ಹಿರಿಯ ನಟಿ ಬಿ ಸರೋಜದೇವಿ ಅವರು ಸಿನಿ ತಂತ್ರಜ್ಞರಿಗೆ ನೆರವು ನೀಡಲು ಮುಂದಾಗಿದ್ದಾರೆ. ನಾಲ್ಕು ಲಕ್ಷ ರುಪಾಯಿಗಳ ನೆರವು ನೀಡುವ ಮೂಲಕ ಕಷ್ಟ ಕಾಲದಲ್ಲಿ
ಸಿನಿ ತಂತ್ರಜ್ಞರ ಕೈಹಿಡಿಯುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಈ ಹಣವನ್ನು ಬಳಸಲು ಮತ್ತು ಕೊರೋನಾ ಸಂಕಷ್ಟ ಕಾಲದಲ್ಲಿ ಕೆಲಸ ಇಲ್ಲದೆ ಆರ್ಥಿಕವಾಗಿ ಕುಸಿದಿರುವವರ ನೆರವಿಗೆ ಈ
ಹಣ ಬಳಸುವಂತೆ ಬಿ ಸರೋಜದೇವಿ ಅವರು ಮನವಿ ಮಾಡಿಕೊಂಡಿದ್ದಾರೆ.

3,000 ಸಿನಿ ಕಾರ್ಮಿಕರ ಕುಟುಂಬಕ್ಕೆ ಉಪ್ಪಿ ನೆರವು

ಬಹುಭಾಷಾ ನಟಿ ಬಿ ಸರೋಜದೇವಿ ನೀಡಲಿರುವ 4 ಲಕ್ಷ ರುಪಾಯಿಗಳನ್ನು ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಕಷ್ಟದಲ್ಲಿ ಇರುವವರಿಗೆ ನೀಡಲು ನಿರ್ಧರಿಸಲಾಗಿದೆ.

ಬಹಳಷ್ಟು ಸಿನಿ ಸ್ಟಾರ್‌ಗಳು ಕೊರೋನಾ ಕಾಲದಲ್ಲಿ ಇಂಡಸ್ಟ್ರಿಯ ಜನರ ನೆರವಿಗೆ ನಿಂತಿದ್ದು ಸ್ಯಾಂಡಲ್‌ವುಡ್‌ನಲ್ಲಿರೋ 3 ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡುವುದಕ್ಕೆ ಉಪೇಂದ್ರ ನಿರ್ಧರಿಸಿದ್ದಾರೆ.