ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದವರು ಸಂಯುಕ್ತಾ ಹೆಗಡೆ. ಅದ್ಯಾಕೋ ಕಿರಿಕ್ ಅನ್ನೋದು ಈ ಹುಡುಗಿ ಹೆಸರಿನ ಜೊತೆಗೆ ಪರ್ಮನೆಂಟಾಗಿ ಅಂಟಿಕೊಂಡು ಬಿಡ್ತು. ಕಾರಣ ಈಕೆಯ ಆಟಿಟ್ಯೂಡ್ ಅಂತಾರೆ ಈಕೆಯ ಜೊತೆಗೆ ಕೆಲಸ ಮಾಡಿದವರು. ಮೊದಲ ಸಿನಿಮಾವೇ ಸಕ್ಸಸ್ ಆದದ್ದು ಇದಕ್ಕೆ ಕಾರಣ ಇದ್ದಿರಲೂ ಬಹುದು. ಇಲ್ಲಾ ಆಕೆಯ ಸ್ವಭಾವವೇ ಆ ಥರ ಆಗಿರಲೂ ಬಹುದು. ಆದರೆ ಹಿಂದಿ ರಿಯಾಲಿಟಿ ಶೋಗಳಲ್ಲಿ ಅನ್ಯಭಾಷೆಯಲ್ಲಿ ಚಿತ್ರಗಳಲ್ಲಿ ಕೆಲಸ ಮಾಡುವಾಗ ಸಾಬೀತಿನಲ್ಲಿರುವ ಈ ಹುಡುಗಿ ಕನ್ನಡ ಸಿನಿಮಾ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಕಿರಿಕ್ ಮಾಡ್ತಾರೆ ಅನ್ನೋ ಪ್ರಶ್ನೆ ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. 

ಇರಲಿ, ಈಗ ವಿಷಯ ಇದಲ್ಲ. ಉಳಿದೆಲ್ಲ ಟೈಮ್‌ನಲ್ಲಿ ಎಷ್ಟೇ ರಾಂಗ್ ಆಗಿ ಆಡಿದ್ರೂ ಲಾಕ್ ಡೌನ್ ಟೈಮ್‌ನಲ್ಲಿ ಮಾತ್ರ ಮನೇಲೇ ಕುಂತು ಅಪ್ಪ ಅಮ್ಮ ನಾಯಿ ಜೊತೆಗೆ ಸಂಯುಕ್ತಾ ಟೈಮ್‌ಪಾಸ್ ಮಾಡ್ತಿದ್ದಾರೆ. ಅವರ ಇನ್‌ಸ್ಟಾಗ್ರಾಂ ತುಂಬಾ ಲಾಕ್‌ಡೌನ್‌ ಟೈಮಿನ ನಾನಾ ಆಕ್ಟಿವಿಟಿಗಳ ಫೋಟೋಗಳೇ ತುಂಬಿ ಹೋಗಿವೆ. 

 

 
 
 
 
 
 
 
 
 
 
 
 
 

The Brighter the Light The Darker the Shadows . . . #blackandwhite #rawandreal #samyukthahegde

A post shared by Samyuktha Hegde (@samyuktha_hegde) on Apr 27, 2020 at 11:58pm PDT

 


ಅದರಲ್ಲಿ ಅಪ್ಪ ಅಮ್ಮನ ಕಿಸ್ ಮಾಡೋ ಬ್ಯಾಗ್ರೌಂಡ್ ನಲ್ಲಿ ಈಕೆಯ ಸೆಲ್ಫಿ ಒಂದಿದೆ. ಹೀಗೆಲ್ಲ ಫೋಟೋ ಕ್ಲಿಕ್ಕಿಸುವ ವಿಚಿತ್ರ ಐಡಿಯಾ ಸಂಯುಕ್ತಾಗೆ ಹೇಗೆ ಬಂತು ಅನ್ನುವ ಪ್ರಶ್ನೆ ಹಲವು ನೆಟಿಜನ್ ಗಳದ್ದು. ಆ ಬಡಪಾಯಿಗಳು ಇಂಥಾ ಮಗಳನ್ನು ಹೆತ್ತದಕ್ಕೆ ಇನ್ನೇನೆಲ್ಲ ಸರ್ಕಸ್ ಮಾಡ್ಬೇಕಾಗುತ್ತೋ ಅಂತ ಕೆಲವರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಅಮ್ಮನ ಜೊತೆಗೆ ಸಖತ್ ಫನ್ನಿ ಗೇಮ್‌ಗಳನ್ನು ಆಡ್ತಿರೋ ವೀಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ. 

