ಫೇಸ್ ಬುಕ್ ಲೈವ್ ಬಂದ ಯುವರತ್ನ/ ಜನ್ಮದಿನಾಚರಣೆ ಒಂದು ವಿಚಾರ ತಿಳಿಸಿದ ಪವರ್ ಸ್ಟಾರ್/ ನಾನು ಮನೆಯಲ್ಲಿ ಅಂದು ಇರುವುದಿಲ್ಲ/ ಎಲ್ಲರೂ ಕೊರೋನಾ ನಿಯಮ ಪಾಲನೆ ಮಾಡಿ

ಬೆಂಗಳೂರು( ಮಾ. 15) ಪುನೀತ್ ರಾಜ್ ಕುಮಾರ್ ಲೈವ್ ಬಂದಿದ್ದಾರೆ. ಅನೇಕ ವಿಚಾರಗಳನ್ನು ಹೇಳಿದ್ದಾರೆ. ನನ್ನ ಜನ್ಮದಿನ ಮಾರ್ಚ್ (17) ಯಾರೂ ದಯವಿಟ್ಟು ಮನೆಗೆ ಬರಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಈ ಬಾರಿ ನನ್ನ ಜನ್ಮದಿನದಂದು ನಾನು ಮನೆಯಲ್ಲಿ ಇರುವುದಿಲ್ಲ. ಕುಟುಂಬದೊಂದಿಗೆ ದೇವಾಲಯಕ್ಕೆ ತೆರಳಿದ್ದೇನೆ ಹಾಗಾಗಿ ಯಾರೂ ಬರುವುದು ಬೇಡ ಎಂದಿದ್ದಾರೆ. ಜತೆಗೆ ಇನ್ನೊಂದು ವಿಚಾರವನ್ನು ಹೇಳಿದ್ದಾರೆ.

ಸಖತ್ತಾಗಿ ಅಡುಗೆ ಕಲಿತ ಪುನೀತ

ಮೈಸೂರಿನಲ್ಲಿ ಮಾರ್ಚ್ 20 ರಂದು ಆಯೋಜನೆ ಮಾಡಿದ್ದ ಯುವರತ್ನ ಸಂಭ್ರಮ ಕಾರ್ಯಕ್ರಮ ರದ್ದಾಗಿದೆ. ನಾನೇ ಎಲ್ಲ ಜಿಲ್ಲೆಗೆ ಬಂದು ನಿಮ್ಮನ್ನು ಭೇಟಿ ಮಾಡಲಿದ್ದೇನೆ. ಒಂದು ಜಿಲ್ಲೆಗೆ ಸೀಮಿತ ಮಾಡುವುದು ಬೇಡ. ಯಾವ ದಿನಾಂಕದಂದು ಯಾವ ಜಿಲ್ಲೆ ಎಂಬುದನ್ನು ನಮ್ಮ ತಂಡ ತಿಳಿಸಲಿದೆ ಎಂದಿದ್ದಾರೆ.

ಏಪ್ರಿಲ್ 1 ರಂದು ಯುವರತ್ನ ತೆರೆಕಾಣಲಿದೆ. ಪುನೀತ್ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದು ಅವರ ಗಡ್ಡದಾರಿ ಲುಕ್ ಈಗಾಗಲೇ ಟ್ರೆಂಡ್ ಆಗಿದೆ .