ಬೆಂಗಳೂರು (ಅ. 19): ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಬಯಲಾಟದ ಭೀಮಣ್ಣ’ ಚಿತ್ರವು ಪ್ರತಿಷ್ಟಿತ ಕೇರಳ ಅಂತಾರಾಷ್ಟ್ರೀಯ 11 ನೇ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಕೇರಳದ ಎರ್ನಾಕುಲಂನಲ್ಲಿ  ಶುಕ್ರವಾರ(ಅ.18) ದಿಂದಲೇ ಚಿತ್ರೋತ್ಸವ ಆರಂಭವಾಗಿದ್ದು, ಅ.22 ರವರೆಗೂ ನಡೆಯಲಿದೆ.

ಈ ಚಿತ್ರೋತ್ಸವದಲ್ಲಿ ಶನಿವಾರ(ಅ.19) ಬರಗೂರು ರಾಮಚಂದ್ರಪ್ಪ ನಿರ್ದೇಶನದ ಬಯಲಾಟದ ಭೀಮಣ್ಣ ಚಿತ್ರ ಪ್ರದರ್ಶನಗೊಂಡಿದೆ. ‘ಬಯಲಾಟದ ಭೀಮಣ್ಣ’ ಚಿತ್ರವು ಬರಗೂರು ಅವರೇ ಬರೆದ ಕತೆಯಾಧರಿತ ಚಿತ್ರ. ಇದು ಬಯಲಾಟದ ಕಲಾವಿದನೊಬ್ಬನ ಕತೆ.

ಸುಂದರ ರಾಜ್, ಪ್ರಮೀಳಾ ಜೋಷಾಯ್, ಸ್ಪರ್ಷ ರೇಖಾ, ಹನುಮಂತೇ ಗೌಡ, ರಾಧಾ ರಾಮಚಂದ್ರ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ಇದು ಪ್ರದರ್ಶನ ಕಂಡಿದೆ. ಇದೀಗ ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದು, ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ನಿರ್ದೇಶಕರಾದ ಸಾಹಿತಿ ಬರಗೂರು ರಾಮಚಂದ್ರಪ್ಪ.