ರಶ್ಮಿಕಾ ಮಂದಣ್ಣ, ಅದೇ ನ್ಯಾಶನಲ್‌ ಕ್ರಶ್‌ ಬಗ್ಗೆ ಯಾರಿಗ್‌ ಗೊತ್ತಿಲ್ಲ ಹೇಳಿ. ಮನಸ್ಸು ಮಾಡಿದ್ರೆ ಕಿಟಕಿ ಕಂಬಿಯೊಳಗಿಂದ ನುಸುಳುವಷ್ಟು ಸಣ್ಣಗಿರುವ ಈ ನಟಿ ಸಿಕ್ಕಾಪಟ್ಟೆ ಡಯೆಟ್ ಮಾಡ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ನಾನು ಅಂದ್ಕೊಳ್ಳೋದೇ ಒಂದು, ಇರೋದೇ ಒಂದು ಅನ್ನೋ ಹಾಗಾಗಿದೆ ಪರಿಸ್ಥಿತಿ. ಈ ಕಿರಿಕ್‌ ಹುಡುಗಿ ಇನ್‌ಸ್ಟಾಗ್ರಾಮ್‌ನಲ್ಲೊಂದು ಫೋಟೋ ಹಾಕಿದ್ದಾರೆ ನೋಡಿ, ಲಕ್ಷಾಂತರ ಜನ ಈ ಫೋಟೋ ನೋಡಿ ಅರೆರೇ, ಏನ್‌ ತಾಯಿ ನಾಲ್ಕು ಜನಕ್ಕಾಗೋದನ್ನ ಒಬ್ಳೇ ತಿಂತಿದ್ದೀಯಾ ಅಂತೆಲ್ಲ ಕಾಲೆಳೆಯುತ್ತಿದ್ದಾರೆ. ಈ ಕೊಡಗಿನ ಕಳ್ ಮಂಜಿ ಮಾತ್ರ ಕಿಲಾಡಿ ನಡೆ ನಕ್ಕೊತಾ, ಇಲ್ಲಪ್ಪಾ, ನಾನು ಚೂರೇ ಚೂರು ತಿಂದಿದ್ದು ಅಂತ ಹಲ್ಲುಬಿಡ್ತಿದ್ದಾಳೆ. 

 ಕೊಬ್ಬಿಗೆ ಇನ್ನೊಂದು ಹೆಸರೇ ರಶ್ಮಿಕಾ ಮಂದಣ್ಣ ಅಂತ ಟ್ರೋಲಿಗರು ಕಾನ್ಫಿಡೆಂಟಾಗಿ ಹೇಳ್ತಾರೆ. ಆದರೆ ಇವ್ರು ರಶ್ಮಿಕಾ ಎಂಬ ಬ್ಯೂಟಿಫುಲ್‌ ಹುಡುಗಿಯನ್ನು ಹತ್ರದಿಂದ ನೋಡಿ ಮಾತಾಡಿದ್ರೆ ಅರೆ, ನಾವು ಮಾತಾಡಿದ್ದು ಈ ಹುಡುಗಿ ಬಗೆಗೇನಾ ಅಂತ ತಲೆತಲೆ ಚಚ್ಕೊಬೇಕು ಹಾಗಿರುತ್ತೆ ಈಕೆಯ ನಡೆನುಡಿ. ಹಾಗಂತ ಈ ಹುಡುಗಿ ಮಹಾ ಮುಗ್ಧೆ, ಸಿಕ್ಕಾಪಟ್ಟೆ ಇನ್ನೋಸೆಂಟ್‌ ಅಂತೆಲ್ಲ ಅಂದ್ಕೊಂಡು ಕೆನ್ನೆಗೆ ಕೈತಟ್ಟಿ ಶಾಂತಂ ಪಾಪಂ ಮಾಡ್ಬೇಡಿ. ಏಕೆಂದರೆ ಈಕೆ ಆನ್‌ಸ್ಕ್ರೀನ್ ಮಾತ್ರ ಅಲ್ಲ, ಆಫ್‌ ಸ್ಕ್ರೀನ್‌ ನಟನೆಯಲ್ಲೂ ಒಂದು ಕೈ ಮೇಲೆ ಅನ್ನೋದು ಬಲ್ಲವರ ನುಡಿ. ಈ ಹುಡುಗೀರ ಮನಸ್ಸನ್ನೂ, ಮೀನಿನ ಹೆಜ್ಜೆಯನ್ನೂ ಕಂಡುಹಿಡಿಯೋದಕ್ಕಾಗಲ್ಲ ಅನ್ನೋ ಮಾತಿದೆ. ರಶ್ಮಿಕಾ ವಿಚಾರದಲ್ಲಿ ಇದು ನಿಜ ಇದ್ರೂ ಇರಬಹುದು ಬಿಡಿ!

