Asianet Suvarna News Asianet Suvarna News

ಎಸ್‌ಪಿಬಿ ಪುಣ್ಯ ತಿಥಿ: ಅರ್ಚನಾ ಉಡುಪ ಸಾರಥ್ಯದಲ್ಲಿ ನೂರೊಂದು ನೆನಪು

'ನೂರೊಂದು ನೆನಪು' ಹಾಡಿನ ಕಾರ್ಯಕ್ರಮ ಕರ್ನಾಟಕದ ಖ್ಯಾತ ಗಾಯಕಿ ಅರ್ಚನಾ ಉಡುಪ ಅವರ ಯೂಟ್ಯೂಬ್‌, ಫೇಸ್‌ಬುಕ್‌‌ನಲ್ಲಿ ಪ್ರಸಾರವಾಗಲಿದೆ.
 

Tribute to S. P. Balasubrahmanyam Noorondu Nenapu in Archana Udupa Youtube channel vcs
Author
Bangalore, First Published Sep 25, 2021, 2:31 PM IST

ಎಸ್‌ ಪಿ ಬಾಲಸುಬ್ರಹ್ಮಣ್ಯಂ (SP Balasubramanyam) ನಮ್ಮನ್ನಗಲಿ (ಸೆ.25)ಒಂದು ವರ್ಷ ಕಳೆದಿದೆ. ಅವರ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಗಾಯಕಿ ಅರ್ಚನಾ ಉಡುಪ (Archana Udupa) ಅವರು ‘ನೂರೊಂದು ನೆನಪು’ ಎಂಬ ಹಾಡುಗಳ ಕಾರ್ಯಕ್ರಮ ನಡೆಸಿದ್ದಾರೆ. ಆ ಕಾರ್ಯಕ್ರಮ ಇಂದಿನಿಂದ ಅರ್ಚನಾ ಉಡುಪ ಯೂಟ್ಯೂಬ್‌ ಚಾನಲ್‌ ಹಾಗೂ ಫೇಸ್‌ಬುಕ್‌ ಪೇಜ್‌ಗಳಲ್ಲಿ ಕಂತುಗಳಲ್ಲಿ ಪ್ರಸಾರವಾಗಲಿದೆ.

ಇದರಲ್ಲಿ ಅರ್ಚನಾ ಉಡುಪ, ಗುರುಕಿರಣ್‌ (Gurukiran), ಶ್ರೀನಿವಾಸ್ ಉಡುಪ, ಅಜಯ್‌ ವಾರಿಯರ್‌, ರೆಮೊ ಮೊದಲಾದ ಗಾಯಕರು ಎಸ್‌ಪಿಬಿ (SPB) ಅವರ ಸೊಗಸಾದ 24 ಹಾಡುಗಳನ್ನು ಹಾಡುತ್ತಾರೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೊತೆಗಿನ ಒಡನಾಟವನ್ನು ಅರ್ಚನಾ ಉಡುಪ ಹಂಚಿಕೊಂಡಿದ್ದಾರೆ.

ಮುರಿದ ಚೇರ್, ಲೈಟ್ಸ್, ಪರದೆ ಇಲ್ಲದ ಸ್ಟೇಜ್: ಅಶಿಸ್ತು ಕಾಣ್ತಿದ್ದ ವೇದಿಕೆಯಲ್ಲೂ ಪ್ರೀತಿಯಿಂದ ಹಾಡ್ತಿದ್ರು SPB

