'ಚಲಿಸುವ ಮೋಡಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲ್ಯ ನಟನಾಗಿ ಪರಿಚಯವಾದ ವಿಜಯ್ ರಾಘವೇಂದ್ರ ಇಂದು ವಯೋವೃದ್ಧನ ಪಾತ್ರ ಮಾಡುವ ಮಟ್ಟಕ್ಕೆ ಅಭಿನಯದಲ್ಲಿ ಪಳಗಿದ್ದಾರೆ.

ಕಿಶೋರ್ ಮೂಡಬಿದ್ರೆ ನಿರ್ದೇಶನದ 'ಮಾಲ್ಗುಡಿ ಡೇಸ್' ಚಿತ್ರಕ್ಕಾಗಿ ವಿಜಯ್ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡು ಟೀಸರ್‌ನಲ್ಲಿ 'ಶ್ರೀ ಲಕ್ಷ್ಮಿ ನಾರಾಯಣ ಮಾಲ್ಗುಡಿ' ಹೆಸರಿನ ತಾತನ ಗೆಟಪ್‌ನಲ್ಲಿ, ಎರಡು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಟೀಸರ್ ವೀಕ್ಷಿಸಿದ ಅಭಿಮಾನಿಗಳು ಇದು ವಿಜಯ್ ರಾಘವೇಂದ್ರಗೆ ಬಿಗ್ ಕಮ್‌ ಬ್ಯಾಕ್ ಕೊಡುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ. 

‘ಚಿನ್ನಾರಿ ಮುತ್ತಾ’ ನ ಮುತ್ತಿನಂತ ಲವ್‌ಸ್ಟೋರಿ!

'ಇದು ನನ್ನ ವೃತ್ತಿ ಜೀವನದ ಬಹುಮುಖ್ಯವಾದ ಚಿತ್ರ. ದೊಡ್ಡಮಟ್ಟದ ಗೆಲುವು ತಂದು ಕೊಡಲಿದೆ' ಎಂದು ವಿಜಯ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಾಫ್ಟ್‌ವೇರ್ ಉದ್ಯೋಗಿ ಗ್ರೀಷ್ಮಾ ಶ್ರೀಧರ್ ವಿಜಯ್ ರಾಘವೇಂದ್ರಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಇದೇ ಫೆಬ್ರವರಿ 7ರಂದು ತೆರೆಕಾಣಲಿದೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್,' 'ಡ್ರಾಮಾ ಜೂನಿಯರ್ಸ್' ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮೊದಲ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವಿನ್ನರ್ ಸಹ ಹೌದು.