Asianet Suvarna News Asianet Suvarna News

ಅಯ್ಯಯ್ಯೋ ಮಾಮ.. ಪಂಚೇಲಿ ಸೂಸೂ ಮಾಡ್ಕೊಂಡ... ಸೋ ಡರ್ಟಿ ಅಲ್ವಾ...

ರಕ್ಷಿತ್​ ಶೆಟ್ಟಿ ಅವರ ಚಾರ್ಲಿ ಸಿನಿಮಾ ನೋಡಿದ ಚಿರು ಪುತ್ರ ರಾಯನ್​ ಹೇಳಿರುವ ಮಾತು ಸಕತ್​ ಸದ್ದು ಮಾಡುತ್ತಿದೆ.
 

The words of Chirus son Rayan who saw a movie of Dhruva Sarja is viral suc
Author
First Published Nov 2, 2023, 4:55 PM IST

ಮೇಘನಾ ರಾಜ್​ (Meghana Raj) ತತ್ಸಮ ತತ್ಭದ ಚಿತ್ರದ ಖುಷಿಯಲ್ಲಿದ್ದಾರೆ. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಮೇಘನಾ, ಕೆಲ ವರ್ಷಗಳ ಗ್ಯಾಪ್​ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೇ ವೇಳೆ, ಧ್ರುವಾ ಸರ್ಜಾ ಅವರು ಕೆಲ ದಿನಗಳ ಹಿಂದೆ ಎರಡನೆಯ ಮಗುವಿನ ಅಪ್ಪ ಆಗಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್‌ನಲ್ಲಿ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.  ಪುಟ್ಟ ಕೃಷ್ಣನ ಆಗನದಲ್ಲಿದ್ದ ದಂಪತಿಗೆ ಮುದ್ದು ಕೃಷ್ಣನೇ ಹುಟ್ಟಿದ್ದಾನೆ. ಈ ಕುರಿತು  ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಹಿತಿ ನೀಡಿದ್ದರು.  "ಮಗು ಜನಿಸಿದೆ. ನಾರ್ಮಲ್ ಡೆಲಿವರಿ' ಎಂದು ಬರೆದುಕೊಂಡಿದ್ದರು. ಅಂದಹಾಗೆ ಧ್ರುವಾ ಅವರಿಗೆ  ಮೊದಲ ಮಗು ಹೆಣ್ಣು. ಕಳೆದ ವರ್ಷದ ಅಕ್ಟೋಬರ್​ 2ರಂದು ಹುಟ್ಟಿರುವ ಪುಟಾಣಿಗೆ ಇಂದು ಒಂದನೇ ಹುಟ್ಟುಹಬ್ಬದ ಸಂಭ್ರಮ. ಈ ಪಾಪುವಿಗೆ ಇನ್ನೂ ನಾಮಕರಣ ಮಾಡಲಿಲ್ಲ. 

ಅದೇ ಇನ್ನೊಂದೆಡೆ ಕಳೆದ ಅಕ್ಟೋಬರ್​ 22ರಂದು  ಮೇಘನಾ ರಾಜ್​ ಹಾಗೂ ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್​ ಸರ್ಜಾನ ಮೂರನೆಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.  ಅಕ್ಟೋಬರ್​ 22ರ 2020ರಂದು ಹುಟ್ಟಿರುವ ರಾಯನ್​ ಈಗ ಸಕತ್​ ಚೂಟಿ. ಕೆಲ ದಿನಗಳ ಹಿಂದೆ ಧ್ರುವ ಅವರ ಮೊದಲ ಮಗುವಿನ ಒಂದನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂದರ್ಭದಲ್ಲಿ  ರಾಯನ್​ ತನ್ನ ತಂಗಿಯ ಜೊತೆ ಮಾತನಾಡುತ್ತಿದ್ದು, ಅದರ ವಿಡಿಯೋ ವೈರಲ್​ ಆಗಿತ್ತು. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದ್ದು, ಸೋ ಕ್ಯೂಟ್​ ಎಂದಿದ್ದರು ಫ್ಯಾನ್ಸ್​​. ಅಣ್ಣನನ್ನು ತದೇಕ ಚಿತ್ತದಿಂದ  ನೋಡುತ್ತಿರುವ ಪುಟಾಣಿ ತನ್ನದೇ ತೊದಲು ಭಾಷೆಯಲ್ಲಿ ಅಣ್ಣನಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರಾಯನ್​ ಕೂಡ ಅದರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾನೆ. ಮೇಘನಾ ರಾಜ್​ ಮಗಳನ್ನು ಎತ್ತಿಕೊಂಡಿದ್ದು, ಮಗನಿಗೆ ಏನು ಮಾತನಾಡಬೇಕು ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಈ ಕ್ಯೂಟ್​ ವಿಡಿಯೋಗೆ ಫ್ಯಾನ್ಸ್ ಫಿದಾ ಆಗಿದ್ದರು.

