ರಂಗ ಎಸ್‌ಎಸ್‌ಎಲ್‌ಸಿ ಚಿತ್ರೀಕರಣದ ವೇಳೆ ರಮ್ಯಾ ಅವರ ವ್ಯಾಪಕ ಓದು ಮತ್ತು ಸಾಹಿತ್ಯದ ಅರಿವನ್ನು ನಿರ್ದೇಶಕ ಯೋಗರಾಜ್ ಭಟ್ ಶ್ಲಾಘಿಸಿದ್ದಾರೆ. ಮಾರ್ಕ್ವೆಜ್‌ನ ಕೃತಿಗಳ ಬಗ್ಗೆ ಚರ್ಚಿಸಿದ ರಮ್ಯಾ, ಭಾವುಕ ಓದುಗರೆಂದು ಭಟ್‌ ಬಣ್ಣಿಸಿದ್ದಾರೆ. ರಮ್ಯಾ ಒಬ್ಬ ಮಹಾನ್ ನಾಯಕಿ ಮಾತ್ರವಲ್ಲ, ಅದ್ಭುತ ಓದುಗಿಯೂ ಹೌದು ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರು 'ಸ್ಯಾಂಡಲ್‌ವುಡ್ ಕ್ವೀನ್' ಖ್ಯಾತಿಯ ನಟಿ ರಮ್ಯಾ (Sandalwood Queen Ramya) ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಯೋಗರಾಜ್‌ ಭಟ್ ನಿರ್ದೇಶನದ 'ರಂಗ ಎಸ್‌ಎಸ್‌ಎಲ್‌ಸಿ' ಚಿತ್ರದಲ್ಲಿ (Ranga SSLC) ನಟಿ ರಮ್ಯಾ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ನಟಿಸಿರುವ ರಮ್ಯಾ ಬಗ್ಗೆ ಯೋಗರಾಜ್‌ ಭಟ್ ಅವರು ಸೀಕ್ರೆಟ್‌ ಒಂದನ್ನು ಹೇಳಿದ್ದಾರೆ. ಇಷ್ಟು ವರ್ಷಗಳ ಬಳಿಕ ಯೋಗರಾಜ್ ಭಟ್ ಅವರು ನಟಿ ರಮ್ಯಾ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..

'ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್‌ದು 'ಹಂಡ್ರೆಡ್ ಈಯರ್ಸ್ ಆಫ್ ಸಾಲಿಟ್ಯೂಡ್' ಪುಸ್ತಕ ಓದೋ ಟೈಮಲ್ಲಿ 'ರಂಗ ಎಸ್‌ಎಸ್‌ಎಲ್‌ಸಿ'ಯಲ್ಲಿ ಆಕ್ಟ್‌ ಮಾಡ್ತಾ ಇದ್ರು.. ನಾನು ಆ ಪುಸ್ತಕ ಓದಿದ್ದೆ.. ಇವ್ರು ಅದ್ರಲ್ಲಿ ಬ್ರುಗುಂಡಿಯಾ ಫ್ಯಾಮಿಲಿ ಅಂತ ಒಂದು ಫ್ಯಾಮಿಲಿ ಬರುತ್ತೆ.. ನಾನು ಆ ಥರದವ್ನು ಅಂತ ಹೇಳಿದ್ರು.. ನಾನು ಅವ್ರಿಗೆ ನಿಮ್ಗೆ ಆ ಪದ ಎಲ್ಲಿಂದ ಬಂತು ಅಂತ ಕೇಳಿದೆ, ಆಗ ಅವ್ರು ಈ ಮಾರ್ಕ್ವೆಸ್‌ ಬಗ್ಗೆ ಹೇಳಿದ್ರು.. ಅವ್ರು ಓದಿರೋ ಪುಸ್ತಕಗಳು ಮತ್ತು ಅವ್ರಿಗೆ ಇರೋ ತಿಳುವಳಿಕೆ ಬೆಚ್ಚಿಬಿದ್ಬಿಟ್ಟಿದ್ದೆ ನಾನು.. 

