Asianet Suvarna News Asianet Suvarna News

ವಸಿಷ್ಠ ಸಿಂಹ - ಹರಿಪ್ರಿಯಾ ಮದುವೆಗೆ ದುಬೈನಲ್ಲಿ ಶಾಪಿಂಗ್: ಈಗೆಲ್ಲಿದ್ದಾರೆ ಲವ್ ಬರ್ಡ್ಸ್?

Vasishta Simha- Haripriay: ಕಂಚಿನ ಕಂಠ, ಅದ್ಭುತ ನಟನೆ ಮೂಲಕ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಮಿಂಚುತ್ತಿರುವವರು ವಸಿಷ್ಠ ಸಿಂಹ. ಟ್ಯಾಲೆಂಟೆಡ್ ನಟಿ ಹರಿಪ್ರಿಯಾ ಈ ನಟನ ಕೈ ಹಿಡಿಯೋ ದಿನ ದೂರದಲ್ಲಿಲ್ಲವಂತೆ. ಈ ಜೋಡಿ ಮದುವೆಗಾಗಿ ದುಬೈನಲ್ಲಿ ಶಾಪಿಂಗ್ ಮಾಡ್ತಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ.

Vasista simha and Haripriya Wedding shopping
Author
First Published Nov 28, 2022, 12:45 PM IST

ಹರಿಪ್ರಿಯಾ ಮೊನ್ನೆ ಮೊನ್ನೆ ಮೂಗು ಚುಚ್ಚಿಸಿಕೊಂಡ ವೀಡಿಯೋವನ್ನು ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಸ್ವಲ್ಪ ಹೊತ್ತಿಗೇ ಆ ವೀಡಿಯೋ ವೈರಲ್ ಆಯ್ತು. ಹಳ್ಳಿ ಕಡೆ ಹೆಣ್ಣುಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಮೂಗು ಚುಚ್ಚಿಸಿದರೂ ಸಿಟಿ ಕಡೆ ಮದುವೆ ಹೊತ್ತಿಗೆ ಮೂಗು ಚುಚ್ಚಿಸೋ ಪದ್ಧತಿ ಇದೆ. ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡೆ ಅಂದಾಕ್ಷಣ ಅವರ ಅಭಿಮಾನಿಗಳು ಚಕ್ಕಂತ ಕೇಳಿದ ಪ್ರಶ್ನೆ 'ಮದುವೆ ಯಾವಾಗ?' ಅಂತ. ಅದಕ್ಕೆ ಹರಿಪ್ರಿಯಾ ಏನೂ ಉತ್ತರ ಕೊಡಲಿಲ್ಲ. ಆದರೆ ಅವರು ಹಾಕಿದ ವೀಡಿಯೋ ನೋಡಿಯೇ ಹೆಚ್ಚಿನವರಿಗೆ ಮದುವೆ ದಿನ ದೂರದಲ್ಲಿಲ್ಲ ಅನ್ನೋ ಸುಳಿವು ಸಿಕ್ಕಿತ್ತು. ಏಕೆಂದರೆ ಮೂಗು ಚುಚ್ಚಿಸಲು ಗುರುತು ಮಾಡಿದ್ದು, ಹರಿಪ್ರಿಯಾ ಮೂಗು ಚುಚ್ಚುವಾಗ ನೋವಲ್ಲಿ ಮುಖ ಹಿಂಡಿದಾಗ ಸಮಾಧಾನ ಮಾಡಿದ್ದು, ಮೂಗು ಚುಚ್ಚಿದ ಮೇಲೆ ಆಕೆಯ ಸಂಪಿಗೆ ನಾಸಿಕದಲ್ಲಿ ಹೊಳೆಯುವ ಮೂಗುತಿ ನೋಡಿ ಸಿಹಿ ಮುತ್ತು ನೋಡಿ ತಬ್ಬಿಕೊಂಡಿದ್ದು ಅವರಿಗೆ ಬಹಳ ಹತ್ತಿರದವರು ಅನ್ನೋದು ಗೊತ್ತಾಗಿತ್ತು. ಆದರೆ ಅದು ಅವರ ಮನೆಯವರಾಗಿರಲಿಲ್ಲ.ಮತ್ಯಾರು ಅಂತ ಗುಸು ಗುಸು ಪಿಸು ಪಿಸು ಒಂದಿಷ್ಟು ಕಾಲ ಓಡಾಡಿತು. ಆಮೇಲೆ ಅದು ಮತ್ಯಾರೂ ಅಲ್ಲ, ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಅವರೇ ಅನ್ನೋ ಕ್ಲೂ ಸಿಕ್ಕಿತು. ಅದು ಸಖತ್ ವೈರಲ್ ಆಯ್ತು ಕೂಡ.

