ವಿಲನ್​ಗಳು ಬೆಂಕಿಯ ಪಂಜ್​ನಿಂದ ಹೊಡೆದ ಏಟಿಗೆ ಕೂದಲೇ ಸುಟ್ಟೋಯ್ತು! ವೇದಾ ಚಿತ್ರದ ಘಟನೆ ನೆನೆದ ಶ್ವೇತಾ

ಶಿವರಾಜ್​  ಕುಮಾರ್​ ಜೊತೆಗಿನ ವೇದಾ ಚಿತ್ರದಲ್ಲಿ ವಿಲನ್​ಗಳ ಜೊತೆ ಕಾದಾಟ ಮಾಡುವಾಗ ನಡೆದ ಭಯಾನಕ ಘಟನೆಯ ಕುರಿತು ಆ್ಯಂಕರ್​ ಶ್ವೇತಾ ಚೆಂಗಪ್ಪ ಹೇಳಿದ್ದೇನು?
 

Shweta Chengappa about  terrible incident  in  Veda film shooting with Shivanna in rapid rashmi show

ನಟಿ ಶ್ವೇತಾ ಚಂಗಪ್ಪ ಅವರು ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಖ್ಯಾತಿ ಪಡೆದವರು. ನಟಿಯಾಗಿ, ನಿರೂಪಕಿಯಾಗಿ ಅವರು ಗಮನ ಸೆಳೆದಿದ್ದಾರೆ. ಸದ್ಯ ಇವರು ಕಿರುತೆರೆಯಲ್ಲಿ ಸಕತ್​ ಬಿಜಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಶ್ವೇತಾ,  ಎಸ್. ನಾರಾಯಣ ನಿರ್ದೇಶನದ ಸುಮತಿ  ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿ ಕೊಟ್ಟವರು.  2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು. ಅಲ್ಲಿಂದ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ.  ಇದೀಗ ತಮ್ಮ ಸಿನಿ ಪಯಣ ಹಾಗೂ ಕಿರುತೆರೆಯ ಪ್ರವೇಶ ಸೇರಿದಂತೆ ಜೀವನದ ಹಲವು ವಿಷಯಗಳನ್ನು ರ್ಯಾಪಿಡ್​ ರಶ್ಮಿ ಷೋನಲ್ಲಿ ತೆರೆದಿಟ್ಟಿದ್ದಾರೆ.


2022ರಲ್ಲಿ ಬಿಡುಗಡೆಯಾದ ಶಿವರಾಜ್​  ಕುಮಾರ್​ ನಟನೆಯ ವೇದಾ ಚಿತ್ರದ ಕುರಿತು ಮಾತನಾಡಿದ್ದಾರೆ. ಎ. ಹರ್ಷ ನಿರ್ದೇಶನದ ಈ ಸಿನಿಮಾದಲ್ಲಿ ಈ ಚಿತ್ರದಲ್ಲಿ ನಟಿ ಶ್ವೇತಾ ಅವರಿಗೆ  ಮಹತ್ವದ ಪಾತ್ರವಿದೆ. ಮಹಿಳೆಯರ ಪಾತ್ರಗಳಿಗೆ ಸಾಕಷ್ಟು ಮಹತ್ವ ನೀಡಲಾದ ಈ ಸಿನಿಮಾದಲ್ಲಿ,  ಶ್ವೇತಾ ಚಂಗಪ್ಪ ಮಾತ್ರವಲ್ಲದೇ ನಟಿಯರಾದ ಗಾನವಿ ಲಕ್ಷ್ಮಣ್​ ಮತ್ತು ಅದಿತಿ ಸಾಗರ್​ ಅವರು ನಿಭಾಯಿಸಿದ ಪಾತ್ರಗಳು ಕೂಡ ಹೈಲೈಟ್​ ಆಗಿವೆ. ಇದರಲ್ಲಿ ಶ್ವೇತಾ,  ಡಿಫರೆಂಟ್​ ಪಾತ್ರ ಮಾಡಿದ್ದೂ ಅಲ್ಲದೇ  ಬೋಲ್ಡ್​ ಆಗಿ ಅವರು ಕಾಣಿಸಿಕೊಂಡಿದ್ದಾರೆ.  ಫೈಟಿಂಗ್​ ಮಾಡಿದ್ದಾರೆ. ವಿಲ್​ನಗಳನ್ನು ಸೆದೆಬಡಿಸುವ ದಿಟ್ಟ ಮಹಿಳೆಯಾಗಿ  ಅಭಿನಯಿಸಿದ್ದಾರೆ. ಕಥೆಗೆ ಟ್ವಿಸ್ಟ್​ ನೀಡುವಂತಹ ಪಾತ್ರ ಇದಾಗಿದೆ. ಈ ಚಿತ್ರದ  ಅವರ ನಟನೆಗೆ ಶ್ವೇತಾ ಅವರು, ಅಭಿಮಾನಿಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರ  ಕೂಡ ಆಗಿದ್ದಾರೆ.

