Asianet Suvarna News Asianet Suvarna News

ಡಾ.ರಮಣ ನಿರ್ಲಕ್ಷ್ಯದಿಂದ ಪುನೀತ್‌ ನಿಧನ?: ಗೊಂದಲ ನಿವಾರಿಸದಿದ್ರೆ ನಾವೇ ವಿಚಾರಿಸಿಕೊಳ್ತೇವೆ ಎಂದ ಫ್ಯಾನ್ಸ್‌

*  ಪುನೀತ್‌ ಸಾವಿನ ಗೊಂದಲದ ಬಗ್ಗೆ ಡಾ.ರಮಣ ರಾವ್‌ ನಿವಾರಿಸಬೇಕು
*  ಅಪ್ಪುನೇ ಇಲ್ಲ, ದೂರು ಕೊಟ್ಟು ಏನ್ಮಾಡಲಿ?: ಶಿವರಾಜ್‌ಕುಮಾರ್‌
*  ಡಾ.ರಮಣ ನಿರ್ಲಕ್ಷ್ಯದಿಂದ ಅಪ್ಪು ನಿಧನ: ಠಾಣೆಗೆ ದೂರು
 

Shivarajkumar Fans Demand for Confusion should be Eliminated about Puneeth Rajkumar Death grg
Author
Bengaluru, First Published Nov 6, 2021, 8:48 AM IST

ಬೆಂಗಳೂರು(ನ.06):  ಪವರ್‌ ಸ್ಟಾರ್‌(Power Star) ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಸಾವು ಸಂಭವಿಸಲು ವೈದ್ಯ ಡಾ.ರಮಣರಾವ್‌ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ(Bengaluru) ದೂರೊಂದು ದಾಖಲಾಗಿದೆ. ಏತನ್ಮಧ್ಯೆ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳು ಕೂಡ ಪುನೀತ್‌ ಸಾವಿನ ಬಗ್ಗೆ ಡಾ.ರಮಣರಾವ್‌(Dr Ramana Rao) ಸುದ್ದಿಗೋಷ್ಟಿ ನಡೆಸಿ ಎಲ್ಲ ಗೊಂದಲಗಳನ್ನ ನಿವಾರಿಸಬೇಕು ಅಂತ ಸಾಮಾಜಿಕ(Social Media) ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ. 

"

ಹೌದು, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ(Facebook) All India Dr. Shivarajkumar Biggest fans club ಎಂಬ ಪೇಜ್‌ನಲ್ಲಿ ಪೋಸ್ಟ್‌ ಮಾಡಿರುವ ಅಭಿಮಾನಿಗಳು, ಡಾಕ್ಟರ್ ರಮಣರಾವ್‌ ತಪ್ಪೆಸಗಿದ್ದಾರೋ ಇಲ್ಲವೋ ಅದು ನಂತರದ ವಿಚಾರ. ಆದರೆ ಪುನಿತ್ ರಾಜ್‌ಕುಮಾರ್(Puneeth Rajkumar) ಸಾವಿನ ಕುರಿತಾಗಿ ಒಂದು ಪತ್ರಿಕಾಗೋಷ್ಟಿಯನ್ನು ಕರೆದು ದುಃಖದ ಮಡುವಿನಲ್ಲಿರುವ ಅಭಿಮಾನಿಗಳಲ್ಲಿ, ಸಮಸ್ತ ಕನ್ನಡಿಗರಲ್ಲಿ(Kannadigas) ಎದ್ದಿರುವ ಅನುಮಾನವನ್ನು, ಗೊಂದಲಗಳನ್ನು ನಿವಾರಿಸುವ ಕೆಲಸ ಡಾಕ್ಟರ್ ರಮಣರಾವ್ ಅವರಿಂದ ಆಗಬೇಕಿದೆ. ಇಲ್ಲವಾದಲ್ಲಿ ಪೋಲಿಸರು(Police) ಅವರನ್ನು ವಿಚಾರಣೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನೊಂದ ಅಭಿಮಾನಿಗಳು(Fans) ಅವರನ್ನು ವಿಚಾರಿಸಿಕೊಳ್ಳದೆ ಬಿಡುವುದಿಲ್ಲ ಅಂತ ಬರೆದುಕೊಂಡಿದ್ದಾರೆ. 

