Asianet Suvarna News Asianet Suvarna News

ಸ್ಪಂದನಾ ಉತ್ತರ ಕ್ರಿಯೆ: ಆತ್ಮ ಕರೆಸಿ ಶಾಂತಿ ಕೋರಿಕೆ- ಸರ್ವರನ್ನೂ ಆಹ್ವಾನಿಸಿದ ಮಾವ

ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಅಗಲಿ 11 ದಿನವಾಗಿದ್ದು, ಈ ಸಂದರ್ಭದಲ್ಲಿ ಶಾಂತಿ ಹೋಮ, ಆತ್ಮ ಕರೆಸುವಿಗೆ ಶಾಸ್ತ್ರ ನಡೆಯಲಿದೆ. 
 

Vijaya Raghavendras wife Spandanas 11 days death rituals suc
Author
First Published Aug 16, 2023, 9:30 AM IST | Last Updated Aug 16, 2023, 10:33 AM IST

ಇದೇ 6ನೇ ತಾರೀಖಿನಂದು ನಿಧನರಾಗಿರುವ ವಿಜಯ್ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ ಅವರ ಉತ್ತರ ಕ್ರಿಯೆಗಳು ನಾಳೆ (ಆಗಸ್ಟ್​ 16) ನಡೆಯಲಿದೆ. ಬೆಂಗಳೂರಿನಲ್ಲಿ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಹಾಗೂ ಸ್ಪಂದನಾರ ತವರು ಮನೆಯಲ್ಲಿಯೂ ಕೆಲವು ಕಾರ್ಯಕ್ರಮಗಳು ಜರುಗಲಿದ್ದು ಈ ಕುರಿತು ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ಮತ್ತು ವಿಜಯ್​ ರಾಘವೇಂದ್ರ ಅವರ ತಂದೆ ಎಸ್.ಎ ಚಿನ್ನೆಗೌಡರು  ಆಹ್ವಾನ ಪತ್ರಿಕೆ ನೀಡುವ ಮೂಲಕ ವಿಷಯ ತಿಳಿಸಿದ್ದಾರೆ.  ಉತ್ತರ ಕ್ರಿಯೆ ಆಗಸ್ಟ್ 16ರ ಬೆಳಿಗ್ಗೆ 8 ಗಂಟೆಯಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯಲಿದೆ. ಮಧ್ಯಾಹ್ನ 12:30ರ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಳ್ಳಲಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಭಾಗಿಯಾಗಬೇಕು ಎಂದು ಆಹ್ವಾನ ಪತ್ರಿಕೆಯಲ್ಲಿ ಅವರು ಕೋರಿದ್ದಾರೆ.
 
ಇದೇ ವೇಳೆ,  ಸ್ಪಂದನಾ ಅವರ ಆತ್ಮವನ್ನು ಕರೆಸಿ ಶಾಂತಿ ಕೋರುವ ಕ್ರಿಯೆ ನಡೆಯಲಿದೆ ಎಂದು  ಅವರ ಸಂಬಂಧಿ  ಸಂಬಂಧಿ ಶೇಖರ್ ಬಂಗೇರ (shekha Banger) ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ಸ್ಪಂದನಾ ತವರು ಮನೆಯಲ್ಲಿ ಮುಗ್ಗಗುತ್ತು ಕುಟುಂಬದವರು ತಮ್ಮ ಮನೆತನದ ಕೆಲವು ಕ್ರಿಯಾ ಕರ್ಮಗಳನ್ನು ನಡೆಯಲಿರುವುದಾಗಿ ಅವರು ಹೇಳಿದ್ದಾರೆ. ಸ್ಪಂದನಾ ಅವರು ಮೃತಪಟ್ಟು ಆಗಸ್ಟ್​ 16ರಂದು ಹನ್ನೊಂದನೇ ದಿನವಾಗಿರುವ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಕಾಗೆಗೆ ಅನ್ನ ಇಡುವ ಕಾರ್ಯಕ್ರಮ ನಡೆಸಲಾಗುತ್ತದೆ. ತರಕಾರಿಯಿಂದ ಮಾಡಿದ ಖಾದ್ಯಗಳು ಹಾಗೂ ಸ್ಪಂದನಾ ಅವರಿಗೆ ಪ್ರೀತಿಯಾಗಿದ್ದ ಆಹಾರವನ್ನು ತಯಾರಿಸಲಾಗುವುದು. ಇದೇ ವೇಳೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ  ಸ್ಪಂದನಾ ಅವರಿಗೆ ನುಡಿ ನಮನ ಕಾರ್ಯಕ್ರಮವೂ ನಡೆಯಲಿದೆ. 

ಸ್ಪಂದನಾಗೆ ನಕ್ಷತ್ರ ಹೋಮ: ಮಾಡೋದ್ಯಾಕೆ? ಬದುಕಿದವರಿಗೂ ಮಾಡ್ಬಹುದಾ?