ಏನೇ ನೆಗೆಟಿವ್ ಅಂಶಗಳಿದ್ದರೂ ಈ ಹುಡುಗಿಯ ಡ್ಯಾನ್ಸ್ ಪ್ರೀತಿಯನ್ನು ಮೆಚ್ಚಲೇ ಬೇಕು. ಬೆಲ್ಲಿ ಡ್ಯಾನ್ಸ್‌ ಮಾಡಿ ಶಹಭಾಸ್ ಅನಿಸಿಕೊಂಡ ಸಂಯುಕ್ತಾ ಆಮೇಲಾಮೇಲೆ ಮೈಕಲ್ ಜಾಕ್ಸನ್ ಥರ ಎಲ್ಲಾ ಸ್ಟೆಪ್ ಹಾಕಿ ಕುಣಿದಳು. ಲಕ್ಷಾಂತರ ಅಭಿಮಾನಿಗಳು ಈ ವೀಡಿಯೋಗಳಿಗೆ ಲೈಕ್ ಒತ್ತಿದರು. ಲಾಕ್‌‌ಡೌನ್‌ನ ಮೊದ ಮೊದಲಿನ ದಿನಗಳು ಹಾಗೆ ಕಳೆದವು. ಆಮೇಲಾಮೇಲೆ ವರ್ಕೌಟ್ ವೀಡಿಯೋಗಳು, ಅಪ್ಪ ಅಮ್ಮನ ಜೊತೆಗೆ ಫನ್ನಿಯಾಗಿ ಕಳೆದ ಕ್ಷಣಗಳು, ನಾಯಿ ಜೊತೆಗೆ ಫೋಸ್ ಎಲ್ಲ ಒಂದಾದ ಮೇಲೊಂದರಂತೆ ಇನ್ ಸ್ಟಾ ಅಕೌಂಟಿಗೆ ಬಂದು ಬೀಳಲಾರಂಭಿಸಿದವು. 

 

ಪೇಪರ್ ಸುತ್ತಿಕೊಂಡ ಪಾಯಲ್ ನೋಡ್ರಪ್ಪಾ, ಏನಪ್ಪಾ ಇದು ಹೊಸ ಚಾಲೆಂಜಾ! 

ಈಗ ಸದ್ಯ ಕೆಲವೇ ಗಂಟೆಯ ಹಿಂದೆ ಪೋಸ್ಟ್ ಮಾಡಿದ ಸಂಯುಕ್ತಾ ಪೋಟೋ ಸಖತ್ ಹಾಟ್ ಆಗಿದೆ. ಮಾಡ್, ಬಿಂದಾಸ್ ಅಂತೆಲ್ಲ ಏನೇನೋ ಕ್ಯಾಪ್ಶನ್‌ ಕೊಡಬಹುದಾದಂಥಾ ಫೋಟೋ. ಕ್ರಿಯೇಟಿವ್ ಹುಡುಗಿ ಸಂಯುಕ್ತಾ ಈ ಬ್ಲ್ಯಾಕ್ ಆಂಡ್ ವೈಟ್ ಫೋಟೋಗೆ ‘ರಾ ಆಂಡ್ ರಿಯಲ್‌’ ಅಂತ ಹೆಸರು ಕೊಟ್ಟಿದ್ದಾಳೆ. ಜೊತೆಗೆ ಕತ್ತಲೆ, ಬೆಳಕಿನ ಬಗೆಗೂ ಕೋಟ್ಸ್‌ ಹಾಕಿಕೊಂಡಿದ್ದಾಳೆ. ಫೋಟೋ ಪೋಸ್ಟ್ ಮಾಡಿದ ಒಂದು ಗಂಟೆಯಲ್ಲೇ ಹತ್ರತ್ರ ಇಪ್ಪತ್ತೆಂಟು ಸಾವಿರ ಜನ ಇದನ್ನು ಲೈಕ್ ಮಾಡಿದ್ದಾರೆ. ‘ತುಂಬಾ ಹಾಟ್ ಆಗಿ ಕಾಣ್ತಿದ್ದೀರಾ’ ‘ಕ್ಯೂಟ್’ ಅಂತೆಲ್ಲಾ ಕಮೆಂಟ್ ಬರುವ ಜೊತೆಗೆ ಕೆಲವರು ‘ನಿಮಗೊಳ್ಳೆಯ ಫ್ಯೂಚರ್ ಇದೆ’ ಅಂತಲೂ ಕಮೆಂಟ್ ಮಾಡಿದ್ದಾರೆ. ಅಶ್ಲೀಲ ಕಮೆಂಟ್ ಗಳೂ ಒಂದಿಷ್ಟಿವೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. 

ಅಬ್ಬಬ್ಬಾ ! ಬಾಹುಬಲಿ-2ಗೆ ಮೂರು ವರ್ಷ; ಫ್ಯಾನ್ಸ್ ಗೆ ಹಬ್ಬವೋ ಹಬ್ಬ 

ಆದರೆ ಬೆರಳೆಣಿಕೆಯ ಸಿನಿಮಾ, ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದೇ ಸಂಯುಕ್ತಾಗೆ ಈ ಪರಿ ಫ್ಯಾನ್ ಗಳು ಸೃಷ್ಟಿಯಾದ್ರಾ, ಅಥವಾ ನೆಗೆಟಿವ್ ಪಬ್ಲಿಸಿಟಿ ಈಕೆಗೆ ವರವಾಯ್ತಾ ಅನ್ನುವ ಕನ್‌ ಫ್ಯೂಶನ್ಸ್ ಕೆಲವರಿಗಿದೆ. ಅದನ್ನೆಲ್ಲ ಹೊರತುಪಡಿಸಿ ನೋಡಿದರೆ, ಹಾಡು ಡ್ಯಾನ್ಸ್ ಗಳಲ್ಲಿ ಮೈಮರೆಯುವ, ಬದುಕನ್ನು ಇಂಚಿಂಚಾಗಿ ಸವಿಯುತ್ತೇನೆ ಅನ್ನುವ ಹಂಬಲದಲ್ಲಿರುವ ಈ ಬಿಂದಾಸ್ ಹುಡುಗಿಗೆ ಆಲ್ ದಿ ಬೆಸ್ಟ್.