ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಹಿರಿಯ ನಟ ಕೃಷ್ಣೇಗೌಡ ಇನ್ನಿಲ್ಲ

* ಹಿರಿಯ ಕಲಾವಿದ ಬಿ.ಎಂ. ಕೃಷ್ಣೇ ಗೌಡ( 80) ನಿಧನ
* ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು
* ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟ
* ಚಲನ ಚಿತ್ರ ಕಲಾವಿದರ ಸಂಘದ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದರು.

veteran kannada actor krishnegowda Passes away due to Lung problem mah

ಬೆಂಗಳೂರು(ಮೇ. 25)  ಕೊರೋನಾ ಕಾಲದಲ್ಲಿ ಒಂದಾದ ಮೇಲೆ ಒಂದು ಆತಂಕದ ಸುದ್ದಿಗಳು ಬರುತ್ತಿದ್ದು ಅನಿವಾರ್ಯವಾಗಿ ಸ್ವೀಕಾರ ಮಾಡಲೇಬೇಕಾಗಿದೆ.  ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬಿ.ಎಂ. ಕೃಷ್ಣೇ ಗೌಡ( 80) ನಿಧನರಾಗಿದ್ದಾರೆ. 

ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಪೋಷಕ ಪಾತ್ರಕ್ಕೆ ಜೀವ ತುಂಬುತ್ತಿದ್ದ  ಗೌಡ ಮೂಲತಃ ರಂಗಭೂಮಿ ಕಲಾವಿದರು. ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು. ಆಸ್ಟರ್ ಆಸ್ಪತ್ರೆಯಲ್ಲಿ ನಿಧನ  ಹೊಂದಿದ್ದಾರೆ.  ಚಲನ ಚಿತ್ರ ಕಲಾವಿದರ ಸಂಘದ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದರು.

ಬೆಡ್ ಸಿಗದೆ ಮರೆಯಾದ ಹಿರಿಯ ಜೀವ ರಾಜಾರಾಮ್

ಸಾಹಸ ಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್, ಶಿವರಾಜ್‌ಕುಮಾರ್, ಅಂಬರೀಷ್‌, ಶಿವರಾಜ್‌ಕುಮಾರ್  ಸೇರಿ ಕನ್ನಡದ ಬಹುತೇಕ ನಾಯಕರ ಜತೆ ಅಭಿನಯಿಸಿದ್ದರು. ಮುಖ್ಯಮಂತ್ರಿ ಚಂದ್ರ ಅವರ ಮುಖ್ಯಮಂತ್ರಿ ನಾಟಕದಲ್ಲಿಯೂ  ಪ್ರಮುಖ  ಪಾತ್ರ ನಿರ್ವಹಣೆ ಮಾಡುತ್ತಿದ್ದರು. ಕೋಟಿ ನಿರ್ಮಾಪಕ ರಾಮು, ಹಿರಿಯ ನಟ ಶಂಖನಾದ ಅರವಿಂದ್ , ರಾಜಾರಾಮ್  ಸಹ ಚಿತ್ರರಂಗ ಅಗಲಿದ್ದರು. 

"

Latest Videos
Follow Us:
Download App:
  • android
  • ios