ಸಾಯಿ ಪಲ್ಲವಿಯನ್ನು ರಾಮಾಯಣಕ್ಕೆ ಆಯ್ಕೆ ಮಾಡಿದ್ದು ಯಾರು, ನಟ ಯಶ್ ಕೈವಾಡ ಇದ್ಯಾ?
ಬಾಲಿವುಡ್ ಹೀರೋ ರಣಬೀರ್ ಕಪೂರ್ ಎದುರು ಸೌತ್ ಬ್ಯೂಟಿಗೆ ಹಿಂದಿ ಚಿತ್ರಂಗದವರು ಮಣೆ ಹಾಕಿದ್ದಾದರೂ ಹೇಗೆ ಎಂಬ ಕುತೂಹಲ ಕೆಲವರನ್ನು ಹೆಚ್ಚಾಗಿ ಕಾಡುತ್ತಿದೆ. ಈ ಪ್ರಶ್ನೆಯನ್ನು ನಟ ಯಶ್ ಅವರಿಗೆ ಕೇಳಿಯೇಬಿಟ್ಟಿದ್ದಾರೆ, ಸಿನಿಪ್ರೇಕ್ಷಕರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ..
ಕನ್ನಡದ ಪ್ಯಾನ್ ಇಂಡಿಯಾ 'ಕೆಜಿಎಫ್' ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ರಾಮಾಯಣ ಚಿತ್ರದಲ್ಲಿ ಪಾತ್ರ ಮಾಡುತ್ತಿರುವುದು ಗೊತ್ತೇ ಇದೆ. ಕೇವಲ ಪಾತ್ರ ಮಾಡುತ್ತಿರುವುದಷ್ಟೇ ಅಲ್ಲ, ಆ ಚಿತ್ರಕ್ಕೆ ಅವರು ಅವರು ನಿರ್ಮಾಣದಲ್ಲಿ ಕೂಡ ಕೈ ಜೋಡಿಸಿದ್ದಾರೆ. ರಾಮಾಯಣ (Ramayana) ಚಿತ್ರದಲ್ಲಿ ನಟ ಯಶ್ ಅವರು 'ರಾವಣ'ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮನಾಗಿ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ನಟಿಸುತ್ತಿದ್ದು, ಸೀತೆಯಾಗಿ ನಟಿ ಸಾಯಿ ಪಲ್ಲವಿ (Sai Pallavi) ಪಾತ್ರ ಪೋಷಣೆ ಮಾಡುತ್ತಿದ್ದಾರೆ.
ಇದೀಗ ಹಲವರಲ್ಲಿ ಕುತೂಹಲ ಮೂಡಿರುವ ಸಂಗತಿ ಎಂದರೆ, ರಾಮಾಯಣ ಚಿತ್ರಕ್ಕೆ ಸೀತೆಯಾಗಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದು ಯಾರು ಎಂಬುದು! ಏಕೆಂದರೆ, ಇಲ್ಲಿಯರೆಗೂ ಯಾವುದೇ ಬಾಲಿವುಡ್ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಿಲ್ಲ. ಸೌತ್ ಸಿನಿರಂಗದಲ್ಲಿ ಸಾಯಿ ಪಲ್ಲವಿ ಸಖತ್ ಫೇಮಸ್, ಬಹಳಷ್ಟು ಅಭಿಮಾನಿಗಳೂ ಇದ್ದಾರೆ. ಆದರೆ, ಇದ್ದಕ್ಕಿದ್ದಂತೆ ಬಾಲಿವುಡ್ ಮೂಲದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದರೆ ನಂಬಲಿಕ್ಕೆ ಕೆಲವರಿಗೆ ಕಷ್ಟವಾಗಿದೆ.
ಕನ್ನಡವೇ ಸರ್ವಸ್ವ ಅಂತಿದ್ದ ಡಾ ರಾಜ್ ಒಂದು ತೆಲುಗು ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಯಾರು?
ಅದರಲ್ಲೂ ಬಾಲಿವುಡ್ ಹೀರೋ ರಣಬೀರ್ ಕಪೂರ್ ಎದುರು ಸೌತ್ ಬ್ಯೂಟಿಗೆ ಹಿಂದಿ ಚಿತ್ರಂಗದವರು ಮಣೆ ಹಾಕಿದ್ದಾದರೂ ಹೇಗೆ ಎಂಬ ಕುತೂಹಲ ಕೆಲವರನ್ನು ಹೆಚ್ಚಾಗಿ ಕಾಡುತ್ತಿದೆ. ಈ ಪ್ರಶ್ನೆಯನ್ನು ನಟ ಯಶ್ ಅವರಿಗೆ ಕೇಳಿಯೇಬಿಟ್ಟಿದ್ದಾರೆ, ಸಿನಿಪ್ರೇಕ್ಷಕರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ ಮೀಡಿಯಾ ಮಂದಿ. ಅದಕ್ಕೆ ನಟ ರಾಕಿಂಗ್ ಸ್ಟಾರ್ ಅವರು ಉತ್ತರಿಸಿದ್ದಾರೆ. ಹಾಗಿದ್ದರೆ, ನಟ ಯಶ್ ಅದೇನು ಹೇಳಿದ್ದಾರೆ, ನೋಡಿ..
