Asianet Suvarna News Asianet Suvarna News

ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಬಿಡುಗಡೆ; ಪ್ರೇಕ್ಷಕರ ವಿಶೇಷ ಪ್ರತಿಕ್ರಿಯೆ ಹಿಂದೆ ಏನಿದೆ ಗುಟ್ಟು?

ಸಪ್ತ ಸಾಗರದಾಚೆ ಎಲ್ಲೋ ಸೆಕೆಂಡ್ ಹಾಫ್ ಸ್ವಲ್ಪ ಕಡಿಮೆಯಾಗಬಹುದಿತ್ತು ಎನಿಸುವಂತಿದ್ದರೂ ಪ್ರೀತಿಯ ರಭಸಕ್ಕೆ ಅದು ಮರೆತುಹೋಗುತ್ತೆ. ಚರಣ್ ರಾಜ್ ಮ್ಯೂಸಿಕ್ ಹಾಗೂ ಅದ್ವೈತ್ ಸಿನಿಮಾಟೋಗ್ರಾಫಿ ಸಖತ್ ಚೆನ್ನಾಗಿದೆ. ರುಕ್ಮಿಣಿ ವಸಂತ್ ಇಲ್ಲೂ ಕ್ರಶ್ ಆಗಿಯೇ ಉಳಿಯುತ್ತಾರಾ ಎಂಬುದಕ್ಕೆ ಈ ಸೈಡ್ ಬಿನಲ್ಲಿ ಉತ್ತರವಿದೆ. ಚೈತ್ರ ಆಚಾರ್ ತಮ್ಮ ಪಾತ್ರಕ್ಕೆ ಸೂಟೆಬಲ್ ಎನಿಸಿಕೊಳ್ತಾರೆ. 

Simple star Rakshit Shetty lead Sapta Sagaradaache ello side b release and response srb
Author
First Published Nov 17, 2023, 6:32 PM IST

ಸ್ಯಾಂಡಲ್‌ವುಡ್ ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ' ಇಂದು ದೇಶದಾದ್ಯಂತ ರಿಲೀಸ್ ಆಗಿದೆ. ಮೊದಲ ಭಾಗವನ್ನ ನೋಡಿರುವ ಬಹಳಷ್ಟು ಸಿನಿಮಾ ವೀಕ್ಷಕರು ಈ ಸೈಡ್ ಬಿಯನ್ನು ಮಿಸ್ ಮಾಡಬಾರದು ಎಂದುಕೊಂಡಿರುತ್ತಾರೆ. ಅಂಥವರು ಕಾಯುತ್ತಿದ್ದ ಎರಡನೇ ಚಾಪ್ಟರ್ ಇದೀಗ ಬಿಡುಗಡೆಯಾಗಿದೆ. ಈ ಸಿನಿಮಾ ಸೈಡ್ ಬಿ, ರಕ್ಷಿತ್ ಶೆಟ್ಟಿಯನ್ನ ಇಂತದ್ದೇ ಪಾತ್ರದಲ್ಲಿ ನೋಡಬೇಕು ಎಂದವರಿಗೆ ಖಂಡಿತ ಮೋಸ ಮಾಡುವುದಿಲ್ಲ. 

ಪ್ರಿಯಾ ತನ್ನ ಬದುಕಿನಿಂದ ದೂರವಾದ ಮೇಲೆ ಮನುಗೆ ಇನ್ನೊಬ್ಬಳು ಹುಡುಗಿ ಸಿಗುತ್ತಾಳಾ ಅಥವಾ ಪ್ರಿಯಾ ಬದುಕಿಗೆ ಮನು ಎಂಟ್ರಿ ಕೊಡುತ್ತಾನಾ ಎಂಬ ಕುತೂಹಲಕ್ಕೆ ಸಪ್ತಸಾಗರದಾಚೆ ಎಲ್ಲೋ ಸೈಡ್-ಬಿ ಫುಲ್ ಸ್ಟಾಪ್ ಇಟ್ಟಿದೆ. ಸೈಡ್-ಎನಲ್ಲಿ ರಕ್ಷಿತ್ ಉರುಫ್ ಮನುಗೆ ಲವರ್‌ಬಾಯ್ ಶೇಡ್ ಇತ್ತು. ಆದರೆ ಸೆಕೆಂಡ್ ಪಾರ್ಟ್‌ನಲ್ಲಿ ರೌದ್ರವತಾರವಿದೆ. ರಕ್ಷಿತ್ ಶೆಟ್ಟಿ ನ್ಯಾಚುರಲ್ ಆಕ್ಟಿಂಗ್ ಸಿನಿಮಾದ ಪ್ಲಸ್ ಎನ್ನಬಹುದು. ನಿರ್ದೆಶಕ ಹೇಮಂತ್ ರಾವ್ ಇಲ್ಲೂ ತಮ್ಮ ಡೈರೆಕ್ಷನ್ ಸ್ಪೀಡ್ ಉಳಿಸಿಕೊಂಡಿದ್ದಾರೆ. 

