ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಲೈವ್ ಚಾಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ತಮ್ಮ 125ನೇ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಪೋಸ್ಟರ್ ಹಾಗೂ ಶಿರ್ಷಿಕೆ ರಿಲೀಸ್ ಮಾಡಲಾಗಿದೆ. ಶಿವಣ್ಣನ 125ನೇ ಚಿತ್ರದಲ್ಲಿ ಏನೆಲ್ಲಾ ವಿಶೇಷತೆಗಳಿವೆ? 

35 ವರ್ಷ ಸಿನಿ ಜರ್ನಿ ಪೂರೈಸಿದ ಶಿವಣ್ಣ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು!

ಶಿವರಾಜ್‌ ಕುಮಾರ್ ಸಿನಿ ಜರ್ನಿಯ 125ನೇ ಚಿತ್ರ ಯಾರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ತುಕೂಹಲ ಹೆಚ್ಚಾಗಿತ್ತು. ಪೋಸ್ಟರ್ ಮೂಲಕ ಎ.ಹರ್ಷ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿತ್ರದ ಹೆಸರು 'ವೇದ'.  ಭಜರಂಗಿ, ವಜ್ರಕಾಯ, ಭಜರಂಗಿ-2 ಚಿತ್ರದಲ್ಲಿ ಶಿವರಾಜ್‌ ಕುಮಾರ್ ಹಾಗೂ ಹರ್ಷ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಚಿತ್ರವಿದು. 

ಚಿತ್ರದ ಬಗ್ಗೆ ಮತ್ತೊಂದು ವಿಶೇಷತೆ ಗಮನಿಸಬೇಕಿದೆ. ಹರ್ಷ ಅವರು ನಿರ್ದೇಶಿಸುತ್ತಿರುವ ಪ್ರತಿಯೊಂದೂ ಚಿತ್ರಕ್ಕೂ ಆಂಜನೇಯನ ಹೆಸರನ್ನು ಇಡಲಾಗುತ್ತಿತ್ತು. ಆದರೀಗ ವೇದ ಟೈಟಲ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಶಿವರಾಜ್‌ ಕುಮಾರ್ ಲುಕ್ ರಿವೀಲ್ ಮಾಡಲಾಗಿದೆ.  ಟೈಟಲ್‌ ಜೊತೆಗೆ ಬ್ರೂಟಲ್ 1960 ಎನ್ನುವ ಟ್ಯಾಗ್ ನೀಡಿದ್ದಾರೆ.  ಶಿವರಾಜ್‌ ಕುಮಾರ್ ಹೋಮ್‌ ಬ್ಯಾನರ್ ಗೀತಾ ಪಿಕ್ಚರ್ಡ್ ಅಡಿಯಲ್ಲಿ ಈ ವೇದಾ ಚಿತ್ರ ಮೂಡಿ ಬರುತ್ತಿದೆ. 

ಮೊದಲ ಚಿತ್ರದ ಮುಹೂರ್ತದಲ್ಲಿ ಕಣ್ಣೀರಿಟ್ಟಿದ್ದ ಶಿವರಾಜ್‌ ಕುಮಾರ್‌; ಕಾರಣ ರಿವೀಲ್! 

ಫೆ.19ರಂದು ಶಿವರಾಜ್‌ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 35 ವರ್ಷಗಳನ್ನು ಪೂರೈಸಿದ್ದಾರೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಸರಳವಾಗಿ ಈ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಅಲ್ಲದೇ ಮೊದಲ ಮೊದಲ ಸಿನಿಮಾ ಆನಂದ್ ಫಸ್ಟ್ ಶಾಟ್‌ ಕ್ಯಾಪ್ ಮಾಡಿದ ನಂತರ ಅಪ್ಪಾಜಿ ಡಾ.ರಾಜ್‌ಕುಮಾರ್ ಹಾಗೂ ಅಲ್ಲಿದ್ದ ಗಣ್ಯರ ಆಶೀರ್ವಾದ ಪಡೆದು ಭಾವುಕರಾಗಿದ್ದಾಗ, ಹಳೇಯ ನೆನಪುಗಳನ್ನು ಮೆಲಕು ಹಾಕಿದ್ದರು.