ನಟಿಯಾಗಲು ಅಮೆರಿಕ ಬಿಟ್ಟು ಬಂದ ಕರಾವಳಿ ಹುಡುಗಿ ಗಾನಾ ಭಟ್!
ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರಕರ್ ‘ಬಬ್ರೂ’ ಎಂಬ ಚಿತ್ರವೊಂದನ್ನು ನಿರ್ಮಿಸಿ, ತೆರೆಗೆ ತರಲು ರೆಡಿ ಆಗಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅಮೆರಿಕಾದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆ ಈ ಚಿತ್ರಕ್ಕಿದೆ.
ಈ ಚಿತ್ರದ ಮೂಲಕ ಹಲವು ಅನಿವಾಸಿ ಕನ್ನಡಿಗರು ಕಲಾವಿದರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಆ ಪೈಕಿ ಒಬ್ಬರು ಗಾನಾ ಭಟ್. ಡಾನ್ಸರ್ ಆಗಿಯೂ ಸಾಕಷ್ಟು ಜನಪ್ರಿಯತೆ ಪಡೆದಿರುವ ಗಾನಾ ಭಟ್, ಮೂಲತಃ ಕರಾವಳಿಯವರು. ಹುಟ್ಟಿದ್ದು, ಬೆಳೆದಿದ್ದೆಲ್ಲ ಮಂಗಳೂರು. ಇಂಜಿನಿಯರಿಂಗ್ ಪದವಿ ಮುಗಿಸಿ, ಉದ್ಯೋಗ ನಿಮಿತ್ತ ಅಮೆರಿಕಾ ಹೋದವರು. ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿ ಕೈ ತುಂಬಾ ಎಣಿಸುತ್ತಿದ್ದರು.
ಟಾಲಿವುಡ್‌ಗೆ ಹಾರಿದ 'ವಜ್ರಕಾಯ'; ಒಂದೇ ಚಿತ್ರಕ್ಕೆ ಏರಿತು ಲಕ್ಷಗಟ್ಟಲೆ ಸಂಭಾವನೆ?
ಅದನ್ನೀಗ ಬಿಟ್ಟು ನಟಿಯಾಗುವ ಕನಸು ಹೊತ್ತು ಚಂದನವನಕ್ಕೆ ಎಂಟ್ರಿ ಆಗುತ್ತಿದ್ದಾರೆ. ಸುಮನ್ ನಗರ್‌ಕರ್ ನಿರ್ಮಾಣದ ‘ಬಬ್ರೂ’ ಚಿತ್ರ ಗಾನಾ ಅವರನ್ನು ನಟಿಯಾಗಿ ಪರಿಚಯಿಸುತ್ತಿದೆ. ಡಾನ್ಸರ್ ಆಗಿದ್ದೇ ನಟಿಯಾಗುವುದಕ್ಕೆ ಪ್ರೇರಣೆ...: ‘ನನಗಾಗಲಿ, ನನ್ನ ಫ್ಯಾಮಿಲಿಗಾಗಲಿ ಯಾವುದೇ ಸಿನಿಮಾದ ಹಿನ್ನೆಲೆ ಇಲ್ಲ. ಆದರೂ ನನಗೆ ಬಾಲ್ಯದಿಂದಲೂ ನಟಿಯಾಗುವ ಆಸೆಯಿತ್ತು. ಪೋಷಕರ ಆಸೆ ಈಡೇರಿಸಲು ಇಂಜಿನಿಯರಿಂಗ್ ಮುಗಿಸಿದೆ. ಜತೆಗೆ ಡಾನ್ಸ್ ತರಬೇತಿಯೂ ಪಡೆದೆ. ಯಾಹೂ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅಮೆರಿಕಾ ಹೋದೆ. ನಿತ್ಯ ಆಫೀಸ್ ಕೆಲಸ, ಜತೆಗೆ ಮನೆ ಕೆಲಸ ಅಂತ ಒತ್ತಡವಿದ್ದರೂ, ಡಾನ್ಸ್ ಬದುಕಿನ ಭಾಗವೇ ಆಗಿತ್ತು.
ನನ್ನದೇ ಯೂಟ್ಯೂಬ್ ಚಾನೆಲ್ ಮೂಲಕ ನಿತ್ಯ ಬಗೆ ಬಗೆಯ ನೃತ್ಯ ಪ್ರಕಾರಗಳನ್ನು ಪರಿಚಯಿಸತೊಡಗಿದೆ. ಆ ಮೂಲಕ ಶುರುವಾಗಿದ್ದು ಆ್ಯಕ್ಟಿಂಗ್ ಜರ್ನಿ’ ಎನ್ನುತ್ತಾರೆ ಗಾನಾ ಭಟ್. ಗಾನಾ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಈಗಾಗಲೇ ಚಿರಪರಿಚಿತೆ. ಅಮೆರಿಕಾದಲ್ಲಿದ್ದಾಗಲೇ ಹಿಂದಿ ಮತ್ತು ಇಂಗ್ಲಿಷ್ ಕಿರುಚಿತ್ರವೊಂದಲ್ಲಿ ಅಭಿನಯಿಸಿದ್ದರಂತೆ.
'ಕೆಟ್ಟದ್ದಕ್ಕೂ, ಒಳ್ಳಯದ್ದಕ್ಕೂ ನಾನೇ ಕಾರಣವಂತೆ, ಇದೆಲ್ಲ ಹೇಗೆ ಸಾಧ್ಯ!'
ಅದಾದ ನಂತರ ತೆಲುಗಿನಲ್ಲಿ ನಟ ನಾನಿ ಅಭಿನಯದ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರದಲ್ಲಿ ನೃತ್ಯಗಾತಿಯಾಗಿ ಕಾಣಿಸಿಕೊಂಡಿದ್ದರಂತೆ. ಕನ್ನಡಕ್ಕೀಗ ‘ಬಬ್ರೂ’ ವಾಹನ ಏರಿ ಪ್ರವೇಶ ಪಡೆಯುತ್ತಿದ್ದಾರೆ. ‘ಯೂಟ್ಯೂಬ್ ಚಾನಲ್‌ನಲ್ಲಿ ಡಾನ್ಸ್ ಫರ್‌ಫಾರ್ಮೆನ್ಸ್ ನೋಡಿಯೇ ನನಗೆ ನಟನೆಯ ಅವಕಾಶ ಬಂದಿದ್ದು. ಸುಜಯ್ ರಾಮಯ್ಯ ಮೂಲಕ ‘ ಬಬ್ರೂ’ ಸಿನಿಮಾ ಅವಕಾಶ ಸಿಕ್ಕಿತು’ ಎಂದು ತಮ್ಮ ಸಿನಿ ಪಯಣದ ಆರಂಭದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ ಗಾನಾಭಟ್. ‘ಬಬ್ರೂ’ ಚಿತ್ರದಲ್ಲಿ ಗಾನಾ ಭಟ್ ಅವರದ್ದು ಸ್ಪ್ಯಾನಿಷ್ ಹುಡುಗಿಯ ಪಾತ್ರ.