ದರ್ಶನ್​ ನನಗಾಗಿ ಡೇಟ್​ ಅಡ್ಜೆಸ್ಟ್​ ಮಾಡ್ಕೋತಿದ್ರು: ಅಂಥ ನಟನನ್ನು ನೋಡೇ ಇಲ್ಲ ಎಂದು ಹೊಗಳಿದ ಆ್ಯಂಕರ್​ ಶ್ವೇತಾ

ಈಗ ಶೂಟಿಂಗ್​ ಕುರಿತು ನೆನಪಿಸಿಕೊಂಡಿದ್ದಾರೆ. ಇದರಲ್ಲಿ ವಿಲನ್​ಗಳು ಬಂದು ಬೆಂಕಿಯ ಪಂಜ್​ನಿಂದ ಹೊಡೆಯಬೇಕಿತ್ತು. ನಾನು ಚಿಕ್ಕ ಹುಡುಗಿ ಎನ್ನುವ ಕಾರಣಕ್ಕೆ ಆ ಆರು,ಆರೂವಡಿ ಎತ್ತರದ ವಿಲನ್​ಗಳು ನಿಧಾನವಾಗಿ ಹೊಡೆಯುತ್ತಿದ್ದರು. ಅದಕ್ಕಾಗಿ ಸಿಕ್ಕಾಪಟ್ಟೆ ಟೇಕ್​ ತೆಗೆದುಕೊಳ್ಳಬೇಕಾಯಿತು. ಆದ್ದರಿಂದ ನಾನೇ ಧೈರ್ಯ ಮಾಡಿ, ಹೀಗೆಲ್ಲಾ ಬೇಡ, ಜೋರಾಗಿಯೇ ಹೊಡೆಯಿರಿ, ತುಂಬಾ ಸಲ ಟೇಕ್​ ಆಗಿದೆ ಎಂದೆ. ಅವರು ಓಕೆ ಎಂದು ಒಂದು ಏಟು ಕೊಟ್ಟರು ನೋಡಿ, ಬೆಂಕಿ ನನ್ನ ಕೂದಲಿಗೇ ಹತ್ತಿಕೊಂಡು ಚರ್​ ಎಂದಿತು. ಇದನ್ನು ನೋಡಿದ ಶಿವರಾಜ್​ ಕುಮಾರ್​ ಅವರು, ಏನ್ರೋ ಅವಳು ಹುಡುಗಿ, ಡ್ಯೂಪ್​ ತೆಗೆದುಕೊಂಡು ಮಾಡಿ ಅಂದರು. ನಾನು ಬೇಡ ಸರ್​, ನಾನೇ ಮಾಡ್ತೇನೆ ಎಂದೆ. ಆದರೆ ದೊಡ್ಮನೆ ಮಕ್ಕಳ ದೊಡ್ಡ ಗುಣ ಅಂತಾರಲ್ಲ, ಹಾಗೆ ಶಿವಣ್ಣ ಅವರು ಕೂಡ ತುಂಬಾ ಕೇರ್​  ಮಾಡಿದ್ರು ಎಂದಿದ್ದಾರೆ ಶ್ವೇತಾ. 