 

ಪುನೀತ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ

ಅದು ಸಾಮಾನ್ಯ ಸಾವಲ್ಲ ಒಂದು ಜೀವ ಅದರಲ್ಲೂ ಪುಟ್ಟ ಮಕ್ಕಳಿಂದ ಹಿಡಿದು ಇಡೀ ರಾಜ್ಯದ(Karnataka) ಪ್ರತಿ‌ಯೊಬ್ಬರ ಹೃದಯವನ್ನು ಗೆದ್ದ ವ್ಯಕ್ತಿಯ ಅಚಾನಕ್ ಸಾವು(Sudden Death) ಅದು.  ಅಪ್ಪುವಿನ ಸಾವು ಅವರ ನೆನಪು ಇವತ್ತಿನ ಬೆಳಕಿನ ಹಬ್ಬದಲ್ಲೂ ಕತ್ತಲೆಯ ಅನುಭವವನ್ನು ನೀಡಿದ್ದಂತೂ ಸತ್ಯ. ಈ‌ ನಾಡು ಮೇರು ನಟ ಅಣ್ಣಾವರ ಸಾವನ್ನೂ ಸಹ ಕಂಡಿದೆ ಆದರೆ ಕಲ್ಲು ಹೃದಯವನ್ನೂ ಕರಗಿಸಿ ಕಣ್ಣೀರು ತರಿಸಿದ್ದು ಅಪ್ಪುವಿನ ಸಾವು ಮಾತ್ರ.  ಕಾಲ ಎಲ್ಲವನ್ನೂ ಮರೆಸುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಪ್ಪುವಿನ ಸಾವಿನ ಸೂತಕದಿಂದ ಜನತೆ ಹೊರಬರಲು ಕೆಲವು ಸಮಯಗಳೇ ಬೇಕಾಗುತ್ತದೆ ಅಂತ ಬರೆದುಕೊಂಡಿದ್ದಾರೆ. 

ಡಾ.ರಮಣ ನಿರ್ಲಕ್ಷ್ಯದಿಂದ ಅಪ್ಪು ನಿಧನ: ಠಾಣೆಗೆ ದೂರು

ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಸಾವು ಸಂಭವಿಸಲು ವೈದ್ಯ ಡಾ.ರಮಣರಾವ್‌ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು(Complaint) ಸಲ್ಲಿಸಿದ್ದಾರೆ. ಕುರುಬರಹಳ್ಳಿಯ ಅರುಣ್‌ ಪರಮೇಶ್ವರ್‌ ಎಂಬುವರೇ ಆರೋಪ ಮಾಡಿದ್ದು, ಈ ದೂರು ಸ್ವೀಕರಿಸಿದ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಸದಾಶಿವನಗರದ ಡಾ.ರಮಣ ರಾವ್‌ ಅವರ ಕ್ಲಿನಿಕ್‌ಗೆ(Clinic) ಚಿಕಿತ್ಸೆ(Treatment) ಸಲುವಾಗಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತೆರಳಿದ್ದರು. ಆದರೆ ಆ ಕ್ಲಿನಿಕ್‌ನಲ್ಲಿ ಯಾವ ರೀತಿ ತಪಾಸಣೆ ನಡೆಸಲಾಗಿದೆ. ವಿಕ್ರಂ ಆಸ್ಪತ್ರೆಗೆ(Vikram Hospital) ಹೋಗಲು ಯಾಕೆ ತಡವಾಯಿತು ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಅರುಣ್‌ ಶಂಕೆ ವ್ಯಕ್ತಪಡಿಸಿದ್ದಾರೆ. 

ಪುನೀತ್ ಸಮಾಧಿ ಬಳಿ ನಿಂತು ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗ ತಮಿಳು ನಟ ಸೂರ್ಯ!