ಹಿಂದಿ ಆಲ್ಬಂ ಸಾಂಗ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್‌ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ! ...

ಈಗ ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿಹಾಕಿರೋ ಫೋಟೋ ವಿಚಾರಕ್ಕೆ ಬರಾಣ. ರೈಸು, ರೊಟ್ಟಿ, ಸೈಡ್ಸ್, ಭರ್ಜರಿ ನಾನ್‌ವೆಜ್ ಐಟಂಸ್‌ ತುಂಬ್ಕೊಂಡಿದ್ದ ಕುರುಹುಗಳಿವೆ ಈ ನಾಲ್ಕೈದು ಪಾತ್ರೆಗಳಲ್ಲಿ. ಕೆಲವೇ ನಿಮಿಷಗಳ ಮೊದಲು ತುಂಬಿಕೊಂಡಿದ್ದ ಕುರುಹುಗಳನ್ನಷ್ಟೇ ಉಳಿಸಿ ಅವೆಲ್ಲ ಖಾಲಿಯಾಗಿವೆ. ಎದುರು ಸುರ ಸುಂದರಿ ರಶ್ಮಿಕಾ ಮೂತಿ ಒರಸ್ಕೊಳ್ತಾ ಕೂತಿದ್ದಾಳೆ. ಆಮೇಲೆ, ಇಲ್ಲಪ್ಪಾ, ನಾನೇನೂ ತಿಂದಿಲ್ಲಪ್ಪಾ ಅನ್ನೋ ಫೋಸು ಬೇರೆ. ೧೮ ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್ ಗೆ ಲೈಕ್‌ ಒತ್ತಿದ್ದಾರೆ. ಸುಮ್ನೇ ನೋಡಿ ಏನೊಂದು ಮಾತೂ ಬಾರದ ಕಣ್ತುಂಬಿಕೊಂಡು ಹಾಗೇ ಮುಂದಕ್ಕೋದವರು ಇನ್ನೆಷ್ಟು ಮಂದಿಯೋ. ಮೊದಲಲ್ಲೇ ಕಾಣೋದು ಆನಂದ ಶರ್ಮಾ ಅನ್ನೋ ಸಿಂಗರ್ ಕಂ ಪ್ರೊಡ್ಯೂಸರ್ ಕಂ ಪರ್ಫಾಮರ್ ಕಮೆಂಟ್. ಅದೆನ್ನೆಲ್ಲ ತಿಂದ್ರೂ ಚೆನ್ನಾಗಿರುತ್ತೆ ಬಿಡಿ ಅಂತ ಅವ್ರು ಕಮೆಂಟ್ ಮಾಡಿದ್ದಾರೆ. ಅದಕ್ಕೆ ರಶ್ಮಿಕಾ ರಿಪ್ಲೈಮಾಡಿದ್ದಾರ ಅಂತ ನೋಡಿದ್ರೆ, ಹಂಗೇನೂ ಕಾಣಿಸೋದಿಲ್ಲ. ಬದಲಿಗೆ ಎಲ್ಲೆಲ್ಲೂ ರಶ್ಮಿಕಾ ಫ್ಯಾನ್ಸ್ ಮೆಸೇಜೇ ರಾರಾಜಿಸುತ್ತಿದೆ. ಆನಂದ್ ಮೆಸೇಜ್ ಗೆ ರಶ್ಮಿಕಾ ಫ್ಯಾನ್ಸ್ ಅಂತೂ ಮುಗಿಬಿದ್ದು ಪ್ರತಿಕ್ರಿಯಿಸಿದ್ದಾರೆ. ಯಾರೂ ಈಕೆಯ ತಿಂಡಿಪೋತತನಕ್ಕೆ ಒಂದಕ್ಷರವೂ ಕಮೆಂಟ್ ಮಾಡಿಲ್ಲ. ಬದಲಿಗೆ ಹಾಯ್ ಸ್ವೀಟೀ, ಕ್ವೀನ್, ಮೈ ಡಾರ್ಲಿಂಗ್ ಅಂತೆಲ್ಲ ಕಮೆಂಟ್ ಹರಿಯಬಿಟ್ಟಿದ್ದಾರೆ. 

