ಕಾರ್ಕಳ ಮೂಲದ ಹಾಸ್ಯ ಸಾಹಿತಿ, ರಂಗಭೂಮಿ ಕಲಾವಿದ ಹಾಗೂ ಸಿನಿಮಾ ಸಹ ನಟ ಶೇಖರ್‌ ಬಂಢಾರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 72 ವರ್ಷ ಶೇಖರ್‌ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಮವಾರ(ಆಗಸ್ಟ್‌ 10) ಬೆಳಗ್ಗೆ ನಿಧನರಾಗಿದ್ದಾರೆ.

ಹಿರಿಯ ರಂಗಭೂಮಿ ನಟಿ, ನಾಡೋಜ ಸುಭದ್ರಮ್ಮ ಮನ್ಸೂರು ಇನ್ನಿಲ್ಲ

ಇಂದ್ರ ಧನುಷ್, ಸ್ವಲ್ಪ ಅಡ್ಜಸ್ಟ್‌ ಮಾಡ್ಕೊಳ್ಳಿ, ಐದೊಂದ್ಲಾ ಐದು, ಏಕಾಂಗಿ, ತಮಾಷೆಗಾಗಿ, ಕೋಟಿ ಚೆನ್ನಯ್ಯ ಹಾಗೂ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಜಯ ಬ್ಯಾಂಕ್‌ನ ವಿಜಯಶ್ರೀ ಪ್ರಶಸ್ತಿ, ಡಾ. ರಾಜ್‌ಕುಮಾರ್ ಸದ್ಭವನಾ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಡಾ. ಶಿವರಾಮ್ ಕಾರಂತ್ ಸದ್ಭಾವನಾ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮಡಿಲಿಗೇರಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಹಿರಿಯ ನಟ ಹುಲಿವನ್ ಗಂಗಾಧರ್‌ ಇನ್ನಿಲ್ಲ!

ಇತ್ತೀಚಿಗೆ 'ಮಸ್ತಕದಿಂದ ಪುಸ್ತಕಕ್ಕೆ' ಕೃತಿಯನ್ನು ಪ್ರಕಟಿಸಿದ್ದರು. ವಿಜಯ ಬ್ಯಾಂಕ್ ನ  ವೃತ್ತಿಯಿಂದ ನಿವೃತ್ತರಾಗಿದ್ದ  ಶೇಖರ್‌ ಅವರು  ಪತ್ನಿ ವಾರಿಜಾ ಶೇಖರ್ ಹಾಗೂ ಮಕ್ಕಳಾದ ಪ್ರೀತಿ ಪದ್ಮನಾಭ್‌ ಮತ್ತು ಸ್ವಾತಿ ಶರತ್‌ ಅವರನ್ನು ಅಗಲಿದ್ದಾರೆ. ಶೇಖರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.