ಕನ್ನಡದ ‘ಜಂಟಲ್‌ಮನ್’ ಈಗ ತಮಿಳಿಗೆ ರಿಮೇಕ್ ಆಗುತ್ತಿದೆ. ಪ್ರಜ್ವಲ್ ಪಾತ್ರವನ್ನು ಯಾರು ಮಾಡಲಿದ್ದಾರೆಂಬ ಪ್ರಶ್ನೆಗೆ ಇಬ್ಬರು ಕಾಲಿವುಡ್ ಸ್ಟಾರ್‌ಗಳ ಹೆಸರು ಕೇಳಿ ಬರುತ್ತಿರುದೆ. ಜಯಂ ರವಿ ಅಥವಾ ವಿಜಯ್ ಸೇತುಪತಿ ಇಹಬ್ಬರಲ್ಲಿ ಒಬ್ಬರು ತಮಿಳು ‘ಜಂಟಲ್‌ಮನ್’ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

'ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ'!

ಸಿನಿಮಾ ಬಿಡುಗಡೆಯಾದ ದಿನವೇ ಚೆನ್ನೈನ ಲೈಕಾ ಪ್ರೊಡಕ್ಷನ್ ಪ್ರಿವ್ಯೆ ಚಿತ್ರಮಂದಿರದಲ್ಲಿ ಥೇನಾಂಡಾ ಮೂವೀಸ್ ರಾಮನಾರಾಯಣ್ ಅವರ ಪುತ್ರ ಮುರಳಿ ಈ ಚಿತ್ರವನ್ನು ನೋಡಿದ್ದಾರೆ. ಚಿತ್ರ ವಿಭಿನ್ನ ಕಥಾವಸ್ತು ಹೊಂದಿದೆ. ಮನುಷ್ಯರನ್ನು ಕಾಡುವ ನಿದ್ರೆ ಕಾಯಿಲೆ ಬಗ್ಗೆ ಜನರಿಗೆ ವಿಸ್ತೃತವಾಗಿ ಪರಿಚಯಿಸುವುದರ ಜತೆಗೆ ಜಾಗೃತಿಯೂ ಮೂಡಿಸುತ್ತದೆ.

ನಮ್ಮ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಈಗ ತಮಿಳಿಗೂ ರಿಮೇಕ್ ಆಗುತ್ತಿದೆ. ಥೇನಾಂಡಾ ಮೂವೀಸ್ ರಾಮನಾರಾಯಣ್ ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಮುರಳಿ ಸಹ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಕನ್ನಡದ ಜಂಟಲ್ ಮನ್ ಚಿತ್ರವನ್ನು ರಿಮೇಕ್ ಮಾಡುವುದಕ್ಕೆ ಮುಂದಾಗಿರುವುದು ನಿರ್ದೇಶಕನಾಗಿ ನನಗೆ ಖುಷಿ ಕೊಟ್ಟಿದೆ.- ಜಡೇಶ್ ಕುಮಾರ್ ಹಂಪಿ, ನಿರ್ದೇಶ

#MovieReview: ಈ ಜಂಟಲ್‌ಮನ್ ನಿಜಕ್ಕೂ ` ನಂಬರ್ ಒನ್..!'

ಹಾಗೆಯೇ, ಜನರ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮೂಡಿಬಂದಿದ್ದು, ಈ ಚಿತ್ರವನ್ನು ತಮಿಳು ಪ್ರೇಕ್ಷಕರಿಗೆ ತಲುಪಿಸಬೇಕಿದೆ ಎಂದು ಮುರಳಿ ಅಭಿಪ್ರಾಯ ಪಟ್ಟಿದ್ದಾರೆ. ಅವರೇ ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀಸಲು ಮುಗಿದಾಗಿದ್ದು, ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರ ಜತೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆಂದು ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ.