು 10,906 ತಳಿಗಳ ಪಕ್ಷಿಗಳು ವಾಸಿಸುತ್ತಿದ್ದು, ಈ ಪೈಕಿ ಭಾರತದಲ್ಲಿ ಒಟ್ಟು 1,353 ವಿಧದ ಪಕ್ಷಿಗಳು ಆವಾಸಗೊಂಡಿದೆ.

ಕೋಲ್ಕತಾ: ವಿಶ್ವದಲ್ಲಿರುವ ಪಕ್ಷಿ ಸಂಕುಲಗಳಲ್ಲಿ 78 ಪಕ್ಷಿಗಳ ವಿಧವು ಭಾರತದಲ್ಲಿ ಬಿಟ್ಟು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ವರದಿಯೊಂದು ಹೇಳಿದೆ. ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ಹೊರತಂದ ವರದಿಯಲ್ಲಿ ವಿಶ್ವದಲ್ಲಿ ಒಟ್ಟು 10,906 ತಳಿಗಳ ಪಕ್ಷಿಗಳು ವಾಸಿಸುತ್ತಿದ್ದು, ಈ ಪೈಕಿ ಭಾರತದಲ್ಲಿ ಒಟ್ಟು 1,353 ವಿಧದ ಪಕ್ಷಿಗಳು ಆವಾಸಗೊಂಡಿದೆ. ಇದು ವಿಶ್ವದಲ್ಲಿರುವ ಹಕ್ಕಿಗಳ ಪೈಕಿ ಶೇ.12.4ರಷ್ಟಿದೆ. ಇದರಲ್ಲಿ 78 ತಳಿಯ ಪಕ್ಷಿಗಳು ಭಾರತದಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಕಾಣ ಸಿಗುವುದಿಲ್ಲ ಎಂದು ಹೇಳಿದೆ. ಈ 78 ತಳಿಯ ಪಕ್ಷಿಗಳಲ್ಲಿ 28 ಪಶ್ಚಿಮಘಟ್ಟ, 25 ಅಂಡಮಾನ್‌ ನಿಕೋಬಾರ್‌ ದ್ವೀಪ, 4 ಪೂರ್ವ ಹಿಮಾಲಯ, ದಕ್ಷಿಣ ದಕ್ಕನ್‌ ಪ್ರಸ್ತಭೂಮಿ ಹಾಗೂ ಮಧ್ಯಭಾರತದ ಅರಣ್ಯದಲ್ಲಿ ತಲಾ 1 ಪಕ್ಷಿಗಳು ಕಾಣಸಿಗುತ್ತದೆ.ಆತಂಕ ರೇಖೆಯಲ್ಲಿರುವ 25 ತಳಿ ಪಕ್ಷಿಗಳ ಪೈಕಿ 3 ತೀವ್ರ ಅಳಿವಿನಂಚಿನಲ್ಲಿದ್ದು, 5 ಅಳಿವಿನಂಚಿನಲ್ಲಿದೆ ಹಾಗೂ 17 ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ವರದಿ ಪ್ರಕಾರ ಮಣಿಪುರ ಬುಷ್‌ ಕ್ವೈಲ್‌ ಹಕ್ಕಿಯು 1907ರ ಬಳಿಕ ಕಂಡಿಲ್ಲ, ಹಿಮಾಲಯನ್‌ ಕ್ವೈಲ್‌ ಪಕ್ಷಿ 1876 ಬಳಿಕ 2009ರಲ್ಲಿ ಕೊನೆಯ ಬಾರಿ ಪ್ರತ್ಯಕ್ಷವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred