ದರ್ಶನ್ 'ದಿ ಡೆವಿಲ್' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಮೈಸೂರಿನಲ್ಲಿ ಶೂಟಿಂಗ್.. ರೋಲ್ ಏನು...!?
ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ...

ಸ್ಯಾಂಡಲ್‌ವುಡ್ ನಟಿಯರ ಲಿಸ್ಟ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರಿಗೆ ಒಂದು ಪ್ರಮುಖ ಸ್ಥಾನವಿದೆ. ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣ' ಚಿತ್ರದಲ್ಲಿ ನಟಿ ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ಜೊತೆಗೆ, ಸಜನಿ, ಮಸ್ತ್ ಮಜಾ ಮಾಡಿ, ಸ್ವಯಂವರ, ಮುಮ್ತಾಜ್ ಹಾಗೂ ಕರಿ ಚಿರತೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಶರ್ಮಿಳಾ ಮಾಂಡ್ರೆ. ಕನ್ನಡ ಮಾತ್ರವಲ್ಲ, ತಮಿಳು ಹಾಗೂ ತೆಲುಗಿನಲ್ಲಿ ಕೂಡ ನಟಿ ಶರ್ಮಿಳಾ ಮಾಂಡ್ರೆ ಅವರು ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅವರು ನಟಿ ಮಾತ್ರವಲ್ಲ ನಿರ್ಮಾಪಕಿ ಕೂಡ ಹೌದು.
ಇಂಥ ನಟಿ ಶರ್ಮಿಳಾ ಮಾಂಡ್ರೆ ಅವರು ಇದೀಗ ದರ್ಶನ್ ನಟನೆಯ ಮುಂಬರುವ ಕನ್ನಡದ 'ಡೆವಿಲ್' ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ನಡೆದ ದಿ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ಕಳೆದ ವರ್ಷ ಸ್ಥಗಿತಗೊಂಡಿದ್ದ ಡೆವಿಲ್ ಚಿತ್ರೀಕರಣ ಈಗ ಮತ್ತೆ ಮುಂದುವರೆಯುತ್ತಿದೆ. ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿರುವ ಕಾರಣಕ್ಕೆ ಜೈಲು ಸೇರಿದ್ದ ಕಾರಣಕ್ಕೆ ಡೆವಿಲ್ ಚಿತ್ರೀಕರಣ ನಿಂತಿತ್ತು.
'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!
ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ದರ್ಶನ್ ನಟನೆಯ 'ಡೆವಿಲ್' ಚಿತ್ರ. ಸದ್ಯ ನಟ ದರ್ಶನ್ ಅವರು ಬೆನ್ನುನೋವಿನಿಂದ ನರಳುತ್ತಿರುವ ಕಾರಣಕ್ಕೆ ದರ್ಶನ್ ಆಕ್ಷನ್ ಸೀನ್‌ನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಟಾಕಿ ಪೋರ್ಶನ್‌ನಲ್ಲಿ ನಟಿಸುತ್ತಿದ್ದು ಶೂಟಿಂಗ್ ಮುಂದುವರೆಯುತ್ತಿದೆ. ಈ ಚಿತ್ರದಲ್ಲಿ ನಟಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಪ್ರಮುಖ ಪಾತ್ರವೊಂದರಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಶರ್ಮಿಳಾ ಮಾಂಡ್ರೆ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ.
ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ 'ದಿ ಡೆವಿಲ್' ಚಿತ್ರವು ದರ್ಶನ್ ಕೇಸ್ ಕಾರಣಕ್ಕೆ ನಿಂತುಹೋಗಿತ್ತು. ಆದರೆ ಈಗ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಹೀಗಾಗಿ ಪುನಃ ಚಿತ್ರೀಕರಣ ಮುಂದುವರೆಯುತ್ತಿದೆ. ಏನೇ ಆದರೂ ನಟ ದರ್ಶನ್ ಫ್ಯಾನ್ಸ್ & ಫಾಲೋವರ್ಸ್ ಕಡಿಮೆ ಆಗಿಲ್ಲ. ಈ ಮಾತಿಗೆ ಸೋಷಿಯಲ್ ಮೀಡಿಯಾ ಆಗಾಗ ಸಾಕ್ಷಿ ಒದಗಿಸುತ್ತಲೇ ಇದೆ. ನಟ ದರ್ಶನ್ ಅಭಿಮಾನಿಗಳು ಡೆವಿಲ್ ಚಿತ್ರ ತೆರೆಗೆ ಬರೋದನ್ನೇ ಕಾಯುತ್ತಿದ್ದಾರೆ. ಈ ವರ್ಷ ಬಿಡುಗಡೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.
ಈ ಮಹಾನಗರದಲ್ಲಿ ಏನಾಗುತ್ತಿದೆ..? ಮಗ, ಮದರ್ ಇಂಡಿಯಾ ಸೇರಿ ಆಪ್ತರನ್ನು ಹೊರಹಾಕಿದ್ದೇಕೆ ದರ್ಶನ್?