1. ಕರ್ಣನ್: ಧನುಷನ್ ನಟನೆಯ ತಮಿಳು ಸಿನಿಮಾ. ಅಮೆಜಾನ್‌ನಲ್ಲಿ ತೆರೆಕಂಡಿದೆ. ಮಾರಿ ಸೆಲ್ವರಾಜ ನಿರ್ದೇಶನದ ಚಿತ್ರವಿದು. ಹಿಂದುಳಿದ ಹಳ್ಳಿಗೆ ಬಸ್ ಸೌಲಭ್ಯಕ್ಕಾಗಿ ನಡೆಯುವ ಹೋರಾಟದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಸದ್ಯ ಅತೀ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಸಿನಿಮಾ ಇದು.

ಸ್ಟಾರ್ ಸಿನಿಮಾಗಳು ಓಟಿಟಿಯಲ್ಲಿ ತೆರೆಕಾಣಲಿವೆಯೇ; 'ರಾಧೆ' ಬೆನ್ನಿಗೇ ಶುರುವಾಗಿದೆ ಲೆಕ್ಕಾಚಾರ 

2. ಅಪರೇಷನ್ ಜಾವಾ: ಸೈಬರ್ ಕ್ರೈಮ್ ಕತೆಯ ಹಿನ್ನೆಲೆಯಲ್ಲಿ ಸಾಗುವ ಕ್ಲಾಸಿಕ್ ಕ್ರೈಮ್ ಕತೆ. ತರುಣ್ ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಬಾಲು ವಿಘ್ನೇಶನ್, ಬಿನು ಪಾಪು, ಮಮಿತಾ ಬಿಜು ಮುಂತಾದವರು ನಟಿಸಿದ್ದಾರೆ. ಮಲಯಾಳಂನ ಈ ಚಿತ್ರವನ್ನು ಜೀ 5 ಓಟಿಟಿಯಲ್ಲಿ ನೋಡಬಹುದು.

3. ನಯಾಟ್ಟು: ಮಾರ್ಟಿನ್ ಪ್ರಕ್ಕಾಟ್ ನಿರ್ದೇಶನದ ಮಲಯಾಳಂ ಸಿನಿಮಾ. ನೆಟ್ ಪ್ಲಿಕ್‌ಸ್ನಲ್ಲಿ ಈ ಚಿತ್ರ ನೋಡಲು ಲಭ್ಯವಿದೆ. ಜೋಜು ಜಾರ್ಜ್, ಅನಿಲ್, ಜಾಫರ್ ಇದ್ದುಕಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಇನ್‌ಸೈಡ್ ಸ್ಟೋರಿಯನ್ನು ಅದ್ಬುತವಾಗಿ ತೆರೆ ಮೇಲೆ ತರಲಾಗಿದೆ. ಸ್ಕ್ರೀನ್ ಪ್ಲೇ ಹಾಗೂ ಕತೆಯ ಕಾರಣಕ್ಕೆ ಈ ಚಿತ್ರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

"

4. ಸಿನಿಮಾ ಬಂಡಿ: ನೆಟ್‌ಪ್ಲಿಕ್‌ಸ್ನಲ್ಲಿ ತೆರೆಕಂಡಿರುವ ತೆಲುಗಿನ ಈ ಚಿತ್ರವನ್ನು ಪ್ರವೀಣ್ ಕಂಡರೇಗುಲ ನಿರ್ದೇಶನ ಮಾಡಿದ್ದಾರೆ. ಇದು ತೆಲುಗು ಚಿತ್ರವಾದರೂ ನಟಿಸಿರುವ ಬಹುತೇಕರು ಕನ್ನಡಿಗರು. ಕರ್ನಾಟಕದ ಕೋಲಾರ ಜಿಲ್ಲೆಯ ತೆಲುಗು ಭಾಷೆಯನ್ನು ಬಳಸಿಕೊಂಡು ರೂಪಿಸಲಾಗಿದೆ. ಹಳ್ಳಿ ಹುಡುಗನೊಬ್ಬ ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟಾಗ ನಡೆಯುವ ಸನ್ನಿವೇಶಗಳೇ ಚಿತ್ರದ ಕತೆ. ಹಾಸ್ಯವೇ ಈ ಚಿತ್ರದ ಜೀವಾಳ. ತ್ರಿಶಾರ, ರಾಮ್ ಚರಣ್, ಉಮಾ ವೈಜಿ, ದಾವಣಿ, ವಿಕಾಸ್ ವಸಿಷ್ಠ ಮುಂತಾದವರು ನಟಿಸಿದ್ದಾರೆ