ಯಜಮಾನ ಚಿತ್ರದ ಯಶಸ್ಸಿನಿಂದ ಪ್ರಭಾವಿತರಾದ ಡಾ. ರಾಜ್‌ಕುಮಾರ್, ನಿರ್ಮಾಪಕ ರೆಹಮಾನ್ ಮೂಲಕ ವಿಷ್ಣುವರ್ಧನ್ ಅವರನ್ನು ಹೊಗಳಿ ಭೇಟಿಯಾಗಲು ಬಯಸಿದರು. ವಿಷ್ಣುವರ್ಧನ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ತಾವೇ ಬರುವುದಾಗಿ ಹೇಳಿದರೂ, ಅಭಿಮಾನಿಗಳ ಮಧ್ಯದ ಭಿನ್ನಾಭಿಪ್ರಾಯದಿಂದ ಆ ಭೇಟಿ ಸಾಧ್ಯವಾಗಲಿಲ್ಲ.

ವಿಷ್ಣುವರ್ಧನ್ (Vishnuvardhan) ನಟನೆಯ 'ಯಜಮಾನ' ಸಿನಿಮಾ (Yajamana) ನಿರ್ಮಾಪಕರಾದ ರೆಹಮಾನ್ (Rehaman) ಅವರು ಡಾ ರಾಜ್‌ಕುಮಾರ್ (Dr Rajkumar) ಹಾಗೂ ವಿಷ್ಣುವರ್ಧನ್ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ ರೆಹಮಾನ್ ಅವರು 'ನಟ ವಿಷ್ಣುವರ್ಧನ್ ಯಜಮಾನ ಸಿನಿಮಾ ಸೂಪರ್ ಹಿಟ್ ಆಯ್ತು. ಅದರಲ್ಲಿ ನಟ ವಿಷ್ಣು ಅಭಿನಯ ಮನಮುಟ್ಟುವಂತಿರೋದು ಎಲ್ಲರಿಗೂ ಗೊತ್ತು. ಈ ಸಂಗತಿ ಕರ್ನಾಟಕದ ಮನೆಮನೆಯನ್ನೂ ತಲುಪಿ, ಅದು ಡಾ ರಾಜ್‌ಕುಮಾರ್ ಕಿವಿಗೂ ಬಿದ್ದಿತ್ತು. ತಕ್ಷಣ ಡಾ ರಾಜ್‌ ಅವರು ನಿರ್ಮಾಪಕ ರೆಹಮಾನ್ ಅವರಿಗೆ ಕಾಲ್ ಮಾಡಿದ್ರಂತೆ. 

ರೆಹಮಾನ್ ಅವ್ರಿಗೆ ಕಾಲ್ ಮಾಡಿದ ಅಣ್ಣಾವ್ರು, 'ನಾನು ಯಜಮಾನ ಸಿನಿಮಾ ನೋಡ್ಲೇಬೇಕು. ಯಾವಾಗ ತೋರಿಸ್ತೀರ' ಎಂದ್ರು. ಆಗ ನಾನು 'ನೀವು ಹೇಳಿ ಯಾವಾಗ ಬರ್ತೀರ ಅಂತ, ನಿಮ್ಗೆ ವ್ಯವಸ್ಥೆ ಮಾಡ್ತೀನಿ' ಅಂದೆ, ಸರಿ ಭಾನುವಾರ ಡಾ ರಾಜ್‌ಕುಮಾರ್ ಅವರ ಇಡೀ ಫ್ಯಾಮಿಲಿ ಸಿನಿಮಾ ನೋಡೋಕೆ ಬಂದಿತ್ತು. ನಾನು ಬಾದಾಮಿ ಹೌಸ್‌ನಲ್ಲಿ ಅವ್ರಿಗೆ ಸಿನಿಮಾಗೆ ವ್ಯವಸ್ಥೆ ಮಾಡಿದ್ದೆ. ಸಿನಿಮಾ ನೋಡಿ, ಅವ್ರಿಬ್ರೂ ಅಣ್ಣ-ತಮ್ಮ (ಡಾ ರಾಜ್‌ಕುಮಾರ್-ವರದಪ್ಪ) ಗೋಳೋ ಅಂತ ಅಳ್ತಾ ಇದ್ರು.. 

ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!