ಇನ್ನು ಚಿತ್ರರಂಗದಲ್ಲಿಯೂ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ತಂಗಿಗಾಗಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ,   ವಿಷ್ಣುವರ್ಧನ ಅವರ ಅಭಿನಯದ ವರ್ಷ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.  ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ವಿಶೇಷ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ.  ಇಷ್ಟೇ ಅಲ್ಲದೇ ಶಿವರಾಜ್​ ಕುಮಾರ್​  ಅವರ 125ನೇ ಸಿನಿಮಾ ವೇದಾದಲ್ಲಿಯೂ ನಟಿಸಿರೋ ಶ್ವೇತಾ ಅವರು ಅಲ್ಲಿ ಪಾರಿ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಅರುಂಧತಿ ಧಾರಾವಾಹಿಯ ನಟನೆಗೆ ಶ್ವೇತಾ ಅವರಿ,  ಕರ್ನಾಟಕ ಸರಕಾರದ ಮಧ್ಯಂಸನ್ಮಾನ ಪ್ರಶಸ್ತಿ ಲಭಿಸಿದೆ.

5 ವರ್ಷದೊಳಗೇ ಚಿಕಿತ್ಸೆ ಕೊಟ್ರೆ ಜಗತ್ತಲ್ಲಿ ಮೂಕರೇ ಇರಲ್ಲ: ಪುನೀತ್​ ರಾಜ್​ರನ್ನು​ ನೆನೆದ ಡಾ.ದೀಪಕ್​ ಹೇಳಿದ್ದೇನು?
 
ಶ್ವೇತಾ ಅವರು ಈ ಎಲ್ಲಾ ಕಾರ್ಯಕ್ರಮಗಳ ನಡುವೆಯೂ ತಮ್ಮ ಮಗ ಜಿಯಾನ್​ ಜೊತೆ ಕಾಲ ಕಳೆಯುತ್ತಿದ್ದಾರೆ. ನನ್ನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಪಡೆಯುವುದು ನನ್ನ ಮಗ ಜಿಯಾನ್. ನನ್ನ ಜೀವನದಲ್ಲಿ ಯಾವುದೇ ಕೆಲಸ ಮುಂದೆ ಬಂದರೂ ನನ್ನ ಮಗನ ಮುಂದೆ ಯಾವುದೂ ಇಲ್ಲ. ಅವನಿಗಾಗಿ ಯಾವ ರೀತಿ ತ್ಯಾಗ ಬೇಕಿದ್ದರೂ ಮಾಡುತ್ತೀನಿ. ದೇವರ ಆಶೀರ್ವಾದದಿಂದ ನನಗೆ ದೊಡ್ಡ ಸಪೋರ್ಟ್ ಅಂದ್ರೆ ಅಮ್ಮ ಮತ್ತು ಗಂಡ. ಕೆಲಸ ಅಂತ ನಾನು ಬ್ಯುಸಿಯಾಗಿರುವಾಗ ನನ್ನ ಮಗನನ್ನು ಇಬ್ಬರೂ ನೋಡಿಕೊಳ್ಳುತ್ತಾರೆ. ನನ್ನ ವೃತ್ತಿ ಬದುಕಿನಲ್ಲಿರುವ ಹಲವು ಕಮಿಟ್ಮೆಂಟ್ ಬ್ಯುಸಿಯಲ್ಲಿ ನಾನಿರುತ್ತೀನಿ ಅದನ್ನು ಅರ್ಥ ಮಾಡಿಕೊಂಡು ನನಗೆ ಸಪೋರ್ಟ್ ಮಾಡುತ್ತಾರೆ ಎಂದು ಶ್ವೇತಾ ಚಂಗಪ್ಪ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದರು.  

Latest Videos
Follow Us:
Download App:
  • android
  • ios