Asianet Suvarna News Asianet Suvarna News

ಹೊಸ ದಾಖಲೆ ಬರೆದ ಬನಾರಸ್: ಪಂಚ ಭಾಷೆಗಳಲ್ಲಿ ಹತ್ತು ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದ ಟ್ರೈಲರ್!

ಬನಾರಸ್, ಚಿತ್ರ ಆರಂಭದಿಂದ ಇಲ್ಲಿಯವರೆಗೂ ಕುತೂಹಲ ಕಾಯ್ದಿಟ್ಟುಕೊಂಡು ಬಂದಿದ್ದು, ಒಟ್ಟಾರೆಯಾಗಿ ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ.
 

Zaid Khan Banaras trailer hits 10 million view vcs
Author
First Published Oct 3, 2022, 3:54 PM IST

ಈಗಾಗಲೇ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿರುವ ಜಯತೀರ್ಥ ನಿರ್ದೇಶನದ ಬನಾರಸ್ ಸಿನೆಮಾ ಈಗ ಮತ್ತೊಂದು ದಾಖಲೆ ನಿರ್ಮಾಣದತ್ತ ದಾಪುಗಾಲಿಡುತ್ತಿದೆ. ಹೌದು ಮೋಷನ್ ಪೋಸ್ಟರ್ ಮತ್ತು ಮಾಯಗಂಗೆ ಎಂಬ ನವೀರಾದ ಪ್ರೇಮಕಥೆಯ ಹಾಡುಗಳನ್ನ ರಿಲೀಸ್ ಮಾಡಿ ಸಿನಿಪ್ರಿಯರ ನಿದ್ದೆ ಕದ್ದಿದ್ದ ಬನಾರಸ್ ಚಿತ್ರತಂಡ ನಿರೀಕ್ಷೆಯಂತೆ ಟ್ರೈಲರ್ ಒಂದನ್ನ ರಿಲೀಸ್ ಮಾಡಿ ಚಿತ್ರದ ಬಗೆಗಿದ್ದ ನಂಬಿಕೆಯನ್ನ ಕಾಯ್ದುಕೊಂಡಿದೆ. 

ಹೌದು ವಾರದ ಹಿಂದೆ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ಪ್ಯಾನಿಂಡಿಯಾ ಲೆವೆಲ್ ಕಾರ್ಯಕ್ರಮದಲ್ಲಿ ಬನಾರಸ್ ತಂಡ ಅಂದುಕೊಂಡಂತೆ ಟ್ರೈಲರ್ ರಿಲೀಸ್ ಮಾಡಿದೆ. ಸದ್ಯ ಈ ಟ್ರೈಲರ್ ಈಗ ಪಂಚ ಭಾಷೆಯ ವೀಕ್ಷರಿಂದ ಭಾರೀ ಮೆಚ್ಚುಗೆ ಗಳಿಸಿ 10 ಮಿಲಿಯನ್ ಗೂ ಅಧಿಕ ವೀಕ್ಷಣೆಯತ್ತ ಮುನ್ನುಗ್ಗಿದೆ. ಬಿಡುಗಡೆಯಾದ ಟ್ರೈಲರ್ ನಲ್ಲಿ ನವ ನಟ ಝೈದ್ ಖಾನ್ ನಟನೆ,ಸೋನಲ್ ಕ್ಯೂಟ್ ನೆಸ್, ಹಿತ ಮತ್ತು ಇಂಟ್ರಸ್ಟಿಂಗ್ ಅನಿಸೋ ಹಿನ್ನಲೆ ಸಂಗೀತ, ಕ್ಯಾಮೆರಾ ಕೈ ಚಳಕ,ನಿರ್ದೇಶಕ ಜಯತೀರ್ಥ ಅವರ ಕಸಬುದಾರಿಕೆಯ ಕಲೆ ಎಲ್ಲವೂ ಅಲ್ಲಿಯೇ ತಮ್ಮ ಸಣ್ಣ ಜಲಕ್ ನಲ್ಲೇ ಮ್ಯಾಜಿಕ್ ಮಾಡುವಂತಿವೆ.

