ಶಿವರಾತ್ರಿ ಹಬ್ಬಕ್ಕೆ ತೆರೆ ಕಾಣುತ್ತಿರುವ ಕನ್ನಡ ಸಿನಿಮಾಗಳ ಪೈಕಿ ‘ಶಿವಾಜಿ ಸುರತ್ಕಲ್‌’ ಕೂಡ ಒಂದು. ಇದು ರಮೇಶ್‌ ಅರವಿಂದ್‌ ಅಭಿನಯದ ಬಹುನಿರೀಕ್ಷಿತ ಚಿತ್ರ. ಶೆರ್ಲಾಕ್‌ ಹೋಮ್‌ ಶೈಲಿಯ ಕ್ರೈಮ್‌ ಥ್ರಿಲ್ಲರ್‌ ಕತೆಯ ಮೂಲಕ ಸಾಕಷ್ಟುಕುತೂಹಲ ಹುಟ್ಟಿಸಿದ ಸಿನಿಮಾವೂ ಹೌದು.

‘ಬದ್ಮಾಷ್‌’ ಚಿತ್ರದ ನಂತರ ಇಂತಹದ್ದೊಂದು ಕತೆಗೆ ಆ್ಯಕ್ಷನ್‌ ಕಟ್‌ ಹೇಳಿ ಪ್ರೇಕ್ಷಕರ ಮುಂದೆ ಬರುತ್ತಿರುವ ಯುವ ನಿರ್ದೇಶಕ ಆಕಾಶ್‌ ಶ್ರೀವತ್ಸ ಜತೆಗೆ ಮಾತುಕತೆ.

101 ನೇ ಸಿನಿಮಾ, 101 ನೇ ಕೇಸು...

ನಟ ರಮೇಶ್‌ ಅರವಿಂದ್‌ ಅವರಿಗೆ ಇದೊಂದು ಸ್ಪೆಷಲ್‌ ಸಿನಿಮಾ. ಅವರ ಸಿನಿ ಜರ್ನಿಯಲ್ಲಿ ಇದು 101ನೇ ಸಿನಿಮಾ. ಹಾಗೆಯೇ ಚಿತ್ರದ ಕತೆಯಲ್ಲಿ ಅವರು ಒಬ್ಬ ಸೈಬರ್‌ ಕ್ರೈಮ್‌ ಇನ್ಸ್‌ಸ್ಪೆಕ್ಟರ್‌ ಆಗಿ ಭೇದಿಸಲು ಹೊರಟಿದ್ದು ಕೂಡ 101ನೇ ಕೇಸು. ಕಥಾ ನಾಯಕ ಶಿವಾಜಿ ಸುರತ್ಕಲ್‌ ಕೂಡ ಒಬ್ಬ ಅನುಭವಿ ಪತ್ತೇದಾರ. ಆತನ ಅನುಭವಕ್ಕೆ ತಕ್ಕಂತೆ 101ನೇ ಕೇಸಿನ ಪತ್ತೇದಾರಿಕೆ ಸೃಷ್ಟಿಯಲಾಯಿತು.

ಶಿವಾಜಿ ಸುರ​ತ್ಕ​ಲ್‌ ಟ್ರೇಲ​ರ್‌ಗೆ ಮೆಚ್ಚು​ಗೆ; ಕೆಆ​ರ್‌ಜಿ ಸ್ಟುಡಿ​ಯೋ​ದಿಂದ ಸಿನಿಮಾ ಬಿಡು​ಗ​ಡೆ!

ಕ್ಷಣ ಕ್ಷಣಕ್ಕೂ ಥ್ರಿಲ್‌ ನೀಡುವ ಕತೆ...

ಕನ್ನಡಕ್ಕೆ ಡಿಟೆಕ್ಟಿವ್‌ ಜಾನರ್‌ ಸಿನಿಮಾಗಳಲ್ಲೇ ಇದು ಸ್ಪೆಷಲ್‌. ಅಭಿಜಿತ್‌ ಮತ್ತು ನಾನು ಚಿತ್ರದ ಕತೆ, ಚಿತ್ರಕತೆ ಬರೆಯುವಾಗ ಪ್ರೇಕ್ಷಕರಿಗೆ ಯಾವುದೇ ಗೊಂದಲ ಮೂಡಿಸದಂತೆ ಕತೆ ಹೇಳಬೇಕು ಅಂಡ ಡಿಸೈಡ್‌ ಮಾಡಿಕೊಂಡಿದ್ದೆವು. ಡಿಟೆಕ್ಟಿವ್‌ ಕತೆಯಲ್ಲಿ ಸಣ್ಣದೊಂದು ಸುಳಿವು ಸಿಕ್ಕರೂ, ಅಪಾಯ. ಕ್ಲೈಮಾಕ್ಸ್‌ ತನಕ ಅದು ಗೊತ್ತಾಗಬಾರದು ಅಂತಲೇ ಕೇಸ್‌ ಸುತ್ತ ಒಂದಷ್ಟುಗೊಂದಲ ಸೃಷ್ಟಿಸಿ, ಕೊನೆಗೆ ತೀರಾ ಸುಲಭವಾದ ಕ್ಲೈಮ್ಯಾಕ್ಸ್‌ ತಂದಿದ್ದೇವೆ. ಪ್ರತಿ ಕ್ಷಣವೂ ಥ್ರಿಲ್‌ ಇದೆ. ರಮೇಶ್‌ ಅರವಿಂದ್‌ ಜತೆಗೆ ಇಲ್ಲಿ ನಾಯಿ ಕೂಡ ಪ್ರಮುಖ ಪಾತ್ರವಹಿಸಿದೆ.

