Asianet Suvarna News Asianet Suvarna News

'ವಿಷ್ಣುವರ್ಧನ' ಸಿನಿಮಾ ಗಣೇಶ್ ಮಾಡಬೇಕಿತ್ತು, ಆದ್ರೆ ಸುದೀಪ್ ಪಾಲಾಯ್ತು: ಯೋಗೀಶ್ ದ್ವಾರಕೀಶ್

ನಾವಿಬ್ರೂ ಸೇರಿ ಫಸ್ಟ್ ಟೈಮ್ ಸಿನಿಮಾ ಮಾಡ್ತಾ ಇದೀವಿ. ಎನೋ ಈ ಕಥೆಗಳಲ್ಲಿ ಮಿಸ್ಸಿಂಗ್ ಇದೆ. ನೀನೇ ಹೇಳ್ತಿಯಲ್ಲ, ಏನೋ ಇರ್ಬೇಕು ಕಣೋ ಅಂತ.. ಸಿನಿಮಾ ನೋಡಿ ಹೋಗ್ವಾಗ ಸೋಲ್ ತಗೊಂಡು ಹೋಗ್ಬೇಕು ಅಂತ' ಅಂದ್ರು ಸುದೀಪ್..

yogish dwarakish talking video about vishnuvardhana movie secret revealed srb
Author
First Published Sep 13, 2024, 8:53 PM IST | Last Updated Sep 13, 2024, 9:05 PM IST

ಕನ್ನಡದ ಖ್ಯಾತ ನಿರ್ಮಾಪಕರಾದ ದ್ವಾರಕೀಶ್ ಪುತ್ರ ಯೋಗೀಶ್ (Yogesh Dwarakish) ಅವರು ಮಾತನಾಡಿರುವ ವೀಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಯೋಗಿ ಸ್ವಾರಕೀಶ್ 'ಗಣೇಶ್‌ಗೆ (Golden Star Ganesh) ಫೋನ್ ಮಾಡಿ ಹೇಳ್ದೆ 'ಒಂದ್ ಕಥೆ ಕೇಳ್ದೆ, ನಿಂಗೆ ತುಂಬಾ ಸ್ಯೂಟೆಬಲ್ ಕಣೋ ಅಂತ. ಗಣೇಶ್ ನಂಗೆ ಅಂಕಲ್ ಅಂತ ಕರಿಯೋದು. ಅವ್ನು 'ಅಂಕಲ್, ಐದು ಸಿನಿಮಾ ಒಪ್ಕೊಂಡಿದೀನಿ ಅಂಕಲ್, ನನ್ ಡೇಟ್ಸ್ ಇಲ್ಲ ಅಂಕಲ್..' ಅಂದ. aಅದಕ್ಕೆ ನಾನು, 'ಚಿನ್ನಾ, ಮೊದ್ಲು ಕತೆ ಕೇಳು.. ನಿಂಗೆ ಇಷ್ಟ ಆದ್ರೆ ನಿನ್ನ ಡೇಟ್ ಯಾವ ಪೊಡ್ಯೂಸರ್‌ ಹತ್ರ ಇದ್ಯೋ, ಅವ್ರ ಹತ್ರನೇ ಈ ಸಿನಿಮಾ ಮಾಡ್ಕೋ' ಅಂದೆ. ಗಣೇಶ್ ಇಮ್ಮೆನ್ಸ್ಲೀ ಲವ್ಡ್ ಇಟ್.. 

ಆದ್ರೆ. ಆ ಕಥೆಗೆ ಗಣೇಶ್‌ಗೆ ನಿರ್ಮಾಪಕರು ಆಗ ಸಿಗಲೇ ಇಲ್ಲ.. ನಾವು ನಾಲ್ಕು ವರ್ಷ ಕಳೆದು ಈ ಸಿನಿಮಾ ಮಾಡ್ತೀವಿ ಅಂತ ಬಂದಾಗ, ಸುದೀಪ್ (Kichcha Sudeep) ಅವ್ರಿಗೆ ಬೇರೆ ಮೂರು ಕಥೆನೇ ಮಾಡಿದ್ವಿ.. ಸುದೀಪ್ ಮುಂದೆ ಬೆಳಿಗ್ಗೆ ಎಂಟೂವರೆಯಿಂದ ಸಂಜೆ ಐದು ಗಂಟೆಯ ತನಕ ಸುದೀಪ್ ಅವ್ರಿಗೆ ಮೂರು ಬೇರೆ ಕಥೆ ಹೇಳಿದ್ವಿ.. ಆದ್ರೆ ಸುದೀಪ್ ಆ ಕಥೆಗಳ ಬಗ್ಗೆ 'ಮೂರೂ ಚೆನ್ನಾಗಿದೆ, ಆದ್ರೆ ಏನೋ ಮಿಸ್ಸಿಂಗ್ ಯೋಗಿ..' ಅಂದ್ರು.. 

ಬಿಡುಗಡೆಯಾಯ್ತು 'ಕರ್ಕಿ' ಹಾಡು, ಮತ್ತೊಂದು ಮಣ್ಣಿನ ಸೊಗಡಿನ ಚಿತ್ರಕ್ಕೆ ಕೌಂಟ್ ಡೌನ್!