ಮತ್ತೆ ಒಂದಾದ ಯೋಗರಾಜ್ ಭಟ್-ಮನೋ ಮೂರ್ತಿ, ಗರಿಗೆದರಿದ ನಿರೀಕ್ಷೆಗೆ ಹೆಸರೇನು ಹೇಳಿ..!?

ನನ್ ಪ್ರಕಾರ, ಅವ್ರು ತುಂಬಾ ದೊಡ್ಡ ನಾಯಕಿ ಮಣಿ ನಮ್ಮ ನಾಡು ನೋಡಿರೋ ನಾಯಕಿ ಮಣಿ! ಬಟ್ ಅದೆಲ್ಲವನ್ನೂ ಮೀರಿ ಆಕೆ ಅದ್ಭುತ ರೀಡರ್‌ ನನ್ಗೆ ಗೊತ್ತಿರೋ ಮಟ್ಟಿಗೆ.. ನಾನು ಕೆಲಸ ಮಾಡಿದೀನಿ ಅವ್ರೊಟ್ಟಿಗೆ, ಹೈಲಿ ಎಮೋಶನಲ್ ರೀಡರ್ ಅವ್ರು..' ಎಂದಿದ್ದಾರೆ ಯೋಗರಾಜ್ ಭಟ್. ಹೌದು, ನಟಿ ರಮ್ಯಾ ಅವರು ಬಹಳಷ್ಟು ಪುಸ್ತಕಗಳನ್ನು ಓದುತ್ತಾ ಇರುತ್ತಾರೆ ಎಂದು ಹಲವರು ಹೇಳುತ್ತಾರೆ. ಶೂಟಿಂಗ್ ಸೆಟ್ಟಲ್ಲಿ, ಟ್ರಾವೆಲ್‌ ಮಾಡ್ತಿರುವಾಗ ಹೀಗೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರು ಬುಕ್ ರೀಡಿಂಗ್ ಮಾಡ್ತಾರೆ ಎಂದು ಹಲವರು ಹೇಳ್ತಾನೆ ಇರ್ತಾರೆ. 

ಇದೀಗ ಈ ಬಗ್ಗೆ ಯೋಗರಾಜ್ ಭಟ್‌ ಅವರೇ ಹೇಳಿದ್ದಾರೆ ಅಂದ್ಮೇಲೆ, ಅದೂ ಅಷ್ಟು ವರ್ಷಗಳ ಹಳೆಯ ರಂಗ ಎಸ್‌ಎಸ್‌ಎಲ್‌ಸಿ ಶೂಟಿಂಗ್ (2004) ಸಮಯದಲ್ಲೇ ಅಂದ್ರೆ ಇದು ನೆಗ್ಲೆಕ್ಟ್ ಮಾಡೋ ವಿಷ್ಯನೇ ಅಲ್ಲ ಬಿಡಿ.. ಅಂದ್ರೆ ನಟಿ ರಮ್ಯಾ ಅವ್ರು ಒಳ್ಳೇ ರೀಡರ್ ಅಂದಹಾಗಾಯ್ತು. ಅದ್ರಲ್ಲೂ ಎಮೋಶನಲ್ ರೀಡರ್ ಅನ್ನೋದು ಇನ್ನೊಂದು ಸ್ಪೆಷಲ್. ಅಂದಹಾಗೆ, ಮೊನ್ನೆ ನಟಿ ರಕ್ಷಿತಾ ತಮ್ಮ ರಾಣಾ ಮದುವೆಗೆ ನಟಿ ರಮ್ಯಾ ಅವರು ಆಗಮಿಸಿ ಮಿಂಚಿನ ಸೆನ್ಸೇಷನ್ ಸೃಷ್ಟಿಸಿದ್ದಾರೆ. ರಮ್ಯಾ ಹೋದರೂ ಬಂದರೂ ಸುದ್ದಿ ಆಗೋದು ಗ್ಯಾರಂಟಿ!

ಆಗಾಗ ಕಾಯಿಲೆ ಬೀಳ್ತಿದ್ದ ರಜನಿಕಾಂತ್‌ ಈಗ ಫಿಟ್‌ ಆಗಿದ್ದು ಹೇಗೆ? ಕೊನೆಗೂ ಸೀಕ್ರೆಟ್ ರಿವೀಲ್!

View post on Instagram