ಅ..ಅರಸ, ಆ ..ಆನೆ ...’ ಎಂದು ಶುರುವಾಗುವ ಹಾಡಿಗೆ ಅನೀಶ್ ಚೆರಿಯನ್ ಸಂಗೀತ ನೀಡಿದ್ದು, ಅನನ್ಯ ಭಟ್ ಹಾಡಿದ್ದಾರೆ. ಅವರಿಗೆ ನಿರ್ದೇಶಕ ವಿರೇನ್ ಸಾಗರ್ ಸೇರಿ ಹಲವರು ಸಾಥ್ ನೀಡಿದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಈಗ ಚಿತ್ರದ ರಿಲೀಸ್ಗೆ ಸಿದ್ಧತೆ ನಡೆಸಿದೆ. ಸದ್ಯಕ್ಕೆ ಚಿತ್ರ ತಂಡ ಪ್ರಮೋಷನ್ ಚಟುವಟಿಕೆಗಳಲ್ಲಿ ಬ್ಯುಸಿ ಆಗಿದೆ.

'ಮುಂದಿನ ನಿಲ್ದಾಣ'ಕ್ಕೆ 'U-ಟರ್ನ್' ತೆಗೆದುಕೊಂಡ ರಾಧಿಕಾ!

ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಮತ್ತು ವಿಶಿಷ್ಟ ಪ್ರಯೋಗದ ಚಿತ್ರ. ನಿರ್ದೇಶಕ ವಿರೇನ್ ಸಾಗರ್ ಬಗಾಡೆ ಹೇಳುವ ಹಾಗೆ, ಉತ್ತರ ಕರ್ನಾಟಕದಲ್ಲಿನ ಪ್ರವಾಹ ಮತ್ತು ಅಲ್ಲಿನ ಸರ್ಕಾರಿ ಶಾಲೆಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಿರುವ ಕತೆಯಿದು. ಸರ್ಕಾರಿ ಶಾಲೆಗೆ ಹೋಗುವ ಇಬ್ಬರು ಗೆಳೆಯರು.

 

ಅವರಲ್ಲಿ ಒಬ್ಬಾತನ ಶಾಲೆಯ ಖರ್ಚುವೆಚ್ಚಕ್ಕೆ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಿಹಿಸುವುದು ಕತೆಯ ತಿರುಳು. ಅದರೊಟ್ಟಿಗೆ ಸರ್ಕಾರಿ ಶಾಲೆಗಳ ಉಳಿವು, ಬಡ ಮಕ್ಕಳ ಓದಿನ ಪರಿಸ್ಥಿತಿಗಳನ್ನು ತೋರಿಸಲಾಗಿದೆ. ಹಾಗಾಗಿ ಇದು ಎಲ್ಲರಿಗೂ ಇಷ್ಟವಾಗುವ ಸಿನಿಮಾ ಆಗುತ್ತದೆ ಎನ್ನುವ ವಿಶ್ವಾಸ ಅವರದ್ದು.  ಭಜರಂಗ ಸಿನಿಮಾ ಬ್ಯಾನರ್‌ನಲ್ಲಿ ರಜನಿಕಾಂತ್ ರಾವ್ ದಳ್ವಿ, ಮಂಜುನಾಥ್ ಹಾಗೂ ಎಸ್ . ಮಂಜುನಾಥ್ ಬಗಾಡೆ ನಿರ್ಮಾಣ ಮಾಡಿದ್ದು, ವಿರೇನ್ ಸಾಗರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಸಮರ್ಥ್ ಆಶಿ, ಪ್ರಣೀಲ್ ನಾಡಿಗೇರ, ಶ್ರೇಯಾ ಹರಿಹರ ಹಾಗೂ ಪ್ರಭು ಹಂಚಿನಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನಿರ್ದೇಶಕ ವಿರೇನ್ ಅವರೇ ಕತೆ, ಚಿತ್ರಕತೆ ಬರೆದಿದ್ದಾರೆ. ವಿನೋದ್ ಬಗಾಡೆ ಸಾಥ್ ನೀಡಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.