ಅಪ್ಪುನೇ ಇಲ್ಲ, ದೂರು ಕೊಟ್ಟು ಏನ್ಮಾಡಲಿ?: ಶಿವರಾಜ್‌ಕುಮಾರ್‌

ನಮ್ಮ ಮನೆಯ ಅಪ್ಪುನೇ ಇವತ್ತು ನಮ್ಮ ಜತೆ ಇಲ್ಲ. ದೂರು ಕೊಟ್ಟು ಏನು ಮಾಡೋದು ಎಂದು ನಟ ಶಿವರಾಜ್‌ ಕುಮಾರ್‌(Shivarajkumar) ಅಭಿಪ್ರಾಯಪಟ್ಟಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನ ಬಗ್ಗೆ ಸಂಪೂರ್ಣವಾಗಿ ತನಿಖೆ(Investigation) ನಡೆಯಬೇಕು ಎಂದು ಪುನೀತ್‌ ಅಭಿಮಾನಿ ಅರುಣ್‌ ಪರಮೇಶ್ವರ್‌ ಎಂಬುವರು ದೂರು ನೀಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್‌, ‘ಏನಕ್ಕೆ ದೂರು ಕೊಡಬೇಕು ಎಂಬುದು ಗೊತ್ತಿಲ್ಲ. ಇವತ್ತು ಅಪ್ಪುನೇ ನಮ್ಮ ಜತೆಗೆ ಇಲ್ಲ. ದೂರು ನೀಡುವುದರಿಂದ ಯಾವ ಪ್ರಯೋಜನ ಆಗುತ್ತದೆ ಹೇಳಿ. ಹಾಗಂತ ಅಭಿಮಾನಿಗಳಿಗೆ ಇದು ಮಾಡಿ, ಅದನ್ನು ಮಾಡಬೇಡಿ ಎಂದು ಹೇಳಕ್ಕೆ ಆಗಲ್ಲ. ಅಪ್ಪು ಏನು ಅಂತ ಅಭಿಮಾನಿಗಳಿಗೆ ಗೊತ್ತು. ಅವರ ಹೃದಯಕ್ಕೆ ಅಪ್ಪು ಅರ್ಥ ಆಗಿದ್ದಾರೆ. ಹೀಗಾಗಿ ನಾನು ಏನು ಹೇಳಲಿ’ ಎಂದಿದ್ದಾರೆ.

ಆರಂಭದಲ್ಲಿ ರಮಣಶ್ರೀ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ನೀಡಲಾಯಿತು, ವಿಕ್ರಮ್‌ ಆಸ್ಪತ್ರೆಗೆ ತಡವಾಗಿ ಹೋಗಲು ಕಾರಣವೇನು, ವಿಕ್ರಮ್‌ ಆಸ್ಪತ್ರೆಗೆ ಹೋಗಲು ರಮಣಶ್ರೀ ಆಸ್ಪತ್ರೆಯವರು ಯಾಕೆ ಆ್ಯಬುಲೆನ್ಸ್‌ ವ್ಯವಸ್ಥೆ ಮಾಡಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪುನೀತ್‌ ಅಭಿಮಾನಿ ಅರುಣ್‌ ಪರಮೇಶ್ವರ್‌ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಡಾ. ರಮಣರಾವ್ ಮನೆಗೆ ಪೊಲೀಸ್ ಭದ್ರತೆ

ಅಪ್ಪುಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದ ಡಾ.‌ರಮಣರಾವ್ ಅವರ ಸದಾಶಿವನಗರದಲ್ಲಿರುವ ರಮಣ ರಾವ್ ಕ್ಲೀನಿಕ್ ಮತ್ತು ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪುನೀತ್ ರಾಜ್‌ಕುಮಾರ್‌ ಅವರಿಗೆ ಡಾ. ರಮಣರಾವ್ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ ಎಂದು ಕೆಲವು ಅಭಿಮಾನಿಗಳು ಆರೋಪಿಸಿ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ನೀಡಿದ್ದಾರೆ. ಹೀಗಾಗಿ ಡಾ. ರಮಣರಾವ್ ಮನೆಗೆ ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ. 
 

Follow Us:
Download App:
  • android
  • ios