ತಮ್ಮ ಲಿಸ್ಟ್‌ನಲ್ಲಿರುವ ನಟರ ಹೆಸರು ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ! ...

ಇದರಿಂದ ಒಂದಂತೂ ಸಾಬೀತಾಗ್ತಿದೆ. ರಶ್ಮಿಕಾ ಬಾಲಿವುಡ್‌ ಲೆವೆಲ್‌ಗೆ ಏರಿದ್ದೇ ಈಕೆಯ ಫ್ಯಾನ್‌ ಫಾಲವಿಂಗ್ ಒಮ್ಮಿಂದೊಮ್ಮೆಲೇ ಸಖತ್ ಏರಿಕೆಯಾಗಿದೆ. ಇನ್ನೊಂದು ಅಂದ್ರೆ ಈ ಫ್ಯಾನ್ಸ್ ಗೆ ಕಾಮಿಡಿ ಸೆನ್ಸು ಒಂಚೂರು ವೀಕಿದ್ದಂಗಿದೆ. ಇರಲಿ, ಹೇಗಿದ್ರೂ ಹಿಂಬಾಲಕರು ಹೆಚ್ಚಬೇಕು. ಆದಲೇ ನಟ ನಟಿಯರಿಗೆ ಹೆಚ್ಚಿನ ಬೆಲೆ ಬರೋದು. 

ಮೊನ್ನೆ ಮೊನ್ನೆ ಪ್ರೆಸ್ ಮೀಟ್‌ನಲ್ಲಿ ಮಾತಾಡ್ತಾ ರಶ್ಮಿಕಾ ಹೇಳಿದ್ರು, ನಂಗೆ ಜನ ಟ್ರೋಲ್ ಮಾಡದಿದ್ರೇ ಬೇಜಾರಾಗುತ್ತೆ. ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದರೇ ನೆಮ್ಮದಿಯ ನಿದ್ದೆ ಬರೋದು ಅಂತ. ಈಗಂತೂ ಇವರ ಬಗ್ಗೆ ಬರೀ ಬಾಲಿವುಡ್ ಸುದ್ದಿನೇ. ಸೋ, ಹೀಗೆಲ್ಲ ಮಾಡಿ ರಶ್ಮಿಕಾನೇ ಸುದ್ದಿ ಕ್ರಿಯೇಟ್‌ ಮಾಡ್ತಿದ್ರೂ ಮಾಡಬಹುದು, ಯಾವನಿಗೊತ್ತು ಅಲ್ವಾ..

ಮಿಷನ್ ಮಜ್ನು ಶೂಟಿಂಗ್ ಶುರು: ಮೊದಲ ದಿನವೇ ಕಿರಿಕ್ ಚೆಲುವೆಯ ಹೊಗಳಿದ ಬಾಲಿವುಡ್ ನಟ ...