‘ಎಸ್‌ಎಲ್‌ವಿ ಅಂದರೆ ಹೊಟೇಲ್ ಕತೆ ಅಲ್ಲ, ಈ ಟೈಟಲ್ ಇದ್ದ ಮಾತ್ರಕ್ಕೆ ಇದು ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರವೂ ಅಲ್ಲ’ ಎಂದರು ‘ಎಸ್‌ಎಲ್‌ವಿ - ಸಿರಿ ಲಂಬೋದರ ವಿವಾಹ’ ಚಿತ್ರದ ನಿರ್ದೇಶಕ ಸೌರಭ ಕುಲಕರ್ಣಿ.

ಈಗಷ್ಟೇ ಮುಹೂರ್ತ ಮುಗಿಸಿಕೊಂಡ ಎಸ್‌ಎಲ್‌ವಿ- ಸಿರಿ ಲಂಬೋದರ ವಿವಾಹ ಚಿತ್ರತಂಡ ಸುದ್ದಿಗೋಷ್ಟಿ ಕರೆದಿತ್ತು. ಈ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ ಸೌರಭ್, ‘ಇದೊಂದು ಸಂಪೂರ್ಣ ಕೌಟುಂಬಿಕ ಮನರಂಜನೆ ನೀಡುವ ಸಿನಿಮಾ. ರಂಗಭೂಮಿಯ ಗೆಳೆಯರೆಲ್ಲ ಸೇರಿ ಚಿತ್ರ ಮಾಡುತ್ತಿದ್ದೇವೆ. ಹಲವರು ಬಂಡವಾಳ ಹೂಡಿದ್ದಾರೆ. ಸೆ.13ರಿಂದ 40 ದಿನಗಳ ಕಾಲ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ’ ಎಂದರು.

ನಾಯಕ ಅಂಜನ್ ಭಾರದ್ವಾಜ್, ‘ಕತೆಗಳೇ ಪಾತ್ರವನ್ನು ಆರಿಸುತ್ತವೆ. ಈ ಕತೆ ಆರಿಸಿದ ಪಾತ್ರ ನಾನು. ಸಿನಿಮಾ ನನ್ನ ಪ್ರತಿದಿನದ ಕನಸು. ರಿಸಲ್‌ಟ್ಗಿಂತ ಪ್ರೊಸೆಸ್ ಕಡೆಗೇ ನಮ್ಮೆಲ್ಲರ ಗಮನವಿರುತ್ತದೆ. ನಾನಿಲ್ಲಿ ವೆಡ್ಡಿಂಗ್ ಪ್ಲಾನರ್ ಸಂಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಈ ಲಾಕ್‌ಡೌನ್‌ನಲ್ಲಿ ವೈರಲ್ ಅಗುತ್ತಿದೆ ಸೌರಭ್ ಕುಲಕರ್ಣಿ 'ರ‍್ಯಾಪಿಡ್‌ ಫಯರ್‌ ವಿತ್ ರಮೇಶ್ ಅಂಕಲ್'!

ನಾಯಕಿ ದಿಶಾ ರಮೇಶ್, ‘ಸಿನಿಮಾ ನಟನೆಯ ಅನುಭವವಿದ್ದರೂ ನಾನು ಪ್ರತೀ ಸಿನಿಮಾವನ್ನೂ ಜೀರೋದಿಂದ ಶುರು ಮಾಡ್ತೀನಿ. ಇದರಿಂದ ಕಲಿಕೆ, ಹುಡುಕಾಟ ಸಾಧ್ಯವಾಗುತ್ತೆ’ ಎಂದರು. ವರ್ಸ್ಯಾಟೊ ವೆಂಚರ್ಸ್, ಪವಮಾನ ಕ್ರಿಯೇಶನ್‌ಸ್, ಧೂಪದ ದೃಶ್ಯ ತಂಡಗಳು ಚಿತ್ರ ನಿರ್ಮಿಸಿವೆ.

ಹಿರಿಯ ಕಲಾವಿದ ಸಿಹಿಕಹಿ ಚಂದ್ರು, ಮಾಸ್ಟರ್ ಆನಂದ್, ಹರೀಶ್ ಪ್ರಭಾತ್, ಸುಂದರ್ ವೀಣಾ, ಸಿನಿಮಟೋಗ್ರಾಫರ್ ಕಿಟ್ಟಿ ಕೌಶಿಕ್ ಮತ್ತು ಚಿತ್ರತಂಡದವರು ಉಪಸ್ಥಿತರಿದ್ದರು.

View post on Instagram