ಸಪ್ತ ಸಾಗರದಾಚೆ ಎಲ್ಲೋ ಸೆಕೆಂಡ್ ಹಾಫ್ ಸ್ವಲ್ಪ ಕಡಿಮೆಯಾಗಬಹುದಿತ್ತು ಎನಿಸುವಂತಿದ್ದರೂ ಪ್ರೀತಿಯ ರಭಸಕ್ಕೆ ಅದು ಮರೆತುಹೋಗುತ್ತೆ. ಚರಣ್ ರಾಜ್ ಮ್ಯೂಸಿಕ್ ಹಾಗೂ ಅದ್ವೈತ್ ಸಿನಿಮಾಟೋಗ್ರಾಫಿ ಸಖತ್ ಚೆನ್ನಾಗಿದೆ. ರುಕ್ಮಿಣಿ ವಸಂತ್ ಇಲ್ಲೂ ಕ್ರಶ್ ಆಗಿಯೇ ಉಳಿಯುತ್ತಾರಾ ಎಂಬುದಕ್ಕೆ ಈ ಸೈಡ್ ಬಿನಲ್ಲಿ ಉತ್ತರವಿದೆ. ಚೈತ್ರ ಆಚಾರ್ ತಮ್ಮ ಪಾತ್ರಕ್ಕೆ ಸೂಟೆಬಲ್ ಎನಿಸಿಕೊಳ್ತಾರೆ. ರಮೇಶ್ ಇಂದಿರಾ ಹಾಗೂ ಗೋಪಾಲ್‌ಕೃಷ್ಣ ದೇಶಪಾಂಡೆ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಡ್ರಾಮಾ ಹಾಗೂ ಕ್ರೈಂ ಅಂಶಗಳು ಚೆನ್ನಾಗಿ ಬ್ಲೆಂಡ್ ಆಗಿವೆ. 

ಮನುಷ್ಯ ಎರಡು ಟೈಮಲ್ಲಿ ಕನ್‌ಫ್ಯೂಸ್ ಆಗ್ತಾನೆ, ಪ್ರೀತಿ ಆರಂಭಿಸುವಾಗ, ಕಳೆದುಕೊಳ್ಳುವಾಗ!

ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ರಾಜ್ಯದ್ಯಂತ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ ಎನ್ನಬಹುದು. ಬೆಂಗಳೂರು ಮೆಜೆಸ್ಟಿಕ್‌ನ ತ್ರಿವೇಣಿ ಥಿಯೆಟರ್‌ನಲ್ಲೂ ಈ ಚಿತ್ರಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ರೀವೆಂಜ್ ಹಾಗೂ ಎಮೊಷನ್ಸ್ ಜಾತ್ರೆಯಾಗಿರೋ ಸೈಡ್-ಬಿ ಸಂಭ್ರಮ ಮತ್ತೆ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೊಂದು ಭರವಸೆ ಬೆಳಕು ಕೊಟ್ಟಿದೆ. ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾಗೆ ಸೆಲೆಬ್ರಿಟಿ ಶೋ ಕೂಡ ಇತ್ತು. ಸಿನಿಮಾ ನೋಡಿದ ಸ್ಟಾರ್ಸ್‌ಗಳು ಈ ಸಿನಿಮಾ ನೋಡಿ ಹೊಗಳಿದ್ದಾರೆ. 

ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?

ಒಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಬಿಡುಗಡೆಯಾಗಿ ನಿರೀಕ್ಷೆ ಇಟ್ಟವರ ಕಣ್ಣಮುಂದೆ ಸ್ಕ್ರೀನಿಂಗ್ ಆಗುತ್ತಿದೆ. ನಿರೀಕ್ಷೆಗೆ ನಿರಾಸೆಯಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗಿದೆ. 

Follow Us:
Download App:
  • android
  • ios