ಈಗ ಸಿಕ್ಕಿರೋ ಲೇಟೆಸ್ಟ್ ಸುದ್ದಿ ಅಂದರೆ ಈ ಜೋಡಿಗೆ ಕಂಕಣ ಬಲ ಕೂಡಿ ಬಂದಿದೆ. ಸದ್ಯದಲ್ಲೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಅಡಿ ಇಡ್ತಿದ್ದಾರೆ. ಮದುವೆ ದಿನ ಏನೂ ದೂರ ಇಲ್ಲ. ಇದೀಗ ದುಬೈನಲ್ಲಿ ಮದುವೆಗಾಗಿ ಶಾಪಿಂಗ್ ನಡೀತಿದೆ ಅನ್ನೋದು. ಅದಕ್ಕೆ ಸರಿಯಾಗಿ ಹರಿಪ್ರಿಯಾ ಅವರೂ ತಮ್ಮ ಇನ್‌ಸ್ಟಾದಲ್ಲಿ ದುಬೈನ ಬಹು ಮಹಡಿ ಕಟ್ಟಡವೊಂದರಲ್ಲಿ ಕಾಣುವ ದೃಶ್ಯಾವಳಿಗಳ ಫೋಟೋ ಪೋಸ್ಟ್ ಮಾಡಿದ್ದಾರೆ. ವಸಿಷ್ಠ ಸಿಂಹ ದುಬೈನಲ್ಲಿ ಡೆಸರ್ಟ್ ಸಫಾರಿ ಮಾಡ್ತಿರೋ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲಿಗೆ ಈ ಜೋಡಿಯೂ ಸದ್ಯ ದುಬೈನಲ್ಲಿ ವಿಹರಿಸುತ್ತಿರೋದು ಸುಳ್ಳಲ್ಲ.

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)

 

ಇನ್ನೊಂದೆಡೆ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ನಡುವಿನ ಪ್ರೇಮಕಥೆಗೂ (Love story) ರೆಕ್ಕೆ ಪುಕ್ಕ ಹುಟ್ಟಿಕೊಂಡಿದೆ. ಅವರಿಬ್ಬರೂ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಅನುರಾಗ ಅರಳಿದೆ. ಲವ್‌ ಎಟ್ ಫಸ್ಟ್ ಸೈಟ್ ಅಂತಾರಲ್ವಾ ಹಾಗಾಗಿದೆ. ಇದರ ನಡುವೆ ಇತ್ತೀಚೆಗೆ ವಸಿಷ್ಠ ಸಿಂಹ ಜಿಮ್‌ನಲ್ಲಿ ಹರಿಪ್ರಿಯಾ ಜೊತೆಗೆ ವರ್ಕೌಟ್ ಮಾಡೋ ವೀಡಿಯೋ ಹಾಕಿ ಆಕೆಯನ್ನು 'ಪಾರ್ಟನರ್' ಅಂತ ಕರೆದಿದ್ದರು. ಇದಕ್ಕೆ ಹರಿಪ್ರಿಯಾ ಅವರೂ 'ಥ್ಯಾಂಕ್ಯೂ ಪಾರ್ಟನರ್' ಅಂತ ರಿಪ್ಲೈ ಮಾಡಿದ್ದರು. ಅಷ್ಟೇ ಅಲ್ಲ, ಹರಿಪ್ರಿಯಾ ಇನ್‌ಸ್ಟಾದಲ್ಲಿ ಇವರಿಬ್ಬರೂ ಡ್ಯಾನ್ಸ್ ಮಾಡೋ ವೀಡಿಯೋ ವೈರಲ್ ಆಗಿತ್ತು.

ಅದಿತಿ ಪ್ರಭುದೇವ ಆರತಕ್ಷತೆಯಲ್ಲಿ ಯಶ್ ದಂಪತಿ: ರಾಧಿಕಾಗೆ ಹಗ್ ಮಾಡಿ ಕಿಸ್ ಕೊಟ್ಟ ಸ್ಯಾನೆ ಟಾಪ್ ಹುಡುಗಿ

ಕನ್ನಡ ಸಿನಿಮಾರಂಗದಲ್ಲಿ ನಟ ನಟಿಯರ ನಡುವಿನ ಲವ್ವು, ಮದುವೆ ಹೊಸತೇನೋ ಅಲ್ಲ. ಅಂಬರೀಶ್, ವಿಷ್ಣುವರ್ಧನ್ ಅವರಂಥಾ ದಿಗ್ಗಜರಿಂದ ಹಿಡಿದು ರಾಕಿ ಭಾಯ್ (Rocky bhai)ಯಶ್ ತನಕ ದೊಡ್ಡ ಪರಂಪರೆಯೇ ಇದೆ. ಈ ಪರಂಪರೆ (Tradition)ಯಲ್ಲಿ ಸದ್ಯದಲ್ಲೇ ಸೇರೋ ಹೆಸರು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರದು ಅಂತ ಜನ ಮಾತಾಡ್ತಿದ್ದಾರೆ.

ಇಷ್ಟೆಲ್ಲ ಆದರೂ ಈ ಜೋಡಿ ತಮ್ಮ ರಿಲೇಶನ್‌ಶಿಪ್‌ ಇನ್ನೂ ಅಧಿಕೃತ ಸ್ಟೇಟ್‌ಮೆಂಟ್ (Statement)ನೀಡಿಲ್ಲ. ಮದುವೆ ಶಾಪಿಂಗ್(Shopping) ಜೊತೆಯಾಗಿ ಮಾಡ್ತಿರೋ ಕಾರಣ ಶೀಘ್ರದಲ್ಲೇ ಈ ಸಿಹಿ ಸುದ್ದಿ ನಿರೀಕ್ಷಿಸಬಹುದು 

Follow Us:
Download App:
  • android
  • ios