ಮದ್ದೂರು (ನ.08): ಪುತ್ರ ಅಭಿಷೇಕ್‌ ಅಂಬರೀಶ್‌ ರಾಜಕೀಯ ಪ್ರವೇಶ ನಿರ್ಧಾರ ಆತನ ವಿವೇಚನೆಗೆ ಬಿಡಲಾಗಿದೆ ಎಂದು ಸಂಸದೆ ಸುಮಲತಾ ಶನಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರವೇಶ ಮಾಡಿ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಬೇಕು ಎಂದು ನಾನು ಹೇಳುವುದಿಲ್ಲ. ಜನ ನನ್ನನ್ನು ಇಷ್ಟಪಟ್ಟು ಕರೆದರೆ ಬರಬೇಕು ಎಂಬುದು ಆತನ ಬಯಕೆಯಾಗಿದೆ ಎಂದರು. ಅಭಿಷೇಕ್‌ ಚಿತ್ರರಂಗದಲ್ಲಿ ತೊಡಗಿದ್ದಾನೆ. ಆದರೆ, ಈಗ ರಾಜಕೀಯ ಚರ್ಚೆಗಳು ಅನಗತ್ಯ. 

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ..

ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ನನ್ನ ನಿರ್ಧಾರವಾಗಿರುವುದಿಲ್ಲ.

ಚುನಾವಣೆಗಳು ಇನ್ನು ಎರಡು ವರ್ಷಗಳು ಹೆಚ್ಚು ಕಾಲ ಇರುವುದರಿಂದ ಆ ವೇಳೆಗೆ ಜನಾಭಿಪ್ರಾಯ ಪಡೆದುಕೊಂಡು ಆತನ ರಾಜಕೀಯ ಪ್ರವೇಶವನ್ನು ಆತನ ವಿವೇಚನೆಗೆ ಬಿಡಲಾಗುವುದು ಎಂದರು.