ಸ್ಯಾಂಡಲ್‌ವುಡ್‌ ರೆಬೆಲ್ ಸ್ಟಾರ್ ಅಂಬರೀಶ್‌ ಹಾಗೂ ಸುಮಲತಾ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಇಂದಿಗೆ 29 ವರ್ಷ ಕಳೆದಿವೆ.  ಪತಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡು ಟೀನೇಜ್ ಹುಡುಗಿಯಂತೆ ಪ್ರೀತಿ ತುಂಬಿದ ಪದಗಳ ಮೂಲಕ ತಮ್ಮ ಜೀವನದ ಬೆಸ್ಟ್ ದಿನವನ್ನು ನೆನಪಿಸಿಕೊಂಡಿದ್ದಾರೆ. 

ಅಂಬರೀಶ್ ಎರಡನೇ ಪುಣ್ಯ ತಿಥಿ; ಪತಿ ನೆನೆದು ಬರೆದ ಭಾವುಕ ಸಾಲುಗಳಿವು! 

ಸುಮಲತಾ ಪೋಸ್ಟ್:
'ಇಂದಿಗೆ 29 ವರ್ಷ. ನನಗೆ ಪಾಠ ಹೇಳಿ ಕೊಟ್ಟ ಪ್ರೀತಿ. ಎಷ್ಟೋ ವಿಚಾರಗಳನ್ನು ತಿಳಿದಿದ್ದರೂ ಮರೆಯುವಂತೆ ಮಾಡಿತ್ತು. ನನ್ನನ್ನು ಮತ್ತೊಂದು ವ್ಯಕ್ತಿಯನ್ನಾಗಿಸಿದ ಪ್ರೀತಿ, ನಿಮ್ಮ ಬಗ್ಗೆ ಹುಚ್ಚು ಹೆಚ್ಚಿಸಿದ ಪ್ರೀತಿ. ಈ ಪ್ರೀತಿ ನನಗೆ ಒಂದು ಪಾಠ ತೋರಿಸಿಕೊಟ್ಟಿದೆ. ಜೀವನ ಮೀರಿದ್ದು ಪ್ರೀತಿ, ಸಾವನ್ನು ಮೀರಿದ್ದು ಪ್ರೀತಿ. ಪ್ರೀತಿ ಎಂದಿಗೂ ಲೈಫ್‌ಟೈಂ. ಶಾಶ್ವತವಾಗಿ ಉಳಿಯುತ್ತದೆ,' ಎಂದು ಸುಮಲತಾ ಬರೆದಿದ್ದಾರೆ.

 

ಖಾಸಗಿ ಕಾರ್ಯಕ್ರಮವೊಂದರಲ್ಲಿ ಅಂಬರೀಶ್ ಸುಮಲತಾಗೆ ಗುಲಾಬಿ ಹೂ ಕೊಟ್ಟು ಪ್ರಪೋಸ್‌ ಮಾಡಿದ್ದರು. ನಂತರ ವೇದಿಕೆ ಮೇಲೆಯೇ ನಿಂತು ಪತ್ನಿಗೆ ಮುತ್ತಿಟ್ಟಿದ್ದಾರೆ. ಈ ಮೂರು ಪೋಟೋಗಳನ್ನು ಸುಮಲತಾ ಶೇರ್ ಮಾಡಿಕೊಂಡಿದ್ದಾರೆ. ' ನೀವಿಬ್ಬರು Fablous ಜೋಡಿ' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

'ಈ ಪ್ರೀತಿಗೆ ನಾನೇನು ಕೊಡಲಿ' ಅಂಬಿ ಸ್ಮರಣೆಯಲ್ಲಿ ಸುಮಲತಾ ಭಾವುಕ 

ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ನಟ ಅಂಬರೀಶ್‌ ಕೊನೆಯುಸಿರೆಳೆದರು. 29ನೇ ವಿವಾಹ ವಾರ್ಷಿಕೋತ್ಸವವನ್ನು ಸುಮಲತಾ ಒಂಟಿಯಾಗಿಯೇ, ಅಗಲಿದ ಅಂಬಿ ಪ್ರೀತಿಯ ನೆನಪುಗಳ ಗುಚ್ಛದೊಂದಿಗೆ ಸ್ಮರಿಸಿದ್ದಾರೆ.