ಈ ಬಾರಿ ಒಟ್ಟು 40 ದಿನಗಳ ಕಾಲ ಒಂದೇ ಹಂತದಲ್ಲಿ ಶೂಟಿಂಗ್‌ ಮಾಡಲಿದ್ದು, ಇದಕ್ಕಾಗಿ ಫೆ.10ರಂದು ಸೆಟ್‌ಗಳ ನಿರ್ಮಾಣಕ್ಕೂ ಪೂಜೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಹಾಗೂ ಮಿನರ್ವಮಿಲ್‌ನಲ್ಲಿ 40 ಸೆಟ್‌ಗಳನ್ನು ನಿರ್ಮಾಣ ಮಾಡಲಿದ್ದು, ಈ ಎಲ್ಲ ಸೆಟ್‌ಗಳಲ್ಲೇ ಮೂರನೇ ಹಂತದ ಚಿತ್ರೀಕರಣ ನಡೆಯಲಿದೆ. ಈ ಹಂತದಲ್ಲೇ ನಟ ಸುದೀಪ್‌ ಅವರ ಪಾತ್ರದ ಚಿತ್ರೀಕರಣ ಕೂಡ ನಡೆಯುತ್ತಿರುವುದು ವಿಶೇಷ.

ಅಂದುಕೊಂಡಂತೆ ಈ 40 ದಿನಗಳ ಶೂಟಿಂಗ್‌ ಮುಗಿಸಿದರೆ ಶೇ.80 ಭಾಗ ಚಿತ್ರೀಕರಣ ಮುಗಿಸಿದಂತೆ. ನಂತರ ನಾಲ್ಕನೇ ಹಂತದ ಶೂಟಿಂಗ್‌ಗಾಗಿ ಹೊರ ರಾಜ್ಯಗಳಿಗೆ ತೆರಳುವುದಕ್ಕೆ ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ‘ಈಗಿನ ಸ್ಥಿತಿಯಲ್ಲಿ ಹೊರ ದೇಶಗಳಿಗೆ ಹೋಗಿ ಚಿತ್ರೀಕರಣ ಮಾಡುವ ಪರಿಸ್ಥಿತಿ ಇಲ್ಲ. ಕಾರಣ ಕೊರೋನಾ ಭಯ. ಹೀಗಾಗಿ ಬೆಂಗಳೂರಿನಲ್ಲೇ ಬಹುತೇಕ ಸೆಟ್‌ಗಳನ್ನು ಹಾಕಿ ಶೂಟಿಂಗ್‌ ಮಾಡುತ್ತಿದ್ದೇವೆ. ಕಡಿಮೆ ಕಲಾವಿದರು ಹಾಗೂ ತಂತ್ರಜ್ಞರು ಇದ್ದಿದ್ದರೆ ಹೊರ ದೇಶಗಳಿಗೆ ಹೋಗಬಹುದಿತ್ತು.

ರಿಯಲ್ ಸ್ಟಾರ್ ಉಪೇಂದ್ರಗೆ ಜೋಡಿಯಾಗಲು ಕನ್ನಡಕ್ಕೆ ಬಂದ ಲೇಡಿ ಸೂಪರ್ ಸ್ಟಾರ್! 

ದಿನಕ್ಕೆ 450 ರಿಂದ 500 ಜನ ಸೆಟ್‌ನಲ್ಲಿ ಇರುತ್ತಾರೆ. ಹೀಗಾಗಿ ಕೊನೆಯ ಶೇ.20ರಷ್ಟುಹೊರತಾಗಿ ಉಳಿದಂತೆ ಎಲ್ಲ ದೃಶ್ಯಗಳ ಚಿತ್ರೀಕರಣವನ್ನು ಬೆಂಗಳೂರಿನ ಸೆಟ್‌ಗಳಲ್ಲೇ ಮಾಡುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಬಾರಿ ಸುದೀಪ್‌ ಕೂಡ ಬರುತ್ತಿದ್ದು, ಮತ್ತಷ್ಟುಉತ್ಸಾಹ ‘ಕಬ್ಜ’ ಚಿತ್ರಕ್ಕೆ ಜತೆಯಾಗಿದೆ’ ಎನ್ನುತ್ತಾರೆ ನಿರ್ದೇಶಕ ಆರ್‌ ಚಂದ್ರು.