ಧ್ರುವ ಸರ್ಜಾ ಪತ್ನಿಗೆ ಫೆವರೇಟ್​ ಯಾರು? ಒಂದು ವರ್ಷದ ಪುತ್ರಿ ಹೇಳ್ತಾಳೆ ಕೇಳಿ: ಕ್ಯೂಟ್​ ವಿಡಿಯೋ ವೈರಲ್​

ಇದೀಗ ರಾಯನ್ (Rayan)   ಅಕ್ಟೋಬರ್​ 6ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ನಿಮಿತ್ತ  ಮೇಘನಾ ರಾಜ್​ ಕ್ಯೂಟ್​ ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಧ್ರುವ  ರಾಯನ್​ಗೆ ಡ್ಯಾನ್ಸ್ ಕಲಿಸುವುದನ್ನು ನೋಡಬಹುದು. ಚಿಕ್ಕಪ್ಪ ಹೇಳಿಕೊಟ್ಟಂತೆಯೇ ಡ್ಯಾನ್ಸ್​ ಮಾಡುವ ರಾಯನ್​ ಮುಗ್ಧತೆಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕೊನೆಯಲ್ಲಿ ಧ್ರುವ ಸರ್ಜಾ ರಾಯನ್​ನನ್ನು  ಎತ್ತಿ  ಮುದ್ದಾಡಿದ್ದಾರೆ.  ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ರಾಯನ್​ಗೆ  ಧ್ರುವ ಹೇಳಿಕೊಟ್ಟಿರುವುದನ್ನು ನೋಡಬಹುದು.  ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸುವುದನ್ನು ನೋಡಬಹುದು.

ಇದೀಗ ನಟ ರಕ್ಷಿತ್​ ಶೆಟ್ಟಿ ಅವರ ವಿಡಿಯೋ ಅನ್ನು ಟಿವಿಯಲ್ಲಿ ನೋಡಿದ ರಾಯನ್​ ತನ್ನ ಮುದ್ದು ಭಾಷೆಯಲ್ಲಿ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಪಂಚೆಯಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಅದನ್ನು ನೋಡಿದ ರಾಯನ್​ಗೆ ಅದೇನು ಅನ್ನಿಸಿತೋ ಗೊತ್ತಿಲ್ಲ. ಪಂಚೆ ಒದ್ದೆಯಾಗಿರುವುದನ್ನು ನೋಡಿದ ಆತ, ಅಯ್ಯಯ್ಯೋ ಧ್ರುವ ಮಾಮ.. ಪಂಚೇಲಿ ಸೂಸೂ ಮಾಡ್ಕೊಂಡ... ಎಂದು ಹೇಳಿದ್ದಾನೆ. ಅದಕ್ಕೆ ಮೇಘನಾ ಅವರು ಎಷ್ಟೊಂದು ಡರ್ಟಿ ಅಲ್ವಾ ಎಂದು ಕೇಳಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ಮುದ್ದು ಕಂದನ ಮಾತಿಗೆ ಫಿದಾ ಆಗಿದ್ದಾರೆ. ಸೋ ಕ್ಯೂಟ್​ ಎಂದೆಲ್ಲಾ ಕಮೆಂಟ್​ ಹಾಕುತ್ತಿದ್ದಾರೆ.

ಧ್ರುವ ಸರ್ಜಾ 11 ವರ್ಷದ ಬಳಿಕ ಮತ್ತೊಮ್ಮೆ ಎ.ಪಿ.ಅರ್ಜುನ್ ಸಿನಿಮಾ ಮಾಡಿದ್ದಾರೆ. ಅದುವೇ ಮಾರ್ಟಿನ್ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರೇ ಕಥೆ ಮಾಡಿಕೊಟ್ಟಿದ್ದಾರೆ. ಈ ಕಥೆಯನ್ನೆ ಡೈರೆಕ್ಟರ್ ಎ.ಪಿ.ಅರ್ಜುನ್ ಅದ್ಭುತವಾಗಿಯೇ ತೆಗೆದಿದ್ದಾರೆ. ಇನ್ನೇನು ಈ ಚಿತ್ರ ರಿಲೀಸ್ ಆಗುತ್ತಿದೆ. ಆದರೆ ಜೋಗಿ ಪ್ರೇಮ್ ಡೈರೆಕ್ಷನ್‌ ಮಾಡ್ತಿರೋ ಕೆಡಿ ಸಿನಿಮಾ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಬಗ್ಗೆನೂ ಭಾರೀ ದೊಡ್ಡ ನಿರೀಕ್ಷೆ ಇದೆ ಅಂತಲೂ ಹೇಳಬಹುದು. ಚಿತ್ರ ಬರುವ ಡಿಸೆಂಬರ್​ನಲ್ಲಿ ತೆರೆ ಕಾಣಲಿದೆ. ಅದೇ ಇನ್ನೊಂದೆಡೆ, ಮೇಘನಾ ರಾಜ್​ ಬಹಳ ವರ್ಷಗಳ ಬಳಿಕ  ತತ್ಸಮ ತತ್ಭದ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಿರು ಪುತ್ರನಿಗೆ ಡ್ಯಾನ್ಸ್​ ಹೇಳಿಕೊಟ್ಟ ಧ್ರುವ: ಪುಟಾಣಿ ರಾಯನ್​ ಸ್ಟೆಪ್​ಗೆ ಸೋ ಸ್ವೀಟ್​ ಎಂದ ಫ್ಯಾನ್ಸ್​

Follow Us:
Download App:
  • android
  • ios