ಉದಾರ ಮನಸ್ಸಿನ ನಿರ್ಮಾಪಕರು ಸಿಗುವುದು ಯಾವುದೇ ನಿರ್ದೇಶಕನ ಪುಣ್ಯ. ಅಂಥಾ ಒಬ್ಬ ಉದಾರಿ ನಿರ್ಮಾಪಕ ಹರೀಶ್‌ ಶೇರಿಗಾರ್‌ ಈಗ ತುಳು ಸಿನಿಮಾ ‘ಇಂಗ್ಲಿಷ್‌’ ನಿರ್ಮಿಸಿದ್ದಾರೆ.

‘ಕನ್ನಡದಲ್ಲಿ ಮೂರು ಸಿನಿಮಾ ನಿರ್ಮಿಸಿ ಹಣ ಕಳೆದುಕೊಂಡಿದ್ದೇನೆ, ಈ ಸಿನಿಮಾವನ್ನು ಕನ್ನಡಿಗರೆಲ್ಲರೂ ಸೇರಿಸಿ ಗೆಲ್ಲಿಸಿದರೆ ಮತ್ತೆ ಕನ್ನಡ ಸಿನಿಮಾ ನಿರ್ಮಿಸುವ ಶಕ್ತಿ ಬರುತ್ತದೆ’ ಎಂದು ಘೋಷಿಸಿ ಅವರು ನಕ್ಕರು. ವಿಷಾದವೊಂದು ರಪ್ಪನೆ ಹಾದುಹೋದಂತಾಯಿತು.

‘ಎಕ್ಕಸಕ’, ‘ಪಿಲಿಬೈಲ್‌ ಯಮುನಕ್ಕ’ ಸಿನಿಮಾ ನಿರ್ದೇಶಿಸಿ ಮನೆಮಾತಾಗಿದ್ದ ತುಳುವಿನ ಸೂಪರ್‌ಹಿಟ್‌ ನಿರ್ದೇಶಕ ಸೂರಜ್‌ ಕೆ ಶೆಟ್ಟಿನಿರ್ದೇಶಿಸಿದ ಮೂರನೇ ಸಿನಿಮಾ ‘ಇಂಗ್ಲಿಷ್‌’ ಮಾಚ್‌ರ್‍ 26ರಂದು ಬಿಡುಗಡೆಯಾಗಲಿದೆ.

ಇದು ನನ್ನ ಮತ್ತೊಂದು ಅಧ್ಯಾಯ: ಆದಿತ್ಯ 

ಮಂಗಳೂರಲ್ಲಿ ಮಾತ್ರವಲ್ಲ ಬೆಂಗಳೂರು ಮತ್ತು ಮೈಸೂರಿನ ಮಲ್ಟಿಪ್ಲೆಕ್ಸ್‌ಗಳಲ್ಲೂ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ‘ಕನ್ನಡಿಗರೆಲ್ಲರೂ ಈ ಸಿನಿಮಾ ನೋಡಿ ತುಳು ಸಿನಿಮಾ ಗೆಲ್ಲಿಸಬೇಕು’ ಎಂದು ನಿರ್ಮಾಪಕರು ಕೇಳಿಕೊಂಡರು. ಸಂಕೋಚ ಸ್ವಭಾವದ ನಿರ್ದೇಶ ಸೂರಜ್‌, ‘75 ಲಕ್ಷದಲ್ಲಿ ಸಿನಿಮಾ ಮಾಡುವ ಆಲೋಚನೆ ಇತ್ತು. ಹರೀಶ್‌ ಸರ್‌ ಬಂದ ಮೇಲೆ ಕೋಟಿ ದಾಟಿತು. ಅದ್ದೂರಿಯಾಗಿ ಸಿನಿಮಾ ಮಾಡಿದ್ದೇವೆ’ ಎಂದರು.

ಈ ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ ನಾಯಕನಾಗಿ ನಟಿಸುತ್ತಿದ್ದಾರೆ. ‘ಸೂರಜ್‌ ಅವರ ಪಿಲಿಬೈಲ್‌ ಯಮುನಕ್ಕ ನನ್ನ ಜೀವನಕ್ಕೆ ತಿರುವು ಕೊಟ್ಟಸಿನಿಮಾ, ಇಂಗ್ಲಿಷ್‌ ಸಿನಿಮಾ ಮಜವಾಗಿದೆ’ ಎಂದರು.

ರಾಬರ್ಟ್ ಅಬ್ಬರ: ಮೊದಲ ದಿನವೇ 17ಕೋಟಿಗೂ ಹೆಚ್ಚು ಗಳಿಕೆ 

ಈ ಸಿನಿಮಾದಲ್ಲಿ ಅನಂತ್‌ನಾಗ್‌ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಅನ್ನುವುದು ಚಿತ್ರದ ಹೆಗ್ಗಳಿಕೆ. ಕಾರ್ಯಕ್ರಮದಲ್ಲಿ ನಿರ್ಮಾಪಕಿ ಶರ್ಮಿಳಾ ಶೇರಿಗಾರ್‌, ನಾಯಕಿ ನವ್ಯ ಪೂಜಾರಿ, ವಿತರಕ ಹೇಮಂತ್‌ ಇದ್ದರು. ಹಾಸ್ಯವೇ ಪ್ರಧಾನವಾಗಿರುವ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನವೀನ್‌ ಡಿ ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು ನಟಿಸಿದ್ದಾರೆ.