ಜ.8ರಂದು ನಟ ಯಶ್‌ ಅವರ ಹುಟ್ಟುಹಬ್ಬ. ಹೀಗಾಗಿ ಅದೇ ಟೀಸರ್‌ ಬಿಡುಗಡೆ ಆಗಲಿದೆ.

ಒಂದೇ ಒಂದು ಪೋಸ್ಟರ್‌ ಹೊರತಾಗಿ ಬೇರೆ ಯಾವುದೂ ಇದುವರೆಗೂ ‘ಕೆಜಿಎಫ್‌ 2’ ಚಿತ್ರಕ್ಕೆ ಸಂಬಂಧಿಸಿದಂತೆ ಬಿಡುಗಡೆ ಆಗಿಲ್ಲ. ಈ ಕಾರಣಕ್ಕೆ ಟೀಸರ್‌ ಕಡೆಗೆ ಎಲ್ಲರೂ ಗಮನ ಹರಿಸಿದ್ದಾರೆ. ಈ ಟೀಸರ್‌ ಮೂಲಕ ಸಿನಿಮಾ ಮತ್ತಷ್ಟುಸದ್ದು ಮಾಡಲು ಹೊರಟ್ಟಿದ್ದು, ಯಶ್‌ ಅಭಿಮಾನಿಗಳಲ್ಲಿ ಸಂಭ್ರಮ ದುಪ್ಪಟ್ಟು ಹೆಚ್ಚಾಗಿದೆ. ಇದೇ ಸಂಭ್ರಮದಲ್ಲಿ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಖುಷಿಯಾಗಿದೆ.

It's great: ಜಾಹೀರಾತು ಲೋಕದಲ್ಲಿ ಮೋಡಿ ಮಾಡಿದ ರಾಕಿಂಗ್ ಕಪಲ್! 

ಜ.8ರಂದು ಟೀಸರ್‌ ಬರುತ್ತಿರುವ ವಿಷಯ ನಿರ್ದೇಶಕ ಪ್ರಶಾಂತ್‌ ನೀಲ್‌ ಘೋಷಣೆ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಡಬಲ್‌ ಸಂಭ್ರಮ. ಇತ್ತೀಚೆಗಷ್ಟೆಚಿತ್ರದ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಮುಕ್ತಾಯಗೊಂಡಿತು. ‘ಅದೊಂದು ಸಾಮ್ರಾಜ್ಯ. ಅದನ್ನು ಸೃಷ್ಟಿಸಲು ನಾವು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿರಬಹುದು. ಮತ್ತಷ್ಟುಬಲಿಷ್ಠವಾಗಿ, ದೊಡ್ಡದಾಗಿ ಬರುತ್ತಿದ್ದೇವೆ’ ಎಂದು ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.