Zaid Khan Banaras trailer hits 10 million view vcs

ಈ ಸಿನಿಮಾ ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಗೆಲುವು ದಾಖಲಿಸಲೆಂಬ ಹಾರೈಕೆ ಮತ್ತು ಅದು ಸಾಧ್ಯವಾಗಿಯೇ ತೀರುತ್ತದೆ ಎಂಬಂಥಾ ಭರವಸೆಗಳೊಂದಿಗೆ ಈ ಕಾರ್ಯಕ್ರಮ ಸಂಪನ್ನಗೊಂಡ ಈ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಬಸಲಿವುಡ್ ನಟ ಅರ್ಬಾಜ್ ಖಾನ್ ಸೇರಿದಂತೆ ಮುಂತಾದ ಗಣ್ಯರು ಪಾಲ್ಗೊಂಡು ಇವರುಗಳ ಸಮ್ಮುಖದಲ್ಲೇ ಪಂಚ ಭಾಷೆಗಳಲ್ಲೂ ಈ ಜಬರ್ ದಸ್ತ್ ಟ್ರೈಲರ್ ಲೋಕಾರ್ಪಣೆ ಗೊಂಡಿದೆ. ವ್ಯವಸ್ಥಿತ ಮತ್ತು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸ ಹುಮ್ಮಸ್ಸಿನಲ್ಲಿ ಚಿತ್ರತಂಡ ಆಗಮಿಸಿದ್ರೆ, ಗಣ್ಯರು, ಹಾಗು ಕನ್ನಡ ವೂ ಸೇರಿದಂತೆ ಇತರ ಭಾಷೆಯ ಮಾದ್ಯಮ ಮಿತ್ರರೂ ಆಗಮಿಸಿದ್ದರು. 

ಟ್ರೈಲರ್ ನೋಡಿ ಬಹುವಾಗಿ ಮೆಚ್ಚಿದ ಕ್ರೇಜಿಸ್ಟಾರ್ ಝೈದ್ ನಟನೆ ಮತ್ತು ತಮ್ಮನ್ನು ಈ ಕಾರ್ಯಕ್ರಮಕ್ಕೆ ಝೈದ್ ಬರಮಾಡಿಕೊಂಡ ಪರಿಯ ಬಗ್ಗೆ ಕೊಂಡಾಡಿದರು. ಜೊತೆಗೆ ತೆರೆಯ ಮೇಲೆ ಝೈದ್ ಇಷ್ಟು ಸೊಗಸಾಗಿ ಪರಿಣತಿ ಪಡೆದ ನಟನಂತೆ ನಟಿಸಲು ತೆರೆ ಹಿಂದೆ ವಹಿಸಿದ ಶ್ರಮ ಮತ್ತು ಕಲಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿ,ಬನಾರಸ್ ಗೆ ಶುಭಕೋರಿದ್ರು. ಇನ್ನು ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಬನಾರಸ್ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಕಲಾವಿದರಾದ ಅಚ್ಯುತ್ ಕುಮಾರ್ ಮಾತನಾಡಿ ತಮ್ಮ ಅನುಭವದೊಂದಿಗೆ ನವನಟ ಝೈದ್ ಕಲಿಕೆಯ ಕುರಿತು ಮೆಚ್ಚುಗೆಯ ಮಾತುಗಳನ್ನ ಆಡಿದ್ರು.ನಟಿ ಸೋನಲ್ ಮೊಂತೆರೋ ತಮಗೆ ಈ ಅದ್ಭುತ ಅವಕಾಶ ಒಲಿದಿದ್ದರ ಬಗ್ಗೆ ಸ್ಟುಟವಾಗಿ ಹೇಳಿದ್ರು.

Banaras: ಝೈದ್ ಖಾನ್ ಬನಾರಸ್‌ಗೆ ಸಿಕ್ತು ಲಕ್ಕಿ ಹ್ಯಾಂಡ್ ಸಪೋರ್ಟ್!