‘ಎದೆ ತುಂಬಿ ಹಾಡುವೆನು (Ede Tumbi Haaduvenu) ಹಾಡುಗಳ ಕಾರ್ಯಕ್ರಮದಿಂದ ಎಸ್‌ಪಿಬಿ ಅವರ ಜೊತೆಗೆ ಹಾಡುವ ಹಾಗೂ ಒಡನಾಟ ನಡೆಸುವ ಅವಕಾಶ ಸಿಕ್ಕಿತು. ಈ ಹಾಡಿನ ಕಾರ್ಯಕ್ರಮ ನಡೆಯುತ್ತಿರುವ ದಿನಗಳಲ್ಲೇ ನನ್ನ ಮದುವೆಯಾಯಿತು. ಆಶೀರ್ವಾದ ಮಾಡೋದಕ್ಕೆ ಬಾಲು ಸರ್‌ ಬಂದಿದ್ರು. ನನಗೆ ಮಗಳು ಹುಟ್ಟಿದ ನಂತರ ಅವಳನ್ನು ಕಾರ್ಯಕ್ರಮಕ್ಕೆ ಕರಕೊಂಡು ಹೋಗಿದ್ದೆ. ಹೀಗೆ ನನ್ನ ಬದುಕಿನ ಮಹತ್ವದ ಕ್ಷಣಗಳಲ್ಲಿ ಅವರಿದ್ದರು. 'ಹಾಡಿ ದೊಡ್ಡಪ್ಪಾ.'.  ಎಂದು ನಾನು ಕೇಳಿ ಕೊಂಡಾಗಲೆಲ್ಲಾ ಅವರು ನೋ ಅಂತ ಹೇಳಲೇ ಇಲ್ಲ. ನನ್ನ ಎಲ್ಲಾ ಕಾರ್ಯಕ್ರಮಗಳಿಗೆ, ರೆಕಾರ್ಡಿಂಗ್‌ಗಳಿಗೆ ಬಂದು ಹಾಡಿದ್ದಾರೆ. ಸಂಭಾವನೆ ಬಗ್ಗೆ ಕೇಳಿದಾಗ ಬೈದಿದ್ದಾರೆ. ಈ ಥರದ ದೇವತಾ ಮನುಷ್ಯ ಕಾಲವಾದ ನಂತರವೂ ಅವರ ಹೆಸರಿನಲ್ಲಿ ಹೀಗೊಂದು ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಹೋಗುವ ಇರಾದೆ ನನ್ನದು. ಎಸ್‌ಪಿಬಿ ಅವರ ಮೇಲಿನ ಪ್ರೀತಿಯಿಂದ ಗಾಯಕರು ತುಂಬು ಮನಸ್ಸಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ,’ ಎಂದಿದ್ದಾರೆ ಅರ್ಚನಾ ಉಡುಪ.

Tribute to S. P. Balasubrahmanyam Noorondu Nenapu in Archana Udupa Youtube channel vcs

'ದೀಪ ಹಚ್ಚುತ್ತಿದ್ದ ಹಾಗೆ ಪ್ರಸಾದದಂತೆ ಥಟ್ಟನೆ ಉದುರಿದ ಹೂವು, ಮೈ ನವಿರೇಳಿಸಿದ ಕ್ಷಣ.. ನನಗೆ ಗೊತ್ತು, ನನ್ನ ದೊಡ್ಡಪ್ಪ ನನ್ನ ಜೊತೆಗೇ ಇದ್ದಾರೆ ಎಂದು. ಈ ಸುಂದರ ಘಳಿಗೆಯನ್ನು ಸೆರೆ ಹಿಡಿದಿರುವ ಕಾತ್ಯಾಯನಿಗೆ ಧನ್ಯವಾದಗಳು,' ಎಂದು ಬರೆದುಕೊಂಡು ಎಸ್‌ಪಿಬಿ ಅವರ ಫೋಟೋಗೆ ಪೂಜೆ ಸಲ್ಲಿಸುತ್ತಿದ್ದಾರೆ, ಅರ್ಚನಾ. ತಮ್ಮ ಸೋಷಿಯಲ್ ಮೀಡಿಯಾ (Social Media) ಪುಟಗಳಲ್ಲಿ  ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿರುವವರ ಗ್ರೂಪ್ ಫೋಟೋ ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಎಸ್ಪಿಬಿ ನಟಿಸಿದ ಚಿತ್ರ ಹಿಂದಿಗೆ ರೀಮೇಕ್:
ಜನವರಿಯಲ್ಲಿ ಕೇಂದ್ರ ಸರ್ಜಾರ (Central Government) ಅತ್ಯುನ್ನತ ಪದ್ಮ ಪ್ರಶಸ್ತಿ (Padma Award)ಯನ್ನು ಪ್ರಕಟಿಸಿತ್ತು. ಪದ್ಮ ವಿಭೂಷಣ (Padma Vibhushana) ಪ್ರಶಸ್ತಿಯನ್ನು ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿಲಾಗಿತ್ತು.  ಬೆರಳೆಣಿಕೆಯ ಸಿನಿಮಾಗಳಲ್ಲಿ ಎಸ್‌ಪಿಬಿ ನಟಿಸಿದ್ದಾರೆ. ಅದರಲ್ಲಿ ಒಂದು ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದ್ದು, ಬಾಲಿವುಡ್‌ನಲ್ಲಿ ಬಿಗ್ ಬಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಚಿತ್ರ ಅನೌನ್ಸ್ ಮಾಡುವುದಾಗಿ ಬಾಲಿವುಡ್ (Bollywood) ಖ್ಯಾತ ನಿರ್ಮಾಣ ಸಂಸ್ಥೆಯೊಂದು ಈ ಹಿಂದೆಯೇ ಪ್ರಕಟಿಸಿತ್ತು.

