Asianet Suvarna News

ಅನೌನ್ಸ್ ಆಯ್ತು ಶಿವಣ್ಣ 'ಭಜರಂಗಿ-2' ಸಿನಿಮಾ‌ ರಿಲೀಸ್ ಡೇಟ್!

ಅನ್‌ಲಾಕ್‌ ಆಗುತ್ತಿದ್ದಂತೆ, ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್.
 

Shivarajkumar Bhajarangi 2 film to release on September 10th vcs
Author
Bangalore, First Published Jul 21, 2021, 3:43 PM IST
  • Facebook
  • Twitter
  • Whatsapp

ಕೊರೋನಾ ಎರಡನೇ ಅಲೆಯಿಂದ ಮುಕ್ತಿ ಪಡೆಯುತ್ತಿರುವ ಜನರು  ಹಂತ ಹಂತವಾಗಿ ಆಗುತ್ತಿರುವ ಅನ್‌ಲಾಕ್‌ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಅದರಲ್ಲೂ 50%  ಸೀಟಿಂಗ್ ನೀಡಿ, ಚಿತ್ರಮಂದಿರ ತೆರೆಯುವುದಕ್ಕೆ ಅನುಮತಿ ನೀಡಿರುವುದು ಕನ್ನಡ ಸಿನಿ ಪ್ರೇಮಿಗಳಿಗೆ ಮಾತ್ರವಲ್ಲ ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ಸಂತೋಷ ತಂದಿದೆ. ಈ ಬೆನ್ನಲ್ಲೇ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುತ್ತಿದೆ.

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ 'ಭಜರಂಗಿ 2' ಬಿಡುಗಡೆ ದಿನಾಂಕ ಫಿಕ್ಸ್ ಮಾಡಲಾಗಿದೆ. ಈ ವರ್ಷ ಗೌರಿ-ಗಣೇಶ್ ಹಬ್ಬದ ದಿನ ಅಂದ್ರೆ ಸೆಪ್ಟೆಂಬರ್ 10ರಂದು  'ಭಜರಂಗಿ 2' ರಿಲೀಸ್ ಮಾಡಲಾಗುತ್ತಿದೆ. ಎ ಹರ್ಷ ಆ್ಯಕ್ಷನ್ ಕಟ್, ಜಯಣ್ಣ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಭಾವನಾ ಅಭಿನಯಿಸುತ್ತಿದ್ದಾರೆ. ಚಿತ್ರದ ಬಗ್ಗೆ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. 

ಸದ್ಯ ಚಿತ್ರರಂಗದ ಆಧಾರ ಸ್ತಂಭವಾಗಿರುವ ಶಿವಣ್ಣ ಸಿನಿಮಾ ಡೇಟ್‌ಗಳು ಫಿಕ್ಸ್ ಆಗುತ್ತಿರುವ ಧೈರ್ಯದ ಮೇಲೆ ಅನೇಕರು ತಮ್ಮ ಸಿನಿಮಾ ರಿಲೀಸ್‌ಗೆ ಡೇಟ್ ಹುಡುಕಾಟ ಶುರು ಮಾಡಿದ್ದಾರೆ. ಗೌರಿ-ಗಣೇಶ ಹಬ್ಬದ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಕೂಡ ಹೆಚ್ಚಿದೆ. 

ರಗಡ್ ಲುಕ್‌ನಲ್ಲಿ ಶಿವರಾಜ್‌ಕುಮಾರ್; ಭಜರಂಗಿ-2 ಟೀಸರ್ ವೈರಲ್!

ಪೊಗರು, ರಾಬರ್ಟ್ ಹಾಗೂ ಯುವರತ್ನ ನಂತರ ಬಿಗ್ ಬಜೆಟ್ ಸಿನಿಮಾಗಳು ತೆರೆ ಕಾಣಲು ಚಿಂತಿಸುತ್ತಿದ್ದವು. ರಿಲೀಸ್ ಆದರೆ ಮತ್ತೆ ಲಾಕ್‌ಡೌನ್‌ ಆಗುವ ಭಯದಲ್ಲಿದ್ದರೂ, ಭಜರಂಗಿ 2 ಡೇಟ್ ಫಿಕ್ಸ್ ಆದ ಮೇಲೆ ಕೊಂಚ ನೆಮ್ಮದಿ ವಾತಾವರಣ ಸೃಷ್ಟಿಯಾಗಿದೆ.

Follow Us:
Download App:
  • android
  • ios