ಇದೇ ವೇಳೆ ರಾತ್ರಿಯ ಸಂದರ್ಭದಲ್ಲಿ ಮಡಪ್ಪಾಜೆ (Madappaje) ಹಾಕಲಾಗುವುದು. ಮಡಪ್ಪಾಜೆ ಎಂದರೆ ಮೃತಪಟ್ಟ ಮೇಲೆ ಆತ್ಮಗಳು ಹೊರಗೆ ಓಡಾಡಿಕೊಂಡು ಇರುತ್ತವೆ. ಅದನ್ನು ಒಳಗೆ ಕರೆಸಿಕೊಳ್ಳುವ ಕಾರ್ಯಕ್ರಮ. ಇದನ್ನು ರಾತ್ರಿಯ ವೇಳೆ ಮಾಡಲಾಗುವುದು. ಮಡಪ್ಪಾಜೆ ಹಾಕುವ ಸಂದರ್ಭದಲ್ಲಿ  ಕೋಳಿಯಿಂದ  ಪದಾರ್ಥ ಮಾಡಲಾಗುವುದು. ಇದನ್ನು  ಕುಟುಂಬದವರೆಲ್ಲ ಸೇರಿ ಒಂದೆಡೆ ಇಟ್ಟು ಪ್ರಾರ್ಥನೆ ಸಲ್ಲಿಸಲಾಗುವುದು. ಕೊನೆಗೆ  ಆತ್ಮವನ್ನು ಒಳಗೆ ಕರೆಸಲಾಗುವುದು ಎಂದು  ಶೇಖರ್ ಬಂಗೇರ ಮಾಹಿತಿ ನೀಡಿದ್ದಾರೆ.  ಮಡಪ್ಪಾಜೆ  ಕಾರ್ಯದಲ್ಲಿ ಭಾಗಿಯಾಗಿ ಪದಾರ್ಥ ಇಟ್ಟು ಪ್ರಾರ್ಥಿಸಿರುತ್ತಾರೊ ಅವರಿಗೆ ಅದನ್ನು ನೀಡಲಾಗುತ್ತದೆ. ಇದರಲ್ಲಿ ಕುಟುಂಬದವರಷ್ಟೇ ಭಾಗಿಯಾಗಿರುತ್ತಾರೆ ಎಂದಿದ್ದಾರೆ. ಇನ್ನು ಸ್ಪಂದನಾ ಅವರ ಆತ್ಮವನ್ನು ಕುಟುಂಬದ ಹಿರಿಯರೊಟ್ಟಿಗೆ ಸೇರಿಸುವ ಕಾರ್ಯವೂ ಇದ್ದು, ಇದನ್ನು ಮೂರು ತಿಂಗಳ ಒಳಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 
  
ಇದೇ ವೇಳೆ, ಸ್ಪಂದನಾ ಉತ್ತರ ಕ್ರಿಯೆಗೆ ಭಾಗಿಯಾಗಲು ಸರ್ವರಿಗೂ ಕುಟುಂಬ ಆಹ್ವಾನ (Invitation) ನೀಡಿದ್ದಾರೆ.  ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ.   ಸ್ನೇಹಿತರ  ಜೊತೆಗೆ ಸ್ಪಂದನಾ ಬ್ಯಾಕಾಂಕ್​ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ರಕ್ತದೊತ್ತಡ ಕಡಿಮೆ ಆಗಿದೆ. ಲೋ ಬಿಪಿ ಸಮಸ್ಯೆಯಿಂದ ಹೃದಯಾಘಾತವಾಗಿ ಬ್ಯಾಂಕಾಕ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ. ಆಗಸ್ಟ್ 9ರಂದು ಹರಿಶ್ಚಂದ್ರಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಲಾಗಿದೆ. ಆಗಸ್ಟ್ 11ರಂದು ಹಾಲುತುಪ್ಪ ಬಿಟ್ಟು, ಅಸ್ಥಿಯನ್ನು ತೆಗೆದುಕೊಂಡು ಹೋಗಲಾಗಿದೆ. ಸ್ಪಂದನಾ ಆತ್ಮಕ್ಕೆ ಶಾಂತಿ ಕೋರಿ ಅನೇಕ ಅಪರ ಕರ್ಮದ ವಿಧಿ ವಿಧಾನಗಳು ನೆರವೇರಿದವು.

ಬೊಂಬೆಗೆ ಆಹ್ವಾನಿಸಿ, ಮತ್ತೆ ಸುಟ್ಟಿದ್ದಾರೆ, 5 ತಿಂಗಳು ಮನೆ ಬಿಡ ಬೇಕಿಲ್ಲ; ಸ್ಪಂದನಾ ಸಂಸ್ಕಾರದ ಬಗ್ಗೆ ಪೂಜಾರಿ
 

Latest Videos
Follow Us:
Download App:
  • android
  • ios