ಸಿನಿಮಾದಲ್ಲಿ ವಿಷ್ಣುವರ್ಧನ್ ನಟನೆ ನೋಡಿ ಡಾ ರಾಜ್‌ಕುಮಾರ್‌ಗೆ ತುಂಬಾ ಖುಷಿಯಾಗಿತ್ತು. ತಕ್ಷಣ ಅವ್ರು ನಾನು ಈಗ್ಲೇ ವಿಷ್ಣುವರ್ಧನ್ ಜೊತೆ ಮಾತಾಡ್ಲೇಬೇಕು, ಫೋನ್ ಮಾಡಿ ಅಂದ್ರು.. ನಾನು ಕಾಲ್ ಮಾಡಿ ಸ್ಪೀಕರ್ ಆನ್‌ಮಾಡಿದೆ. ಆ ಕಡೆಯಿಂದ ವಿಷ್ಣುವರ್ಧನ್, ಈ ಕಡೆಯಿಂದ ಡಾ ರಾಜ್‌ಕುಮಾರ್ ಇಬ್ರೂ ತುಂಬಾ ಹೊತ್ತು ಮಾತಾಡಿದ್ರು.. ಡಾ ರಾಜ್‌ ಅವ್ರು 'ವಿಷ್ಣು, ತುಂಬಾ ಚೆನ್ನಾಗಿ ಮಾಡಿದೀರ.. ನಾನು ಮಾಡಿದ್ರೂ ಇಷ್ಟು ಚೆನ್ನಾಗಿ ಮಾಡೋಕೆ ಆಗ್ತಿರ್ಲಿಲ್ಲ. ನಾನು ಈಗ್ಲೇ ನಿಮ್ಮನ್ನ ನೋಡ್ಬೇಕು' ಅಂದ್ರು.

ಅತ್ತ ಕಡೆಯಿಂದ ವಿಷ್ಣು ಅವ್ರು 'ಅಯ್ಯೋ, ಎಲ್ಲಾದ್ರೂ ಉಂಟೇ? ದೇವ್ರು ಭಕ್ತನಾ ಹುಡ್ಕೊಂಡು ಬರ್ಬಾದು.. ಭಕ್ತನೇ ದೇವ್ರ ಹತ್ರ ಹೋಗ್ಬೇಕು.. ನಾನೇ ನಿಮ್ಮನೆಗೆ ಬರ್ತೀನಿ.. ಬೆಂಗಳೂರಿಗೆ ಬಂದ ತಕ್ಷಣ ನಾನೇ ಬರ್ತೀನಿ ' ಅಂದ್ರು ವಿಷ್ಣುವರ್ಧನ್. ಆದ್ರೆ, ಅವ್ರಿಬ್ರ ಅಭಿಮಾನಿಗಳ ಮಧ್ಯೆ ಏನಿತ್ತು ಆಗಾಂತ ಎಲ್ರಿಗೂ ಗೊತ್ತಲ್ಲ, ಸೋ, ಆವತ್ತು ಅವರಿಬ್ಬರ ಭೇಟಿ ಆಗ್ಲೇ ಇಲ್ಲ. ಆವತ್ತು ಅಂತ ಅಲ್ಲ, ಆಮೇಲೆ ಮತ್ತೆ ಯಾವತ್ತೂ ಅವರಿಬ್ಬರು ಭೇಟಿ ಆಗ್ಲೇ ಇಲ್ಲ ಅನ್ಸುತ್ತೆ ನಂಗೆ ಗೊತ್ತಿದ್ದ ಹಾಗೆ..'ಎಂದಿದ್ದಾರೆ ಕನ್ನಡ ಸಿನಿಮಾ ನಿರ್ಮಾಪಕರಾದ ರೆಹಮಾನ್.

ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕಾಗಲ್ಲ, ಗಂಗೆಯಲ್ಲಿ ಮಿಂದ್ರೆ ಪಾಪ ಹೋಗಲ್ಲ: ನಟ ಕಿಶೋರ್

ರಾಜ್, ವಿಷ್ಣು ಮತ್ತೆ ಭೇಟಿ ಆಗ್ಲೇ ಇಲ್ಲ. ಯಾಕಂದ್ರೆ? | Dr Rajkumar | Dr vishnuvardhan | @DailyMadhyama