ಲೈಮ್‌ ಲೈಟ್‌ನಲ್ಲಿರುವ ಮಾಡೆಲ್‌ ಕಮ್ ನಟಿ ಮೀರಾ ಮಿಥುನ್ ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದೇ ಕೊಂಡಿದ್ದು, ಎಲ್ಲಿ ನೋಡಿದರೂ ಆಕೆಯ ಫೋಟೋ ಮತ್ತು ನಂಬರ್‌. ಇದಕ್ಕೆ ಕಾರಣ ಪೋರ್ನ್ ಸೈಟ್‌ಗಳು...

ಹೌದು! ಕಮಲ್‌ ಹಾಸನ್‌ ನಿರೂಪಣೆಯ ಬಿಗ್ ಬಾಸ್‌ ಸೀಸನ್‌ 3 ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಮೀರಾ. ಬಿಗ್ ಬಾಸ್‌ ಮನೆಯಿಂದ ಹೊರ ಬಂದ ನಂತರ ಮೀರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫುಲ್‌ ಹಾಟ್‌ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳನ್ನು ಕಾನೂನು ಬಾಹಿರವಾಗಿ ಪೊರ್ನ್‌ ಸೈಟ್‌ನಲ್ಲಿಯೂ ಕಿಡಿಗೇಡಿಗಳು ಹಾಕಿದ್ದಾರೆ. 

ಮಾಜಿ ಬಿಗ್ ಬಾಸ್‌ ಸ್ಪರ್ಧಿ ನೇಹಾ ಗೌಡ 'Mommy to be' ಪೋಟೋಸ್!

'ತಮಿಳುನಾಡಿನ Cyberbullying ಏನ್‌ ಮಾಡ್ತಿದ್ದೀರಾ? ನನ್ನ ಫೋಟೋ ಮತ್ತು ನಂಬರ್‌ಗಳನ್ನು ಪೋರ್ನ್ ಸೈಟ್‌ಗಳಲ್ಲಿ, ನನ್ನ ಗಮನಕ್ಕೂ ತಾರದೇ ಶೇರ್ ಮಾಡಿಕೊಳ್ಳೂತ್ತಿದ್ದಾರೆ. ನಾನು ಸಾಧನೆ ಮಾಡಿರುವ ವಿಚಾರ ಹಾಗೂ ಫೋಟೋಗಳಿಗೆ ಇದರ ಬಗ್ಗೇನೆ ಕಾಮೆಂಟ್‌ ಬರುತ್ತಿವೆ,' ಎಂದು ಮೋದಿಯನ್ನು ಟ್ಯಾಗ್‌ ಮಾಡಿ ಟ್ಟೀಟ್‌ ಮಾಡಿದ್ದಾರೆ.

ಮೀರಾಳ ನೇರ ನುಡಿ-ನಡೆಗೆ ಬೋಲ್ಡ್ ಆದ ಅಭಿಮಾನಿಗಳು, ಇತ್ತೀಚಿಗೆ ಆಕೆಯ ಬಾತ್‌ರೂ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಬಾತ್‌ ರೂಂನಲ್ಲಿ ಟವಲ್‌ ಧಿರಿಸಿಕೊಂಡು ಮೀರಾ  ಹಾಡೇಳುತ್ತಾ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.