Asianet Suvarna News Asianet Suvarna News

ಬಳ್ಳಾರಿಯಲ್ಲಿ ನನ್ನ ಮೇಲೆ ಅಟ್ಯಾಕ್ ಆಗಿಲ್ಲ, ಕನ್ನಡಿಗರು ಪ್ರೀತಿ ಕೊಟ್ಟಿದ್ದಾರೆ; ವಿವಾದಕ್ಕೆ ಗಾಯಕಿ ಮಂಗ್ಲಿ ಬ್ರೇಕ್

ಚಿಕ್ಕಬಳ್ಳಾಪುರ ಉತ್ಸವದಲ್ಲಿ ನಡೆದ ಘಟನೆಯಿಂದ ಬಳ್ಳಾರಿಯಲ್ಲಿ ಸಿಟ್ಟು ತೀರಿಸಿಕೊಂಡ ಜನರು. ಕನ್ನಡಿಗರು ಪ್ರೀತಿ ಕೊಟ್ಟಿದ್ದಾರೆಂದು ಸ್ಪಷ್ಟನೆ ಕೊಟ್ಟ ಮಂಗ್ಲಿ....

Singer Mangli clarification about Ballari fans attack vcs
Author
First Published Jan 23, 2023, 4:27 PM IST

ಭಾರತೀಯ ಸಂಗೀತ ಲೋಕಕ್ಕೆ ಮಂಗ್ಲಿ ಎಂದು ಪರಿಚಯವಾಗಿರುವ ಸತ್ಯವತಿ ರಾಥೋಡ್ ಪದೇ ಪದೇ ಕಾಂಟ್ರವರ್ಸಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.  ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಹಾಡುಗಳನ್ನು ಹಾಡಿರುವ ಮಂಗ್ಲಿಗೆ ಬಳ್ಳಾರಿಯಲ್ಲಿ ಅವಮಾನವಾಗಿದೆ. ಸ್ಥಳೀಯರು ಕಾರಿಗೆ ಕಲ್ಲು ಎಸೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವು ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿರುವ ಕಾರಣ ಪೋಸ್ಟ್‌ ಹಾಕುವ ಮೂಲಕ ಮಂಗ್ಲಿ ಉತ್ತರ ಕೊಟ್ಟಿದ್ದಾರೆ.

ಮಂಗ್ಲಿ ಪೋಸ್ಟ್‌: 

'ಬಳ್ಳಾರಿಯಲ್ಲಿ ನನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಚಾರವನ್ನು ನಾನು ಸಂಪೂರ್ಣವಾಗಿ ತಿರಸ್ಕರಿಸುವೆ. ನೀವೆಲ್ಲರೂ ಫೋಟೋ ಮತ್ತು ವಿಡಿಯೋವನ್ನು ನೋಡಿರುವ ಹಾಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮ ತುಂಬಾ ಅದ್ಧೂರಿಯಾಗಿತ್ತು ಅಪಾರ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಕನ್ನಡಿಗರು ನನ್ನ ಮೇಲೆ ತೋರಿಸುವ ಪ್ರೀತಿಗೆ ನಾನು ಆಭಾರಿ. ಅಲ್ಲಿದ್ದ ಅಧಿಕಾರಿಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ ಪದಗಳಲ್ಲಿ ನಾನು ವರ್ಣಿಸಲು ಸಾಧ್ಯವಿಲ್ಲ. ಇದೆಲ್ಲಾ ಆಗಿರುವುದು ಮಂಗ್ಲಿ ಇಮೇಚ್‌ಗೆ, ಸುಳ್ಳು ಸುದ್ದಿ ಹರಿದಾಡುತ್ತಿದೆ ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ' ಎಂದು ಮಂಗ್ಲಿ ಬರೆದುಕೊಂಡಿದ್ದರು.

