ರವಿಚಂದ್ರನ್ ಕಿರಿಯ ಪುತ್ರ ಚಿತ್ರರಂಗ ಪ್ರವೇಶ!

ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ವಿಕ್ರಮ್ ಮೊದಲ ಚಿತ್ರಕ್ಕೆ ಮಾರ್ಚ್ 1ರಿಂದ ಹಾಡುಗಳ ಧ್ವನಿ ಮುದ್ರಣ ಕೆಲಸ ಶುರುವಾಗುತ್ತಿದೆ.

 

Vikram Ravichandran to debut in sandalwood

ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಬೆಳ್ಳಿತೆರೆ ಎಂಟ್ರಿಯ ಬಗೆಗಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ವಿಕ್ರಮ್ ಇದೇ ವರ್ಷ ಹೀರೋ ಆಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ನಿರ್ದೇಶಕ ಸಹನಾ ಮೂರ್ತಿ ಹಾಗೂ ವಿಕ್ರಮ್ ರವಿಚಂದ್ರನ್ ಕಾಂಬಿನೇಷನ್ ಸಿನಿಮಾಕ್ಕೆ ಚಾಲನೆ ಸಿಕ್ಕಿದೆ. ಸದ್ಯಕ್ಕೀಗ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ವಿಕ್ರಮ್ ಮೊದಲ ಚಿತ್ರಕ್ಕೆ ಮಾರ್ಚ್ 1ರಿಂದ ಹಾಡುಗಳ ಧ್ವನಿ ಮುದ್ರಣ ಕೆಲಸ ಶುರುವಾಗುತ್ತಿದೆ. 

ಮಾರ್ಚ್ 1ರನಂತರ ಚಿತ್ರದ ಮುಹೂರ್ತ ಮತ್ತು ಚಿತ್ರೀಕರಣಕ್ಕೆ ದಿನಾಂಕ ಫಿಕ್ಸ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಗೌರಿ ಎಂಟರ್‌ಟೈನರ್ ಮೂಲಕ ಸೋಮಣ್ಣ ಹಾಗೂ ಸುರೇಶ್ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ಈ ಚಿತ್ರಕ್ಕಿದೆ. ವಿಕ್ರಮ್ ಎಂಟ್ರಿಯ ಮೊದಲ ಸಿನಿಮಾ ಇದಾಗಿದ್ದರಿಂದ ಅವರ ಎಂಟ್ರಿಗೆ ಪೂರಕವಾಗುವಂತೆಯೇ ಚಿತ್ರದ ಕತೆ ಇದೆಯಂತೆ. 

ಚಿತ್ರವೊಂದಕ್ಕೆ ಗಾಯಕನಾದ ಚಾಲೆಂಜಿಂಗ್ ಸ್ಟಾರ್!

ಚಿತ್ರತಂಡದ ಮೂಲಗಳ ಪ್ರಕಾರ ಇದೊಂದು ಲವ್ ಕಮ್ ಎಂಟರ್‌ಟೈನ್‌ಮೆಂಟ್ ಮೂವೀ. ಜತೆಗೆ ಆ್ಯಕ್ಷನ್ ಕೂಡ ಚಿತ್ರದ ಹೈಲೈಟ್ಸ್. ರವಿವರ್ಮ ಸಾಹಸ ಅಂದ್ರೆ ಪಕ್ಕಾ ಆ್ಯಕ್ಷನ್ ಸಿನಿಮಾ ಅಂತಲೂ ಹೌದು. ಸದ್ಯಕ್ಕೆ ಅಷ್ಟು ಮಾಹಿತಿ ಲಭ್ಯವಾಗಿವೆ. ತಂದೆಯಂತೆ ತಾನು ಕೂಡ ಬೆಳ್ಳಿತೆರೆಯಲ್ಲಿ ಮಿಂಚ ಬೇಕೆನ್ನುವ ಹುಮ್ಮಸ್ಸಿನಲ್ಲಿ ನಟನೆಗಿಳಿಯುತ್ತಿರುವ ವಿಕ್ರಮ್ ರವಿಚಂದ್ರನ್, ಈಗಾಗಲೇ ನಟನೆಯ ಎಲ್ಲಾ ಪಟ್ಟುಗಳನ್ನು ಕಲಿತುಕೊಂಡು ಬಂದಿದ್ದಾರೆ.

ಅಭಿನಯ ತರಂಗ ಸಂಸ್ಥೆಯಲ್ಲಿ ನಟನೆಯ ತರಬೇತಿ ಮುಗಿಸಿದ್ದಾರಂತೆ. ನಿತ್ಯ ಜಿಮ್‌ಗೂ ಹೋಗಿ ಬಾಡಿ ಫಿಟ್ ಮಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಮೇ ತಿಂಗಳಿನಿಂದಲೇ ಚಿತ್ರಕ್ಕೆ ಚಿತ್ರೀಕರಣ ಆರಂಭ ಎನ್ನುವ ಮಾತುಗಳು ಕೇಳಿ ಬಂದಿದೆ.

 

 

Latest Videos
Follow Us:
Download App:
  • android
  • ios