Asianet Suvarna News Asianet Suvarna News

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್‌, ಆಪ್ತರ ಬಳಿ ಬೇಸರ ಹೊರಹಾಕಿದ ಪತ್ನಿ ವಿಜಯಲಕ್ಷ್ಮೀ..!

ಪತಿ ದರ್ಶನ್ ಅವರು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ತೀವ್ರ ಬೇಸರಗೊಂಡಿರುವ ಪತ್ನಿ ವಿಜಯಲಕ್ಷ್ಮೀ ಅವರು ಯಾವುದೇ ಕರೆ ಸ್ವೀಕರಿಸುತ್ತಿಲ್ಲ. ಅಷ್ಟೇ ಅಲ್ಲ, ಆಪ್ತರ ಬಳಿ ಈ ಬಗ್ಗೆ ಬಹಳಷ್ಟು ಬೇಸರ..

Vijayalakshmi became sad after actor darshan shifted to bellary jail today srb
Author
First Published Aug 29, 2024, 2:40 PM IST | Last Updated Aug 29, 2024, 2:42 PM IST

ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ (Darshan) ಬಳ್ಳಾರಿ ಜೈಲಿಗೆ ಇಂದು ಬೆಳಿಗ್ಗೆ ಶಿಫ್ಟ್ ಆಗಿರೋದು ಗೊತ್ತೇ ಇದೆ. ಈ ಹಿನ್ನಲೆಯನ್ನಿ ಪತ್ನಿ ವಿಜಯಲಕ್ಷ್ಮೀ ಸೇರಿದಂತೆ, ಎಲ್ಲಾ ಕುಟುಂಬಸ್ಥರು ತುಂಬಾ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಅವರನ್ನು ಬಳ್ಳಾರಿಗೆ (Bellary Jail) ಶಿಫ್ಟ್ ಮಾಡಲು ಕೋರ್ಟ್ ಆದೇಶ ನೀಡಿದ ಬಳಿಕ, ಇಂದು ಮುಂಜಾನೆ ಅವರು ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿದ್ದಾರೆ. ಈ ಬೆಳವಣಿಗೆಯಿಂದ ಸ್ವತಃ ನಟ ದರ್ಶನ್ ಕಂಗಾಲಾಗಿದ್ದಾರೆ. 

ಪತಿ ದರ್ಶನ್ ಅವರು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ತೀವ್ರ ಬೇಸರಗೊಂಡಿರುವ ಪತ್ನಿ ವಿಜಯಲಕ್ಷ್ಮೀ ಅವರು ಯಾವುದೇ ಕರೆ ಸ್ವೀಕರಿಸುತ್ತಿಲ್ಲ. ಅಷ್ಟೇ ಅಲ್ಲ, ಆಪ್ತರ ಬಳಿ ಈ ಬಗ್ಗೆ ಬಹಳಷ್ಟು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.  ವಿಜಯಲಕ್ಷ್ಮಿ ಮಾತ್ರವಲ್ಲ, ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಈ ಬಗ್ಗೆ ಭಾರೀ ಬೇಸರ ಹೊಹಾಕಿದ್ದಾರೆ ಎನ್ನಲಾಗಿದೆ. 

ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ!

ಆಪ್ತರ ಬಳಿ ಬೇಸರ ಹೊರ ಹಾಕಿರುವ ದಿನಕರ್ ತೂಗುದೀಪ 'ಬೆಂಗಳೂರಿನಲ್ಲಿ ಇದ್ದಿದ್ರೆ ನೋಡಬೇಕು ಎನ್ನಿಸಿದಾಗ ಹೋಗಿ ನೋಡಬಹುದಿತ್ತು. ಆದರೆ ಈಗ ಬಳ್ಳಾರಿಗೆ ಶಿಫ್ಟ್‌ ಮಾಡಿರೋದು ತುಂಬಾ ಸಮಸ್ಯೆ ಆಗಿದೆ. ಸಮಸ್ಯೆ ಯಾಕೆ ಅಂದ್ರೆ, ಬಳ್ಳಾರಿಗೆ ಹೋಗೊಕೆ 7 ಗಂಟೆಗಳ ಕಾಲ ಜರ್ನಿ ಮಾಡಬೇಕು. ಅದು ಅಷ್ಟು ಸುಲಭದ ಮಾತಲ್ಲ' ಎಂದಿದ್ದಾರೆ ಎನ್ನಲಾಗಿದೆ. 

ಅಣ್ಣನ ಪರಿಸ್ಥಿತಿಗೆ ನೊಂದಿರುವ ತಮ್ಮ ದಿನಕರ್ ತೂಗುದೀಪ ಸೇರಿದಂತೆ, ದರ್ಶನ್ ಕುಟುಂಬಸ್ಥರು ಮುಂದಿನ ವಾರ ದರ್ಶನ್ ಭೇಟಿಗೆ ಬಳ್ಳಾರಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಅಪ್ಪನನ್ನು ದರ್ಶನ್ ನೋಡಲು ಅಮ್ಮನ ಜೊತೆ ಆಗಾಗ ಜೈಲಿಗೆ ಹೋಗುತ್ತಿದ್ದ ದರ್ಶನ್ ಮಗ ವಿನೀಶ್ ಕೂಡ ಸಹಜವಾಗಿಯೇ ಬೇಸರಗೊಂಡಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಹಾಗೂ ವಿನೀಶ್ ಮಧ್ಯೆ ಹೆಚ್ಚಿನ ಬಾಂಧವ್ಯ ಇತ್ತು ಎಂಬುದನ್ನು ಅವರ ಆಪ್ತರು ಬಹಳಷ್ಟು ಸಾರಿ ಹೇಳಿದ್ದಾರೆ. 

ವಿಷ್ಣುವರ್ಧನ್-ಸುಹಾಸಿನಿ ಜೋಡಿ 'ಬಂಧನ' ಚಿತ್ರದಲ್ಲಿ ಆರತಿ, ಅಂಬರೀಷ್ ನಟಿಸಿಲ್ಲ ಯಾಕೆ?

ಇನ್ನು, ಪರಪ್ಪನ ಅಗ್ರಹಾರದಲ್ಲಿ ಈ ಮೊದಲು ಇದ್ದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳನ್ನು ಮೈಸೂರು ಸೇರಿದಂತೆ ಹಲವು ಕಡೆ ಶಿಫ್ಟ್ ಮಾಡಲಾಗಿದೆ. ಅವರೆಲ್ಲರ ಕುಟುಂಬಸ್ಥರ ಗೋಳಾಟ ಮೇರೆ ಮೀರಿದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಇಷ್ಟು ದಿನ ಅವರೆಲ್ಲರ ಕುಟುಂಬಸ್ಥರು ಆಗಾಗ ನೋಡಿಕೊಂಡು ಹೋಗುತ್ತಿದ್ದರು. ಆದರೆ, ಇನ್ಮುಂದೆ ಹಾಗೆ ಹೋಗುವುದು ಸ್ವಲ್ಪ ಕಷ್ಟವೇ ಆಗಲಿದೆ. ಈ ಕಾರಣಕ್ಕೆ ಎಲ್ಲರ ಫ್ಯಾಮಿಲಿ ಮೆಂಬರ್ಸ್‌ ಬೇಸರದಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. 

Latest Videos
Follow Us:
Download App:
  • android
  • ios