ಮತ್ತೊಂದು ಮಾಸ್‌ ಹಾಗೂ ಆಕ್ಷನ್‌ ಸಿನಿಮಾ ಟೀಸರ್‌ ಬಿಡುಗಡೆ ಮಾಡಿಕೊಂಡಿದೆ. ಭೂಗತಲೋಕದ ಜತೆಗೆ ತಾಯಿ ಸೆಂಟಿಮೆಂಟ್‌ ಕತೆಯನ್ನು ಹೊಂದಿರುವ ಈ ಚಿತ್ರದ ಹೆಸರು ‘ಯಾರ್‌ ಮಗ’. 

ರಘು ಪಡುಕೋಟೆ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಟೀಸರ್‌ ಬಿಡುಗಡೆ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ಕರವೇ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್‌, ಡಿಎಸ್‌ ಮ್ಯಾಕ್ಸ್‌ನ ದಯಾನಂದ, ಮಾರುತಿರಾವ್‌ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್‌, ಕೆ ಜಿ ಹನುಮಂತಯ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ನಿರ್ಮಾಪಕ ಬಸವರಾಜ ಪಡುಕೋಟೆ ಪುತ್ರನೇ ರಘು ಪಡುಕೋಟೆ. ‘ನಾನು ಮೊದಲಿನಿಂದಲೂ ಕನ್ನಡಪರ ಹೋರಾಟಗಳನ್ನು ಮಾಡಿಕೊಂಡು ಬಂದವನು. ಡಾ.ರಾಜ್‌ಕುಮಾರ್‌ ಅವರ ಅಭಿಮಾನಿ. ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದವನು. ನನ್ನ ಮಗನ ಸಿನಿಮಾ ಆಸಕ್ತಿ ಕಂಡು ಈ ಚಿತ್ರ ನಿರ್ಮಾಣ ಮಾಡಿದ್ದೇನೆ’ ಎಂಬುದು ನಿರ್ಮಾಪಕರ ಮಾತು. ಜೂನ್‌ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಇದೆ.

15 ವರ್ಷಗಳ ನಂತರ ಸವಾಲಿನ ಪಾತ್ರ ಆಯ್ಕೆ ಮಾಡಿಕೊಂಡ ನಟ ಗಣೇಶ್!

‘ಈಗಿನ ಕಾಲದ ಹುಡುಗರು ಹೇಗೆ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ತಾಯಿ ಸೆಂಟಿಮೆಂಟ್‌, ಲವ್‌, ಡ್ರಗ್‌ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟುಕಾಳಜಿಯಿಂದ ನೋಡಿಕೊಳ್ಳಬಹುದು ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ’ ಎಂದರು ರಘು ಪಡುಕೋಟೆ.

ಪ್ರವೀಣ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಯಕಿಯಾಗಿ ಸುಕೃತ ಅಭಿನಯಿಸಿದ್ದಾರೆ. ಕಾಕ್ರೋಚ್‌ಸುಧಿ, ಬಲ ರಾಜವಾಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರದ ಟೀಸರ್‌ ನೋಡಬಹುದು.