ಸ್ಯಾಂಡಲ್‌ವುಡ್‌ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ ಎರಡು ವರ್ಷಗಳು ಕಳೆದಿವೆ. ಅಭಿಮಾನಿಗಳು, ಆಪ್ತರು ಹಾಗೂ ಪತ್ನಿ ಮತ್ತು ಪುತ್ರ ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಪೂಜೆ ನಡೆಸಲಿದ್ದಾರೆ. 

ಅಂಬರೀಶ್‌ ಮನೆಯಲ್ಲಿ ಸರ್ಜಾ ಕುಟುಂಬ; ಸಸ್ಪೆನ್ಸ್‌ ಕ್ರಿಯೇಟ್ ಮಾಡಿದ ಫೋಟೋ! 

ಪುಣ್ಯತಿಥಿ ಅಂಗವಾಗಿ ಡಿಸೆಂಬರ್ 24ರಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಿದ್ದಾರೆ.  ಅಂಬಿ ಅಭಿಮಾನಿಗಳು ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 

 

ಅಂಬಿ ನೆನೆದು ಪತ್ನಿ ಬರೆದ ಸಾಲುಗಳು:
'ಎರಡು ವರ್ಷಗಳು ಕಳೆದಿವೆ. ನಾನು ಕಣ್ಣು ಮುಚ್ಚಿದರೂ ನಿಮ್ಮನ್ನು ನೋಡಲು ಈಗಲೂ ಬಯಸುತ್ತೇನೆ. ಕಿವಿ ಮುಚ್ಚಿಕೊಂಡರೂ ಎಲ್ಲಾದರೂ ನಿಮ್ಮ ಧ್ವನಿ ಕೇಳಿಸುತ್ತೆನೋ ಎಂಬ ಬಯಕೆ. ಆದರೆ ನನ್ನ ಹೃದಯಕ್ಕೆ ಮುಚ್ಚಿಡಲು ಅಸಾಧ್ಯ. ನಿಮ್ಮ ತುಂಬು ಹೃದಯದ ಪ್ರೀತಿ, ವಿಭಿನ್ನ ಭಾವನೆ ಹಾಗೂ ನಿಮ್ಮೊಂದಿಗೆ ಕಳೆದು ಸುಮಧುರ ಕ್ಷಣಗಳನ್ನು ನೀವಿಲ್ಲದ ಈ ಎರಡು ವರ್ಷಗಳಲ್ಲಿ ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಪ್ರತೀ ಕ್ಷಣವೂ ಪ್ರತಿ ದಿನವೂ ನಿಮ್ಮನ್ನು ಸ್ಮರಿಸುತ್ತೇನೆ. ದೇವರು ನನ್ನ ಎದುರಿಗಿಟ್ಟ ಪ್ರತಿ ಕ್ಷಣವನ್ನೂ ಅರ್ಥೈಸಿಕೊಳ್ಳುತ್ತಿರುವೆ, ನಿಮ್ಮಿಂದ ಪಡೆದ ಪ್ರೀತಿ, ನೀವು ತೋರಿಸಿದ ಕಾಳಜಿ ಎಲ್ಲ ಕ್ಷಣವೂ ಮೊಮೋರಿಯಾಗಿರುತ್ತವೆ. ನೀವು ನನ್ನ ಕೈ ಹಿಡಿದು ನಡೆಸುತ್ತಿದ್ದೀರಾ, ಎದುರಾಗುತ್ತಿರುವ ಜಾಲೆಂಜ್‌ಗಳನ್ನು ಎದುರಿಸಲು  ಬೆನ್ನೆಲುಬಾಗಿ ನಿಂತಿದ್ದೀರಿ.  ಕಷ್ಟದ ಕ್ಷಣಗಳಲ್ಲಿ ನನ್ನನ್ನು ಬಿಡದೇ ಜೊತೆಗಿದ್ದೀರಿ. ನೀವು ಬಿಟ್ಹೋಗಿರುವ ಪ್ರೀತಿ ಹಾಗೂ ಪರಂಪರೆ ನಮ್ಮನ್ನು ಮುಂದಿನ ಜೀವನದ ನೆರಳಾಗಿ ನಿಲ್ಲುತ್ತದೆ. ನನ್ನ ಕೊನೆ ಉಸಿರು ಇರೋವರೆಗೂ ನೀವು ನಮ್ಮ ಜೊತೆ ಇರುವಿರಿ. ನಾನು ಅತ್ತರೂ, ನಕ್ಕರೂ, ಹೆದರಿಕೊಂಡರೂ ಸೋತರೂ ನೀವು ಪಕ್ಕದಲ್ಲಿಯೇ ಇರುತ್ತೀರಿ. ಈ ಕ್ಷಣ ನಾನು ಬದುಕುತ್ತಿರುವುದಲ್ಲ, ನೀವು ನನ್ನೊಳಗೆ ಬದುಕುತ್ತಿರುವುದು. ಕೊನೇ ಕ್ಷಣದವರೆಗೂ ನಾವು ಮತ್ತೆ ಒಂದಾಗುವವರೆಗೂ ನನ್ನ ಹೃದಯವನ್ನು ಬಿಗಿಯಾಗಿ ಹಿಡಿದುಕೊಂಡು ಮುಂದೆ ನಡೆಸಿ,' ಎಂದು ಸುಮಲತಾ ಬರೆದಿದ್ದಾರೆ.

ರಾಜಕೀಯಕ್ಕೆ ಅಂಬರೀಷ್ ಪುತ್ರ ಅಭಿಷೇಕ್‌ ಎಂಟ್ರಿ..? 

ರೆಬೆಲ್ ಸ್ಟಾರ್ ಅಂಬರೀಶ್ ಹೃದಯಾಘಾತದಿಂದ ಎರಡು ವರ್ಷಗಳ ಹಿಂದೆ ಕೊನೆಯುಸಿರೆಳೆದರು.