800 ಮಿ. ಲೀ ಗಾಳಿ, ಎಸ್‌ಪಿಬಿ ಹಾಡುಗಳ ಹಿಂದಿನ ರಹಸ್ಯ!

ಮಳೆಯಲ್ಲಿಯೇ ನಿಂತು ಹಾಡಿದ್ದ ಗಾನ ಗಾರುಡಿಗ:
2006ರಲ್ಲಿ ರಂಭಾಪುರಿ ಪೀಠ ಆವರಣದಲ್ಲಿ ಸಂಜೀವಿನಿ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ದಿನ ಧಾರಾಕಾರ ಮಳೆ ಸುರಿದ ಕಾರಣ ಸಂಗೀತ ಸಂಜೆ ನಡೆಸಲು ಆಗಿರಲಿಲ್ಲ. ಮಲೆನಾಡಿಗೆ ಬಂದ ಅವರು ಹಾಗೇ ವಾಪಸ್ಸು ತೆರಳಲು ಮನಸ್ಸಾಗದೇ  ಹಾಗೂ ನೆರೆದಿದ್ದ ಸಂಗೀತಾಭಿಮಾನಿಗಳಿಗೆ ನಿರಾಸೆ ಮಾಡಬಾರದು, ಎಂಬ ಉದ್ದೇಶದಿಂದ ಹಾಡು ಹಾಡಿದ್ದರಂತೆ.  ಸಂಗೀತ ಸಂಜೆಗೆ (Musical Evening) ನಿರ್ಮಿಸಿದ್ದ ಬೃಹತ್  ವೇದಿಕೆಯಲ್ಲಿ ಧಾರಾಕಾರ ಮಳೆ ನಡುವೆಯೂ ಎಸ್‌ಪಿಬಿ ಅವರು ಛತ್ರಿ ಹಿಡಿಸಿಕೊಂಡೇ ಒಂದು ಹಾಡನ್ನು ಹಾಡಿದ್ದರಂತೆ. 

"

ಮತ್ತೆ ಆರಂಭವಾದ ಎದೆ ತುಂಬಿ ಹಾಡುವೆನು:
ಎಸ್‌ಪಿಬಿ ಅವರು ಆರಂಭಿಸಿಕೊಂಡು ಬಂದಿರುವ ಸಂಗೀತ ರಿಯಾಲಿಟಿ ಶೋ (Reality Show) 'ಎದೆ ತುಂಬಿ ಹಾಡುವೇನು' ಕೂಡ ಆರಂಭವಾಗಿದೆ. ಗಾಯಕ ರಾಜೇಶ್ ಕೃಷ್ಣನ್ (Rajesh Krishnan), ಗುರು ಕಿರಣ್ (Guru Kiran) , ರಘು ದೀಕ್ಷಿತ್ (Raghu Dixit) ಹಾಗೂ ಹರಿಕೃಷ್ಣ (Harikrishna) ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಎಸ್‌ಪಿಬಿ ಅವರ ಮೇಣದ ಪ್ರತಿಮೆಯನ್ನು ವೇದಿಕೆ ಮೇಲೆ ಇರಿಸಿ, ಪ್ರತೀ ವೀಕೆಂಡ್ ಕಾರ್ಯಕ್ರ ಶುರು ಮಾಡಲಾಗುತ್ತದೆ. ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ಈ ಕಾರ್ಯಕ್ರಮ ಅತಿ ಹೆಚ್ಚು ಟಿಆರ್‌ಪಿ (TRP) ಪಡೆಯುತ್ತಿದೆ.

 

Follow Us:
Download App:
  • android
  • ios