ನಟ ದರ್ಶನ್ ಜೈಲಿನಿಂದ ಬಂದ ಮೇಲೆ ವೈಯಕ್ತಿಕವಾಗಿ ಬದಲಾಗಿದ್ದಾರೆ. ಬೆನ್ನು ನೋವಿನಿಂದ ವಿಶ್ರಾಂತಿ ಪಡೆದು, ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ನಡುವೆ, ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವರನ್ನು ಅನ್‌ಫಾಲೋ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಟ್ಯಾರೋ ಕಾರ್ಡ್ ರೀಡಿಂಗ್ ಪ್ರಕಾರ, ದರ್ಶನ್ ಯಾರ ಸಹಾಯವೂ ಬೇಡವೆಂದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ನಟ ದರ್ಶನ್ ಜೈಲಿನಿಂದ ಹೊರ ಬಂದು ಮೇಲೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ವಿಪರೀತ ಬೆನ್ನು ನೋವು ಇದ್ದ ಕಾರಣ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದಾರೆ ಅದಾದ ಮೇಲೆ ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ನಡೆದಿದ್ದು ಅದಾದ ಮೇಲೆ ರಾಜಸ್ಥಾನದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮಾಡಿದ್ದಾರೆ. ರಾಜಸ್ಥಾನದಿಂದ ಬರ್ತಿದ್ದಂತೆ ಕೋರ್ಟ್‌ಗೆ ಹಾಜರ್ ಆಗಬೇಕಿತ್ತು ಆದರೆ ಬೆನ್ನು ನೋವು ಅಂತ ಹೇಳಿ ಚಕ್ಕರ್ ಹಾಕಿದ್ದಾರೆ.ಆದರೆ ವಾಮನ ಸಿನಿಮಾ ನೋಡಿದ್ದಾರೆ. ಈ ನಡುವೆ ಚರ್ಚೆ ಸೋಷಿಯಲ್ ಮೀಡಿಯಾ ಸಖತ್ ಚರ್ಚೆ ಹುಟ್ಟುಹಾಕಿದೆ.
ಡೆವಿಲ್ ಸಿನಿಮಾ ಶೂಟಿಂಗ್ ಶುರು ಮಾಡುವ ದಿನ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದ ವ್ಯಕ್ತಿಗಳನ್ನು ಡಿಲೀಟ್ ಮಾಡಿದ್ದಾರೆ. ಅದರಲ್ಲಿ ಮದರ್ ಇಂಡಿಯಾ ಮತ್ತು ಅವರ ಮಗ ಕೂಡ ಇದ್ದರು. ಯಾಕೆ ದರ್ಶನ್ ಈ ರೀತಿ ಮಾಡುತ್ತಿದ್ದಾರೆ ಎಂದು ಟ್ಯಾರೋ ಕಾರ್ಡ್ ರೀಡಿಂಗ್ ಮಾಡಿದಾಗ ಸಿಕ್ಕ ಉತ್ತರವಿದು.
ಅಣ್ಣಮ್ಮ ದೇವಸ್ಥಾನಕ್ಕೆ ದುಬಾರಿ ಚೂಡಿದಾರ್ ಧರಿಸಿದ ವಿಜಯಲಕ್ಷ್ಮಿ
'ಒಂದಿಷ್ಟು ದಿನ ವ್ಯಾಕ್ತಿ ಪ್ರದೇಶದಿಂದ ಹೊರಗಿದ್ದರು. ಯಾವಾಗ ಅಗತ್ಯವಿತ್ತು ಆ ಸಮಯದಲ್ಲಿ ವ್ಯಾಕ್ತಿ ಪ್ರದೇಶದಿಂದ ಹೊರ ಉಳಿದುಬಿಟ್ಟರು. ಸುಮಲತಾ ಮೇಡಂ. ನಾನು ನಿರೀಕ್ಷೆ ಮಾಡಿದ ವ್ಯಕ್ತಿಯಿಂದ ನನಗೆ ಸಹಾಯ ಸಿಕ್ಕಿಲ್ಲ. ಇವಾಗ ಇರುವ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಅವಾಯ್ಡ್ ಮಾಡ್ತಿದ್ದಾರೆ ಯಾರೂ ಬೇಡ ಅಂತ. ಯಾರಿಂದಲೂ ತೊಂದರೆ ಆಗುವುದು ಬೇಡ ನನ್ನಿಂದಲೂ ತೊಂದರೆ ಆಗುವುದು ಬೇಡ. ಟಾರೋ ಕಾರ್ಡ್ ರೀಡಿಂಗ್ ಪ್ರಕಾರ ನನಗೆ ಯಾರ ಸಪೋರ್ಟ್ ಬೇಡ ನನಗೆ ನಾನೇ ನಿಂತುಕೊಳ್ಳುತ್ತೀನಿ. ಈಗ ದರ್ಶನ್ ಅವರು ಏನ್ ಅನ್‌ಫಾಲೋ ಮಾಡಿದ್ದಾರೆ ಮಾತನಾಡಿಸುತ್ತಿಲ್ಲ ಅದರ ಹಿಂದೆ ದೊಡ್ಡ ಪ್ಲ್ಯಾನ್ ಇದೆ ಅದು ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಆಗಿರಬಹುದು. ಅವರಿಬ್ಬರ ನಡುವೆ ಇನ್ನೂ 2 ವರ್ಷ ಹೀಗೆ ಇರುತ್ತದೆ, ಕಡಿಮೆ ಮಾತನಾಡುತ್ತಾರೆ ಹಾಗೂ ಇಬ್ಬರು ಬರಬೇಕಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನಡೆದ ಟ್ಯಾರೋ ಕಾರ್ಡ್ ರೀಡಿಂಗ್‌ನಲ್ಲಿ ಈ ರೀತಿ ಹೇಳಲಾಗಿದೆ.
ಬ್ರೇಕಪ್ ಆದ್ಮೇಲೆ ಹಾಟ್ ಆಗ್ಬಿಟ್ರಾ ವರ್ಷ ಕಾವೇರಿ; ಫೋಟೋ ವೈರಲ್!
ದರ್ಶನ್ ಜೈಲಿನಲ್ಲಿ ಇದ್ದಾಗ ಅಭಿಷೇಕ್ ಅಂಬರೀಶ್ ಒಮ್ಮೆ ನೋಡಿಕೊಂಡು ಬರಲು ಹೋಗಿದ್ದರು ಆದಾದ ಮೇಲೆ ಸುದ್ದಿನೇ ಇಲ್ಲ. ದರ್ಶನ್ ಕರ್ಕೊಂಡು ಬರುವುದರಲ್ಲಿ ವಿಜಯಲಕ್ಷ್ಮಿ, ದಿನಕರ್, ಧನ್ವೀರ್ ಮತ್ತು ಲಾಯರ್ ಪಾಲು ಜಾಸ್ತಿ ಇದೆ. ಹೀಗಾಗಿ ಯಾರೂ ಬೇಡ ನಾನು ನನ್ನ ಸಣ್ಣ ಸರ್ಕಲ್ ಮತ್ತು ಫ್ಯಾಮಿಲಿ ಎಂದು ದರ್ಶನ್ ಈ ನಿರ್ಧಾರ ತೆಗೆದುಕೊಂಡಿರಬಹುದು.
