ಖ್ಯಾತ ಗಾಯಕ ವಿಜಯ್ ಪ್ರಕಾಶ್ ಫೆಬ್ರವರಿ 21 ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಪತ್ನಿ ಮಹತಿ ಮತ್ತು ಪುತ್ರಿ ಕಾವ್ಯಾ ವಿಮಾನದಲ್ಲಿ ಸರ್ಪ್ರೈಸ್ ನೀಡಿದರು. ಮಹತಿ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ.
ಜನಪ್ರಿಯ ಗಾಯಕ ನಮ್ಮ ಹೆಮ್ಮೆಯ ವಿಜಯ್ ಪ್ರಕಾಶ್ (Singer Vijay Prakash) ಅವರು ಇದೇ ಫೆಬ್ರುವರಿ 21 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಮಹತಿ ವಿಜಯ್ ಪ್ರಕಾಶ್ ಹಾಗೂ ಪುತ್ರಿ ಕಾವ್ಯಾ (Kavya Vijay Prakash) ಇಬ್ಬರು ವಿಮಾನದಲ್ಲಿ ವಿಜಯ್ ಪ್ರಕಾಶ ಅವರಿಗೆ ಸರ್ಪ್ರೈಸ್ ನೀಡಿದ್ದು, ಇದನ್ನು ನೋಡಿ ಗಾಯಕ ಶಾಕ್ ಆಗಿದ್ದು, ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಹತಿಯವರು (Mahathi Vijayprakash) ವಿಡಿಯೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಹ್ಯಾಪಿ ಬರ್ತ್ ಡೇ ಟು ಮೈ ರಾಕ್ ಹಾಗೂ ರಾಕ್ ಸ್ಟಾರ್ ವಿಜಯ್. ನಾವು ಮಹಾಕುಂಭದಿಂದ ವಾಪಾಸ್ ಬರುವಾಗ ಲೇಟ್ ನೈಟ್ ಫ್ಲೈಟ್ ನಲ್ಲಿ ವಿಜಯ್ ಬರ್ತ್ ಡೇ ಸೆಲೆಬ್ರೇಟ್ (birthday celebration) ಮಾಡಲಾಯಿತು. ಇದನ್ನು ಮಗಳು ಕಾವ್ಯಾ ಪ್ಲ್ಯಾನ್ ಮಾಡಿದ್ದು, ನಮ್ಮಿಬ್ಬರಿಗೂ ಇದು ಸರ್ಪ್ರೈಸ್ ಆಗಿತ್ತು. ಕಾವ್ಯಾ ಏರ್ ಪೋರ್ಟ್ ನಿಂದ ಪೇಸ್ಟ್ರಿ ಖರೀದಿಸಿ ತಂದು, ಇಂಡಿಗೋ ಏರ್ ಹೋಸ್ಟೆಸ್ (Indigo Air Hostess) ಜೊತೆ ಸೇರಿ, ಸರಿಯಾಗಿ 12 ಗಂಟೆಗೆ ವಿಜಯ್ ಗೆ ಸರ್ಪ್ರೈಸ್ ನೀಡಲಾಯಿತು. ಮಧ್ಯರಾತ್ರಿ, ಆಕಾಶದಲ್ಲಿ ವಿಜಯ್ ಮೊದಲ ಬಾರಿಗೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ರು, ಈ ಆಚರಣೆ ಸಂತೋಷದಿಂದ ಹಾಗೂ ಇಂಟ್ರೆಸ್ಟಿಂಗ್ ಆಗಿತ್ತು ಎಂದಿದ್ದಾರೆ. ಉಳಿದ ಪ್ರಯಾಣಿಕರಿಗೆ ನಮ್ಮ ವಾಯ್ಸ್ ಕೇಳಬಾರದು ಎಂದು ನಿಧಾನವಾಗಿ ಮಾತನಾಡಿರೋದಾಗಿ ಸಹ ಮಹತಿ ಬರೆದುಕೊಂಡಿದ್ದಾರೆ. ಈ ವಿಮಾನದಲ್ಲಿ ಬರ್ತ್ ಸೆಲೆಬ್ರೇಷನ್ ನಿಂದಾಗಿ ವಿಜಯ್ ಪ್ರಕಾಶ್ ಮುಖದಲ್ಲೂ ಮಂದಹಾಸ ಮೂಡಿತ್ತು.
ವಿಜಯ್ ಪ್ರಕಾಶ್, ಮಹತಿ ಹಾಗೂ ಪುತ್ರಿ ಕಾವ್ಯಾ ಕೆಲ ದಿನಗಳ ಹಿಂದೆ ಪ್ರಯಾಗ್ ರಾಜ್ ಗೆ ತೆರಳಿ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ (Triveni Sangama) ಮಿಂದು ಪುಳಕಿತರಾಗಿದ್ದರು. ಅಲ್ಲಿ ತೆಗೆಸಿರುವ ಫೋಟೊಗಳನ್ನು ಗಾಯಕ ತಮ್ಮ ಸೋಶಿಯಲ್ ಮೀಡಿಯಾದ್ಲಲಿ ಹಂಚಿಕೊಂಡು ಹರ್ ಹರ್ ಮಹಾದೇವ್ ಎಂದು ಬರೆದುಕೊಂಡಿದ್ದರು. ಅಲ್ಲಿನ ವಿವಿಧ ತಾಣಗಳಿಗೂ ವಿಜಯ್ ಪ್ರಕಾಶ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಅಲ್ಲಿಂದ ಹಿಂದಿರುಗುವ ವೇಳೆ ವಿಮಾನದಲ್ಲಿ ಮಗಳು ಅಪ್ಪನ ಹುಟ್ಟುವನ್ನು ಮತ್ತಷ್ಟು ವಿಶೇಷವಾಗಿಸಲು ವಾಯು ಮಾರ್ಗದಲ್ಲೇ ವಿಮಾನದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಕ್ಷಣಗಳನ್ನು ಸೃಷ್ಟಿಸುವ ಮೂಲಕ, ವಿಜಯ್ ಪ್ರಕಾರ್ 49ನೇ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತ್ಷ್ಟು ಹೆಚ್ಚಿಸಿದ್ದಾರೆ.
