ಗಾಯಕ ಎಸ್‌.ಬಿ . ಬಾಲಸುಬ್ರಹ್ಮಣ್ಯಂ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ಅವರ ಕುಟುಂಬಕ್ಕೆ ಕೊರೋನಾತಂಕ ಎದುರಾಗಿದೆ. ಬುಧವಾರ ಎಸ್‌ಪಿಬಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು.

ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ವೆಂಟಿಲೇಟರ್ ಸಪೋರ್ಟ್‌ನಲ್ಲಿರಿಸಲಾಗಿತ್ತು. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿದ ಹಿರಿಯ ಗಾಯಕ ಎಸ್‌ಪಿಬಿ ಪುತ್ರ ವೆಂಟಿಲೇಟರ್ ತೆಗೆದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆರೋಗ್ಯ ಸ್ಟೇಬಲ್ ಇದೆ ಎಂದು ತಿಳಿಸಿದ್ದರು.

"

SPB ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದಲೇ ಗಾಯಕ ಸಂದೇಶ

ಇದೀಗ ಎಸ್‌ಪಿಬಿ ಪತ್ನಿ ಸಾವಿತ್ರಿ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಲಿವುಡ್‌ ಸೆಲೆಬ್ರಿಟಿಗಳಾದ ಕೀರ್ತಿ ಸುರೇಶ್, ರಾಮ ಜೋಗಯ್ಯ ಶಾಸ್ತ್ರಿ, ಕೊರತಲ ಶಿವ, ವಿಜಯ್ ಆಂಟೊನಿ, ಎಆರ್ ರಹಮಾನ್  ಸೇರಿ ಹಲವರು ಟ್ವೀಟ್ ಮಾಡಿ ಬೇಗ ಗುಣಮುಖರಾಗುವಂತೆ ಧೈರ್ಯ ತುಂಬಿದ್ದಾರೆ.