ನಾವಿಬ್ರೂ ಸೇರಿ ಫಸ್ಟ್ ಟೈಮ್ ಸಿನಿಮಾ ಮಾಡ್ತಾ ಇದೀವಿ. ಎನೋ ಒಂದು ಈ ಕಥೆಗಳಲ್ಲಿ ಮಿಸ್ಸಿಂಗ್ ಇದೆ. ಏನೋ ಇರ್ಬೇಕು ಕಣೋ, ನೀನೇ ಹೇಳ್ತಿಯಲ್ಲ, ಸಿನಿಮಾ ನೋಡಿ ಹೋಗ್ವಾಗ ಸೋಲ್ ತಗೊಂಡು ಹೋಗ್ಬೇಕು ಅಂತ..' ಅಂದ್ರು. ಈ ಮಾತುಗಳು ಸದ್ಯ ವೈರಲ್ ಆಗ್ತಿರೋ ವಿಡಿಯೋದಲ್ಲಿ ಇದೆ. ಆಮೇಲೆ ಏನಾಯ್ತು ಎಂಬ ಸಂಗತಿ ನಹುತೇಕ ಎಲ್ಲರಿಗೂ ಗೊತ್ತಿದೆ. ಗಣೇಶ್ ಆ ಸಿನಿಮಾ ಮಾಡಲಿಲ್ಲ, ಬದಲಿಗೆ 'ವಿಷ್ಣುವರ್ಧನ' ಸಿನಿಮಾವನ್ನು ಸುದೀಪ್ ಮಾಡಿದ್ದಾರೆ. 

ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಬಂದ ಈ ಸಿನಿಮಾದ ಕಥೆ ಗಣೇಶ್ ಅವರಿಗೆ ಸೂಟ್ ಆಗುತ್ತಿತ್ತು ಎಂಬುದು ಯೋಗಿ ದ್ವಾರಕೀಶ್ ಅವರ ಅಂದಿನ ಅಭಿಪ್ರಾಯವಾಗಿದ್ದಿರಬಹುದು. ಏಕೆಂದರೆ, ಆಮೇಲೆ ಅದೇ ಕಥೆಯನ್ನೋ ಅಥವಾ ಅದನ್ನೇ ಅಲ್ಪಸ್ವಲ್ಪ ಬದಲಾವಣೆ ಮಾಡಿ ನಟ ಕಿಚ್ಚ ಸುದೀಪ್ ಅವರು ಮಾಡಿದರೋ ಗೊತ್ತಿಲ್ಲ. ಆದರೆ, ಕಿಚ್ಚ ಸುದೀಪ್ ನಟನೆಯ ವಿಷ್ಣುವರ್ಧನ ಸಿನಿಮಾ ಸೂಪರ್ ಹಿಟ್ ಆಗಿದ್ದಂತೂ ಸತ್ಯ. 

ಒಟ್ಟಿನಲ್ಲಿ, ವಿಷ್ಣುವರ್ಧನ್ ಕಥೆಯನ್ನು ನಟ ಗಣೇಶ್ ಅವರು ಒಪ್ಪಿದ್ದರು, ಆ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆಮ ಡೇಟ್ಸ್ ಸಮಸ್ಯೆಯಿಂದ ಅದು ಸುದೀಪ್ ಅವರ ಪಾಲಾಯಿತು ಎಂಬುದು ಯೋಗಿ ದ್ವಾರಕೀಶ್ ಅವರ ಮಾತಿನಿಂದ ಅರ್ಥವಾಗುತ್ತದೆ. ಅದಕ್ಕೇ ಹೇಳುವುದು, ಯಾವ ಅಗುಳಿನ ಋಣ ಯಾರಿಗೆ ಇರುತ್ತದೆಯೋ, ಅವರಿಗೇ ಅದು ದಕ್ಕುತ್ತದೆ ಅಂತ.. ಗಣೇಶ್ ಇಷ್ಟಪಟ್ಟಿದ್ದರೂ, ಯೋಗಿ ಅವರಿಂದಲೇ ಈ ಕಥೆಯನ್ನು ಸಿನಿಮಾ ಆಗಿ ಮಾಡಿಸಬೇಕು ಎಂದಿಕೊಂಡಿದ್ದರೂ ಸಾಧ್ಯವಾಗಲಿಲ್ಲ. 

ಕಾಲಾಪತ್ಥರ್ ಚಿತ್ರ ವಿಮರ್ಶೆ: ಅಹಂಕಾರದ ಅಂತರ್ಯದ್ಧದಲ್ಲಿ ದಡ ಸೇರಲು ಅಣ್ಣಾವ್ರೇ ದೇವ್ರು..!

ಆದರೆ, ಈ ಕಥೆಯನ್ನು ಸುದೀಪ್ ಚೆನ್ನಾಗಿಯೇ ನಿರ್ವಹಿಸಿದ್ದಾರೆ ಎಂದು ವಿಷ್ಣುವರ್ಧನ ಸಿನಿಮಾ ನೋಡಿದ ಯಾರೇ ಆದರೂ ಹೇಳಬಹುದು. ಸುದೀಪ್ ಅವರು ಯಾವುದೇ ಪಾತ್ರವನ್ನಾದರೂ ಮಾಡಬಲ್ಲರು, ಯಾವುದೇ ಕಥೆಗಾದರೂ ನ್ಯಾಯ ಒದಗಿಸಬಲ್ಲರು ಎಂದು ಸಾಕಷ್ಟು ಬಾರಿ ಬಹಳಷ್ಟು ನಿರ್ಮಾಪಕರು-ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಮಾತಿಗೆ ಈ ಘಟನೆ ಸಾಕ್ಷಿ ಎನ್ನಬಹುದಲ್ಲ! ನೀವೇನಂತೀರಾ?

 

 

Latest Videos
Follow Us:
Download App:
  • android
  • ios