Asianet Suvarna News Asianet Suvarna News

ಮೇಘನಾ ರಾಜ್​ ಸಿನಿಮಾ ನೋಡಿ, ಸ್ಕ್ಯಾನ್​ ಮಾಡಿ: ವೀಕ್ಷಕರಿಗೆ ಉಡುಗೊರೆಗಳ ಮಹಾಪೂರ!

 ನಟಿ ಮೇಘನಾ ರಾಜ್​ ಅವರ ತತ್ಸಮ ತದ್ಭವ ಚಿತ್ರ ಇದೇ 15 ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಟಿಕೆಟ್​ ಕೊಂಡವರಿಗೆ ಭರ್ಜರಿ  ಆಫರ್​ ನೀಡಲಾಗಿದೆ. ನಟಿ ಹೇಳಿದ್ದೇನು? 
 

Tatsama Tadbhava film ticket buyers  have been given a great offer suc
Author
First Published Sep 8, 2023, 3:41 PM IST

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲ ವರ್ಷಗಳ ಬಳಿಕ ತತ್ಸಮ ತತ್ಭವ ಚಿತ್ರದ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ.  ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.  ವರ್ಷಗಳ ಬಳಿಕ ಈಗ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ  ಮೇಘನಾ ರಾಜ್‌.  ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರವು ಇದೇ 15ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿದ್ದವು. ಇದು ಮಹಿಳಾ ಪ್ರಧಾನ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಅವರ ಕಂಬ್ಯಾಕ್ ಸಿನಿಮಾ  ‘ತತ್ಸಮ ತದ್ಭವ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದೆ  ರಿಲೀಸ್ ಆಗಿತ್ತು. ಇದಕ್ಕೆ ಸಕತ್​ ರೆಸ್ಪಾನ್ಸ್​ ಸಿಕ್ಕಿದೆ.  ಅದಕ್ಕೂ ಮುನ್ನ    ಮೇ 3ರ ಅವರ ಹುಟ್ಟುಹಬ್ಬದಂದು  ‘ತತ್ಸಮ ತದ್ಭವ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್​ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದರು. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿತ್ತು. ನಂತರ ಟೀಸರ್ ನೋಡಿ ಇನ್ನಷ್ಟು  ಕುತೂಹಲ ಮೂಡಿದೆ.

ಇದೀಗ ಈ ಚಿತ್ರ (Tatsama Tadbhava) ನೋಡಿದರೆ ಹಲವಾರು ಆಫರ್​ಗಳು ಇವೆ ಎಂದು ಮೇಘನಾ ರಾಜ್​ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ನೀವು ನಮ್ಮ ಮೇಲೆ ಇಟ್ಟಿರುವ ಪ್ರೀತಿ ತತ್ಸಮವಾದರೆ, ನಾವು ನಿಮ್ಮ ಮೇಲೆ ಇಟ್ಟಿರೋ ಪ್ರೀತಿ ತದ್ಭವ ಎಂದಿರೋ ಮೇಘನಾ, ಈ ಚಿತ್ರವನ್ನು ನೋಡಿದವರಿಗೆ ಇರುವ ಆಫರ್​ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಚಿತ್ರದ ಟಿಕೆಟ್​ ಕೊಂಡುಕೊಳ್ಳುವವರಿಗೆ ಹಲವಾರು ಸುವರ್ಣಾವಕಾಶಗಳು ಇವೆ ಎಂದು ಅವರು ಹೇಳಿದ್ದಾರೆ. ಅದರಲ್ಲಿ ಲಿಯಾನ್ಸ್​ ಬರ್ಗರ್​ನ ಉಚಿತ ತಿನಿಸು, ಸ್ಟೋನ್​ ಸ್ಟ್ರೀಟ್​ನಿಂದ ಉಚಿತ ಬಿಯರ್​, ಐಕಾನಿಂಗ್​ ರೆಸ್ಟೋ ಪಬ್​ನಿಂದ ಉಚಿತ ಬಿಯರ್​, ಟೋನಿ ಕಂಪೆನಿಯಿಂದ 10 ಪರ್ಸೆಂಟ್​ ಉಚಿತ ಕೊಡುಗೆ, ತಿರುಮಲ ಗ್ರೂಪ್​ನಿಂದ ಐದು ಲಕ್ಷದವರೆಗೆ ಉಚಿತ ಕೊಡುಗೆ ಸೇರಿದಂತೆ ಹಲವಾರು ಕೊಡುಗೆಗಳನ್ನು ಅವರು ಹೇಳಿದ್ದಾರೆ. 

ಮೇಘನಾ ರಾಜ್​ ತತ್ಸಮ-ತದ್ಭವ ಟ್ರೇಲರ್​ ಬಿಡುಗಡೆ: ಅತ್ತಿಗೆಯ ಡೈಲಾಗ್​ಗೆ ಧ್ರುವ ಸರ್ಜಾ ಕಣ್ಣೀರು!

ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​ (Prajwal Devaraj), ಬಾಲಾಜಿ ಮನೋಹರ್​, ದೇವರಾಜ್​, ಶ್ರುತಿ, ಟಿ.ಎಸ್. ನಾಗಾಭರಣ​ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇದು  ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವುದು ಟ್ರೇಲರ್​ನಲ್ಲಿಯೇ ಕಾಣಬಹುದಾಗಿದೆ. 

 ಚಿತ್ರವು ಕಾಣೆಯಾಗಿರುವ ಪತಿಯ ಹುಡುಕಾಟದ ಕಥೆ ಎಂದು ಹೇಳಲಾಗುತ್ತಿದೆ. ಟ್ರೇಲರ್​ನಲ್ಲಿ ಮೇಘನಾ ರಾಜ್​ ಅವರು, ‘ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆ ಆಗಿದ್ದಾರೆ’ ಎಂದು ದೂರು ನೀಡುತ್ತಾರೆ. ಈ ಕೇಸ್​ ಅನ್ನು  ಪೊಲಿಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ನಡೆಸುತ್ತಾರೆ. ಈ ಟೀಸರ್​ನ ಉದ್ದಕ್ಕೂ ಕುತೂಹಲಕಾರಿ ಸಸ್ಪೆನ್ಸ್ ಅಂಶ ಇದೆ.  ಇದನ್ನು ನೋಡಿದರೆ ಚಿತ್ರದಲ್ಲಿ ಸಾಕಷ್ಟು  ಥ್ರಿಲ್ಲಿಂಗ್ ಅಂಶ ಇದೆ ಎನ್ನುವುದು ತಿಳಿದುಬರುತ್ತದೆ.

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Follow Us:
Download App:
  • android
  • ios