ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ 'ವರ್ಷ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  'ಶಾಸ್ತ್ರಿ' ಚಿತ್ರದಲ್ಲಿ ಮಿಂಚಿದ ನಟಿ ಮಾನ್ಯಾ ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಕುಟುಂಬಸ್ಥರ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಮಾನ್ಯಾ ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನಿಗಳನ್ನುಗಳಿಸಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮಾನ್ಯಾ ಅಭಿಮಾನಿಗಳ ಜೊತೆ ಸಂವಾದಿಸುತ್ತಾರೆ. 

15 ವರ್ಷದ ನಂತರ 'ಶಂಭು' ಪ್ರೇಯಸಿ ಜೊತೆ ಒಂದಾದ ಶ್ರೀಮುರಳಿ! 

ಅಮೇರಿಕಾದಲ್ಲಿರುವ ಮಾನ್ಯಾ ಬಿಡುವಿನ ಸಮಯದಲ್ಲಿ ಪುತ್ರಿ ಒಮಿಷ್ಕಾಗೂ ಕನ್ನಡ ಕಲಿಸುತ್ತಾರಂತೆ, ಅಮ್ಮ-ಮಗಳು ಮಾಡುವ ಡುಯಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಮೊದಲ ಸಿನಿಮಾ 'ವರ್ಷ'ದಲ್ಲಿ ಡಾ. ವಿಷ್ಣುವರ್ಧನ್‌ ಜೊತೆ ಅಭಿನಯಿಸಿದ್ದಾರೆ. ಈ ಚಿತ್ರದ  'ವಾಸಂತಿ ವಾಸಂತಿ' ಹಾಡನ್ನು ಹಾಡಿದ್ದಾರೆ. ಅಮ್ಮನ ಮಡಿಲಲ್ಲಿ ಕುಳಿತ್ತಿದ್ದ ಪುತ್ರಿಯ ಜೊತೆಗೂ ಕನ್ನಡ ಭಾಷೆಯಲ್ಲಿ ಎರಡು ಮೂರು ಸಾಲುಗಳಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಒಮಿಷ್ಕಾ' ಎಂದು ಕಂದಮ್ಮ ಮಾತನಾಡಿದ್ದಾಳೆ.

 

'ನಾನು ಗಾಯಕಿ ಅಲ್ಲ ಆದರೆ ನನ್ನ ಮಗಳಿಗೋಸ್ಕರ ಹಾಡಲು ತುಂಬಾ ಇಷ್ಟ ಪಡುತ್ತೇನೆ. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ಎಸ್‌ ನಾರಾಯಣ್‌ ಸರ್‌ ಮತ್ತು ರಾಕ್‌ಲೈನ್‌ ಸರ್‌ಗೆ ಧನ್ಯವಾದಗಳು. ವಿಷ್ಣುವರ್ಧನ್ ಸರ್ ಜೊತೆ ಅಭಿನಯಿಸುವುದಕ್ಕೆ ನಾನು ಅದೃಷ್ಟ ಮಾಡಿದ್ದೆ' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

https://youtu.be/sOTKTDue7Qg

A post shared by Manya (@manya_naidu) on Jul 2, 2020 at 7:23pm PDT

ಇನ್ನು  ನಟಿ ಅನುಪ್ರಭಾಕರ್‌ ಚಿತ್ರರಂಗಕ್ಕೆ 'ಸಾರ ವಜ್ರ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಶುಭಾಶಯ ತಿಳಿಸಲು ಮಾನ್ಯಾ ವಿಡಿಯೋ ಶೇರ್ ಮಾಡಿದ್ದರು. ಚಿತ್ರರಂಗದಿಂದ ದೂರ ಉಳಿದರೂ ಸಿನಿ ಸ್ನೇಹಿತರ ಪ್ರೀತಿ ಹಾಗೆ ಉಳಿಸಿಕೊಂಡಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"