ಬಳ್ಳಾರಿಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ. ಆ ಘಟನೆ ನಡೆದ ಸಂದರ್ಭದಲ್ಲಿ ಆ ಕಾರಿನಲ್ಲಿ ನಾನು ಕುಳಿತಿರಲಿಲ್ಲ. ನಾನು ಗ್ರೀನ್ ರೂಮ್‌ನಲ್ಲಿ ಇದ್ದಾಗ ಒಂದು ಕಾರಿಗೆ ಯಾರೋ ಒಂದು ಕಲ್ಲು ಎಸೆದ ಘಟನೆಗೂ ನನಗೂ ಸಂಬಂಧವಿಲ್ಲ. ಆ ಕಾರು ಕೂಡ ನನ್ನದಲ್ಲ. ನಾನು ಕ್ಷೇಮವಾಗಿದ್ದೀನಿ. ಕನ್ನಡಿಗರು ಹಿಂದಿನಿಂದಲೂ ನನಗೆ ಅಪಾರವಾದ ಪ್ರೀತಿ ಕೊಟ್ಟಿದ್ದಾರೆ. ನನಗೆ ಕನ್ನಡ ಮತ್ತು ಕನ್ನಡಿಗರಂದರೆ ಅಪಾರವಾದ ಗೌರವ ಹಾಗೂ ಅಭಿಮಾನ' ಎಂದಿದ್ದಾರೆ. 

Ballari Festival: ಸಿಂಗರ್ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು

ಏನಿದು ಘಟನೆ:

ಚಿಕ್ಕಬಳ್ಳಾಪುರ ಉತ್ಸವಕ್ಕೆ ಗಾಯಕಿ ಮಂಗ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಹಾಡುಗಳನ್ನು ಹಾಡುವ ಮೂಲಕ ಜನರಿಗೆ ಮನೋರಂಜನೆ ನೀಡಿದ್ದರು. ಈ ವೇಳೆ ನಿರೂಪಕಿ ಅನುಶ್ರೀ ಕನ್ನಡಿಗರಿಗೋಸ್ಕರ ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿಕೊಂಡರು ಆದರೆ ಮಂಗ್ಲಿ ಕನ್ನಡದಲ್ಲಿ ಮಾತನಾಡದೆ ತೆಲುಗು ಭಾಷೆಯಲ್ಲಿ ಮಾತನಾಡಿದ್ದಾರೆ. ಮಂಗ್ಲಿ ಬೇಕೆಂದು ಹೀಗೆ ಮಾಡಿರುವುದು ಕನ್ನಡಿಗರು ಇವರನ್ನು ಬೆಳೆಸಬಾರದು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಬಳ್ಳಾರಿ ಕಾರ್ಯಕ್ರಮಕ್ಕೆ ಮಂಗ್ಲಿ ಆಗಮಿಸಿದ್ದರು. 

ಬಳ್ಳಾರಿ ಮುನ್ಸಿಪಲ್ ಕಾಲೇಜ್‌ ಮೈದಾನದಲ್ಲಿ ಬಳ್ಳಾರಿ ಉತ್ತವ ಕಾರ್ಯಕ್ರಮಕ್ಕೆ ಮಂಗ್ಲಿ ಆಗಮಿಸಿದ್ದರು. ವೇದಿಕೆ ಮೇಲೆ ಹಾಡು ಹೇಳಿ ವಾಪಸ್ ತೆರಳುವಾಗ ಯುವಕರು ಮುಗಿಬಿದ್ದಿದ್ದರು. ಮೇಕಪ್‌ ಟೆಂಟ್‌ಗೆ ನುಗ್ಗಿದ ಪುಂಡರನ್ನು ಪೊಲೀಸರು ಲಾಟಿ ಬೀಸಿ ತಡೆದಿದ್ದರು. ಹೀಗಾಗಿ ಅಲ್ಲಿಂದಲ್ಲೇ ಮಂಗ್ಲಿ ಕಾರಿನಲ್ಲಿ ಕುಳಿತುಕೊಂಡು ಹೊರ ಬರುತ್ತಾರೆ. ಆಗ ಮಂಗ್ಲಿ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಕಾರಿನ ಗ್ಲಾಸ್ ಬ್ರೇಕ್ ಆಗಿದೆ. ಮಂಗ್ಲಿಗೂ ಪೆಟ್ಟು ಬಿದಿದ್ದೆ ಎನ್ನಲಾಗಿತ್ತು ಆದರೆ ಇದೆಲ್ಲಾ ಸುಳ್ಳು ಸುದ್ದಿ ಎನ್ನಲಾಗಿದೆ.  
 

Follow Us:
Download App:
  • android
  • ios