ನಟಿ ರಮ್ಯಾಗೆ ಸೋಶಿಯಲ್ ಮೀಡಿಯಾ ಮೂಲಕ ಅಶ್ಲೀಲ ಕಮೆಂಟ್ ಮಾಡಿದ ಪ್ರಕರಣ ಸಂಬಂಧ ತನಿಖೆ ತೀವ್ರಗೊಂಡಿದೆ. ಇದೀಗ ಮತ್ತಿಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಈ ಮೂಲಕ ಅರೆಸ್ಟ್ ಸಂಖ್ಯೆ 9ಕ್ಕೇರಿದ್ದರೆ, ಕೆಲವು ಮಂದಿಯ ಲಿಸ್ಟ್ ರೆಡಿಯಾಗಿದೆ. 

ಬೆಂಗಳೂರು (ಆ.18) ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ಅಶ್ಲೀಲ ಸಂದೇಶ, ಕಮೆಂಟ್, ಫೋಟೋ ಕಳುಹಿಸಿದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಡುಪಿ ಮೂಲದ ಸುಜನ್ ಶೆಟ್ಡಿ ಹಾಗೂ ಆದರ್ಶ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ಆರೋಪಿಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಇದೇ ಪ್ರಕರಣ ಸಂಬಂಧ ಹಲವು ಆರೋಪಿಗಳ ಪಟ್ಟಿ ರೆಡಿಯಾಗಿದೆ. ಇತ್ತ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಏನಿದು ನಟಿ ರಮ್ಯಾ ಪ್ರಕರಣ

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಮಾಡಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ನಟ ದರ್ಶನ್ ಪ್ರಕರಣ ಕುರಿತು ನಟಿ ರಮ್ಯಾ ಹಂಚಿಕೊಂಡಿದ್ದ ಪೋಸ್ಟ್‌ಗೆ ಹಲವರು ಅಶ್ಲೀಲ ಕಮೆಂಟ್, ಬೆದರಿಕೆ ಹಾಕಿದ್ದರು. ಈ ಪ್ರಕರಣ ಸಂಬಂಧ ನಟಿ ರಮ್ಯಾ ದೂರು ನೀಡಿದ್ದರು. ಈ ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದವರ ಐಪಿ ಅಡ್ರೆಸ್, ಲೋಕೇಶನ್ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣ ತೀವ್ರಗೊಳ್ಳುತ್ತಿದ್ದಂತೆ ಹಲವು ಆರೋಪಿಗಳು ನಾಪತ್ತೆಯಾಗಿದ್ದಾರೆ.

9 ಮಂದಿ ಅರೆಸ್ಟ್

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಮಾಡಿದ ಪ್ರಕರಣ ಸಂಬಂಧ ಇದುವರೆಗೆ 9 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದು ಈ ಪ್ರಕರಣವನ್ನು ಪೊಲೀಸರು ಪರಿಗಣಿಸಿದ ರೀತಿಗೆ ಸಾಕ್ಷಿಯಾಗಿದೆ. ಹಲವು ಆರೋಪಿಗಳ ಲಿಸ್ಟ್ ರೆಡಿಯಾಗಿದೆ. ಹೀಗೆ ಕಮೆಂಟ್ ಮಾಡಿದ ಹಲವರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ.

ರಮ್ಯಾ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಕುರಿತು ಬಂಧನ ಪ್ರಕ್ರಿಯೆ ಕರ್ನಾಟಕದಲ್ಲಿ ನಡೆದಿಲ್ಲ. ಆದರೆ ಇದೇ ಮೊದಲ ಬಾರಿಗೆ ರಾಜ್ಯದಲ್ಲ್ಲಿ ಕಮೆಂಟ್ ಮಾಡಿ 9 ಮಂದಿ ಅರೆಸ್ಟ್ ಆಗಿದ್ದಾರೆ. ನಟಿ ರಮ್ಯಾಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿತ್ತು. ಇಷ್ಟೇ ಅಲ್ಲ ಈ ಪ್ರಕರಣ ಮೂಲಕ ಹೆಣ್ಮು ಮಕ್ಕಳಿಗೆ ಕೆಟ್ಟ ಕಮೆಂಟ್ ಮಾಡುವ ಪ್ರಕ್ರಿಯೆಗೆ ಬ್ರೇಕ್ ಬೀಳಬೇಕು ಅನ್ನೋ ನಿಟ್ಟಿನಲ್ಲಿ ಪೊಲೀಸರು ನಟಿ ರಮ್ಯಾ ಪ್ರಕರಣ ಗಂಭೀರವಾಗಿ ಪರಗಿಣಿಸಿದ್ದಾರೆ.