'ಸೀತೆ ಪಾತ್ರವನ್ನು, ಅದರಲ್ಲಿ ನಟಿಸಬೇಕಾದ ನಟಿಯನ್ನು ನಾವೆಲ್ಲರೂ ಸೇರಿ ನಿರ್ಧರಿಸಿದ್ದು' ಎಂದಿದ್ದಾರೆ ನಟ ಯಶ್. ರಾಮಾಯಣ ಚಿತ್ರದ ನಿರ್ದೇಶಕರಾಗಿರುವ ನಿತೀಶ್ ತಿವಾರಿಯವರ ಮೊದಲ ಆಯ್ಕೆಯೇ ನಟಿ ಸಾಯಿಪಲ್ಲವಿ. ಅವರೊಬ್ಬರು ಅತ್ಯುತ್ತಮ ನಟಿ ಆಗಿರುವುದರಿಂದ, ನಿರ್ದೇಶಕರ ಆಯ್ಕೆಯನ್ನು ನಿರ್ಮಾಪಕನೂ ಆಗಿರುವ ನಾನೂ ಸೇರಿದಂತೆ ಇಡೀ ಟೀಮ್ ಅನುಮೋದಿಸಿದ್ದೇವೆ' ಎಂದಿದ್ದಾರೆ ನಟ ಯಶ್. ಸಾಯಿಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾನು ರಾವಣನಾಗಿ ನಟಿಸಲಿದ್ದೇನೆ' ಎಂದಿದ್ದಾರೆ.
ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿ ಸಂಘಗಳಿರುವ ಕನ್ನಡದ ಏಕೈಕ ನಟ ಯಾರು ಗೊತ್ತೇ?
ಅದೆಲ್ಲವೂ ಓಕೆ, ಆದರೆ 'ನೀವು ರಾಮನ ಪಾತ್ರ ಬಿಟ್ಟು ರಾವಣನ ಪಾತ್ರ ಒಪ್ಪಿಕೊಂಡಿದ್ದು ಯಾಕೆ..?' ಎಂಬ ಪ್ರಶ್ನೆಗೆ ಸಹ ನಟ ಯಶ್ ಉತ್ತರಿಸಿದ್ದಾರೆ. 'ರಾವಣನ ಪಾತ್ರ ನನ್ನ ಪ್ರಕಾರ ತುಂಬಾ ಆಕರ್ಷಣೀಯವಾದ ಪಾತ್ರ. ಬೇರೆ ಯಾವದೇ ಪಾತ್ರದಲ್ಲಿ ನೀವು ನಟಿಸುತ್ತೀರಾ ಎಂದು ನನ್ನನ್ನು ಕೇಳಿದ್ದರೆ ನಾನು ಖಂಡಿತವಾಗಿಯೂ ಆಗಲ್ಲ ಎನ್ನುತ್ತಿದ್ದೆ. ಒಬ್ಬ ನಟನಾಗಿ ರಾವಣನ ಪಾತ್ರ ಮಾಡಲು ನಾನು ಉತ್ಸುಕನಾಗಿದ್ದೇನೆ. ಈ ಪಾತ್ರದ ಛಾಯೆಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ನಾನು ಪ್ರೀತಿಸುತ್ತೇನೆ.
ಅಷ್ಟಕ್ಕೂ, ಸಿನಿಮಾದಲ್ಲಿ ಪಾತ್ರ ಯಾವುದು ಎಂಬುದು ಮುಖ್ಯವಲ್ಲ. ವಿಲನ್ ಆಗಿರಲಿ ಇಲ್ಲ ನಾಯಕನಾಗಿರಲಿ, ಪಾತ್ರಕ್ಕೆ ತೂಕವಿರಬೇಕು, ಅದು ಸತ್ವಯುತವಾಗಿರಬೇಕು. ಸಿನಿಪ್ರೇಕ್ಷಕರೂ ಅಷ್ಟೇ, ಒಂದು ಪಾತ್ರವನ್ನು ಪಾತ್ರದಂತೆಯೇ ಪರಿಗಣಿಸಬೇಕು. ಜೊತೆಗೆ, ರಾಮನ ಪಾತ್ರ ಆಯ್ಕೆ ನಾನು ಈ ಸಿನಿಮಾಗೆ ಕೈ ಜೋಡಿಸುವ ಮೊದಲೇ ಆಗಿತ್ತು. ' ಎಂದಿದ್ದಾರೆ ಕನ್ನಡ ಮೂಲದ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್.
ಒಬ್ಬನು ಹೋದ್ರೆ ಮತ್ತೊಬ್ಬನ ಕಥೆ ಮುಗೀತು; ಯಾಕೆ ಹಾಗೆ ಅಂದಿದ್ರು ಶಂಕರ್ ನಾಗ್?
'ಯಾವುದೇ ಪಾತ್ರವನ್ನು ಸರಿಯಾಗಿ ಪ್ರೆಸೆಂಟ್ ಮಾಡದಿದ್ದರೆ ಚಿತ್ರ ಯಶಸ್ವಿಯಾಗುವುದಿಲ್ಲ. ಇಂತಹ ಭಾರೀ ಬಜೆಟ್ ಚಿತ್ರಕ್ಕೆ ಪ್ರತಿಭಾವಂತ ಕಲಾವಿದರು ಒಂದಾಗುವುದು ಮುಖ್ಯ' ಎಂದಿರುವ ಯಶ್, ಮುಂದೆ ಸಹ ತಾವು ನಿರ್ಮಾಪಕರಾಗಿ ಮುಂದುವರೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, 'ದೊಡ್ಡ ಬಜೆಟ್ ಸಿನಿಮಾ ಮಾಡಲು ದೊಡ್ಡ ಟೀಮ್ ಬೇಕು. ಈ ಪ್ರಾಜೆಕ್ಟ್ ನಲ್ಲಿ ನಾವೆಲ್ಲರೂ ನಮ್ಮದೇ ಸ್ಟಾರ್ ಡಮ್ ಮೇಲೆ ಕೆಲಸ ಮಾಡಬೇಕು' ಎಂದಿದ್ದಾರೆ ಯಶ್.