ಏಕಾಏಕಿ ನಟನೆಗೆ ಧುಮುಕಿ,ನಾಯಕನಾಗಿ ನೆಲೆ ನಿಲ್ಲುವ ಕನಸು ಕಾಣುವವರ ನಡುವೆ ಝೈದ್ ಬೇರೆಯೇ ವರ್ಗಕ್ಕೆ ಸೇರಿದವರು. ಯಾಕಂದ್ರೆ ನಾಯಕ ನಾಗಿ ಬಣ್ಣ ಹಚ್ಚುವ ಮೊದಲು ನುರಿತವರಿಂದ ಬೇಕಾದ ಎಲ್ಲಾ ತಯಾರಿಯನ್ನೂ ನಡೆಸಿ ಬಣ್ಣ ಹಚ್ಚಿದವರು. ಆ ಕಲಿಕೆಯ ಶ್ರದ್ದೆ,ಒಲಿದ ಕಲೆ ಎಲ್ಲವೂ ಅವರ ನಟನೆಯಲ್ಲಿ ಮಿಂದು ಪಳಗಿದ, ನಟನೆಯಲ್ಲಿ ಅನುಭವ ವಿರುವ ನಟನಂತೆ ನಟಿಸಿ ಮನಸೆಳೆಯುವಲ್ಲಿ ಗೆದ್ದಂತಿದೆ. ನಟನೆಗೆ,ಕಲೆಗೆ ಯಾವ ಜಾತಿ, ಧರ್ಮದ ಅಡ್ಡ ಗೋಡೆಗಳಿಲ್ಲ ಎಂಬ ನಿಖರ ನಿಲುವಿನೊಂದಿಗೆ ಬಣ್ಣದ ಲೋಕ ಪ್ರವೇಶಿಸಿರುವ ಝೈದ್ ಖಾನ್ ಫ್ಯೂಚರ್ ನಲ್ಲಿ ಒಳ್ಳೆಯ ನಾಯಕನಾಗಿ ನೆಲೆ ನಿಲ್ಲುವ ಲಕ್ಷಣಗಳು ಖಾತ್ರಿಯಾಗಿವೆ. 

ಇನ್ನುಳಿದಂತೆ ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬನಾರಸ್, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಈ ಮೂಲಕ ಕನ್ನಡದ ಕೀರ್ತಿಪತಾಕೆ ರಾಷ್ಟ್ರಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡಲಿದೆ.ತಿಲಕ್ ರಾಜ್ ಬಲ್ಲಾಳ್ ಪ್ರೀತಿಯಿಂದ, ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಬನಾರಸ್ ಗೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ,ದೊಡ್ಡ ತಾರಾಗಣ, ಪಳಗಿದ ತಾಂತ್ರಿಕ ವರ್ಗ ಮತ್ತು ಪ್ರತಿಭಾವಂತ ಕಲಾವಿದರಿಂದ ತುಂಬಿದೆ.

ಬನಾರಸ್, ಚಿತ್ರ ಆರಂಭದಿಂದ ಇಲ್ಲಿಯವರೆಗೂ ಕುತೂಹಲ ಕಾಯ್ದಿಟ್ಟುಕೊಂಡು ಬಂದಿದ್ದು, ಒಟ್ಟಾರೆಯಾಗಿ ಇದೊಂದು ವಿಭಿನ್ನ ಬಗೆಯ ಚಿತ್ರವೆಂಬ ಸ್ಪಷ್ಟ ಸಂದೇಶ ಈಗಾಗಲೇ ರವಾನೆಯಾಗಿದೆ. ಅದರಲ್ಲೂ ವಿಶೇಷವಾಗಿ, ಬನಾರಸ್ ಮೂಲಕ ಝೈದ್ ಖಾನ್ ಎಂಬ ಅಪ್ಪಟ ಕನ್ನಡಿಗನ, ಪ್ರತಿಭಾವಂತ ಹೀರೋನ ಆಗಮನವಾಗುತ್ತಿದೆ. ಝೈದ್ ಈ ಚಿತ್ರಕ್ಕಾಗಿ ಪಟ್ಟಿರುವ ಪರಿಶ್ರಮ, ತಯಾರಾಗಿರುವ ರೀತಿಯೇ ಅವರ ಬಗ್ಗೆ ಭರವಸೆ ಹೆಚ್ಚಿಸಿದ್ದು ಟ್ರೈಲರ್ ನೋಡಿದ ಮೇಲಂತೂ ಚಿತ್ರದ ಮೇಲಿನ ನಿರೀರಿಕ್ಷೆಗಳು ಹೆಚ್ಚಾಗಿದೆ ಅಂದ್ರೆ ತಪ್ಪಾಗದು.

 

Follow Us:
Download App:
  • android
  • ios