ವಿಕ್ರಾಂತ್ ರೋಣ ತಂಡದಿಂದ ಹೊಸ ಸರ್ಪೈಸ್ | ಕಿಚ್ಚ ಕೊಟ್ರು ಹಿಂಟ್ | ಎ.15ಕ್ಕೆ ರೆಡಿಯಾಗಿ
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಫ್ಯಾನ್ಸ್ ಈಗಾಗಲೇ ಸಿನಿಮಾ ಪೋಸ್ಟರ್, ಟೀಸರ್ ನೋಡಿ ಥ್ರಿಲ್ ಆಗಿದ್ದಾರೆ. ಈಗ ಚಿತ್ರತಂಡ ಮೊತ್ತೊಂದು ಸರ್ಪೈಸ್ ಕೊಡೋಕೆ ರೆಡಿಯಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಎಲ್ಲರೂ ರೆಡಿಯಾಗಿರಿ ಎಂದು ಹೇಳಿದ್ದಾರೆ. ಎ.15ರಂದು ಒಂದು ಸರ್ಪೈಸ್‌ಗಾಗಿ ರೆಡಿಯಾಗಿ, 11.10ಕ್ಕೆ ರೆಡಿಯಾಗಿರಿ ಎಂದಿದ್ದಾರೆ ಸುದೀಪ್.
ಸುದೀಪ್ ಸಿನಿ ಜರ್ನಿಯ ಸಿಲ್ವರ್‌ಜುಬಿಲಿ;ವಿಕ್ರಾಂತ್ ರೋಣ 3ಡಿ ಸಿನಿಮಾ!
ಕಿಚ್ಚ ಸುದೀಪ್ 15th April ,, 11.10am... Await the surprise ... ಎಂದು ಟ್ವೀಟ್ ಮಾಡಿದ್ದು ಇದಕ್ಕೆ ಈಗಾಗಲೇ ಕೆಲವೇ ಹೊತ್ತಲ್ಲಿ 1300ಕ್ಕೂ ಹೆಚ್ಚು ರೀಟ್ವೀಟ್, ಎರಡೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
Scroll to load tweet…