ಅದು ರಣಗಿರಿ ರಹಸ್ಯ....

ಚಿತ್ರದ ಕತೆ ನಡೆಯುವುದು ರಣಗಿರಿ ಎನ್ನುವ ಊರಿನಲ್ಲಿ. ಗೂಗಲ್‌ ಮ್ಯಾಪ್‌ಗೂ ಸಿಗದ, ಸಂವಹನ ಸಂಪರ್ಕವಿಲ್ಲದ ಕಾಡಿನ ನಡುವಿರುವ ಊರು ಅದು. ಮಡಿಕೇರಿ ಮತ್ತು ಕೇರಳ ಮಧ್ಯೆ ಇಂತಹದೊಂದು ಹೆಸರಿನ ಊರಿದೆ ಅಂತ ಕೇಳಿದ್ದೇನೆ. ಆದರೆ ಚಿತ್ರದಲ್ಲಿ ಬರುವ ಊರು ಕಾಲ್ಪನಿಕ. ಆ ಊರಿನಲ್ಲಿ ಒಂದು ಕೊಲೆ ನಡೆಯುತ್ತದೆ. ಆ ಪ್ರಕರಣವನ್ನು ಭೇದಿಸಲು ಹೊರಟವರು ಕಥಾ ನಾಯಕ ಶಿವಾಜಿ ಸುರತ್ಕಲ್‌. ಆ ಕೊಲೆಯನ್ನು 48 ಗಂಟೆಗಳಲ್ಲಿ ಭೇದಿಸಬೇಕು.

ಕತೆಯ ಆತ್ಮವೇ ಎಮೋಷನ್ಸ್‌...

ರಮೇಶ್‌ ಅರವಿಂದ್‌ ಸಿನಿಮಾ ಅಂದ್ರೆ ಎಮೋಷನ್ಸ್‌ ಇರಲೇಬೇಕು. ಈ ಚಿತ್ರದ ಕತೆಯ ಆತ್ಮವೇ ಎಮೋಷನ್ಸ್‌. ಕಥಾ ನಾಯಕನಲ್ಲಿ ಸೃಷ್ಟಿಯಾಗುವ ಟೆನ್ಸನ್‌, ವೈಯಕ್ತಿಕ ಸಮಸ್ಯೆ, ಅಲ್ಲಿ ನಡೆಯುವ ಘಟನೆಗಳಿಂದ ಉಂಟಾಗುವ ಗೊಂದಲ, ತೊಳಲಾಟ ಎಲ್ಲವೂ ಆ ಪಾತ್ರವನ್ನು ಭಾವುಕತೆಯಲ್ಲಿ ಸಿಲುಕಿಸುತ್ತವೆ.

ಶಿವರಾತ್ರಿಗೆ ರಿಲೀಸ್ ಆಗಲಿದೆ 'ಶಿವಾಜಿ ಸುರತ್ಕಲ್'

ಸಿನಿಮಾ ಎನ್ನುವುದಕ್ಕಿಂತ ಇದು ಅನುಭವ...

ಪ್ರೇಕ್ಷಕ ಪಾಲಿಗೆ ಇದೊಂದು ಸಿನಿಮಾ ಎನ್ನುವುದಕ್ಕಿಂತ ಅನುಭವವೇ ಹೌದು. ಕತೆ ಸಾಗುತ್ತಾ ನಮ್ಮೊಳಗೊಬ್ಬ ಶಿವಾಜಿ ಹುಟ್ಟಿಕೊಳ್ಳುತ್ತಾನೆ. ರಮೇಶ್‌ ಅವರ ಜತೆಗೆ ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌, ಸುಕನ್ಯಾ ಗಿರೀಶ್‌ ಸೇರಿದಂತೆ ಇಡೀ ಕಲಾವಿದರ ಬಳಗವೇ ಚಿತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದೆ.

ಹೈಲೈಟ್ಸ್‌ ಎನಿಸುವ ಸೌಂಡ್‌ ಎಫೆಕ್ಟ್...

ಸೌಂಡ್‌ ಎಫೆಕ್ಟ್ಗೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಪಿಲ್ಲೊ ಕವರ್‌, ಪೆನ್‌, ಪೆನ್ಸಿಲ್‌, ಕಾಡುಗಳಲ್ಲಿ ಕೇಳಿ ಬರುವ ಪ್ರಾಣಿ ಪಕ್ಷಿಗಳು, ಮಂಜಿನ ವಾತಾವರಣ ಹೀಗೆ ಸಣ್ಣ ಸಣ್ಣ ಸಂಗತಿಯೂ ಅನುಭವಕ್ಕೆ ಬರುವ ಹಾಗೆ ಸೌಂಡ್‌ ಡಿಸೈನ್‌ ಮಾಡಲಾಗಿದೆ. ಜೂಡಾ ಸ್ಯಾಂಡಿ ಸಂಗೀತ ತುಂಬಾ ಚೆನ್ನಾಗಿ ಬಂದಿದೆ.