ನಟಿ ಸಂಜನಾ ಗಲ್ರಾನಿ ಫೌಂಡೇಷನ್ | ನಟಿಯ ಹೊಸ ಪ್ರಾಜೆಕ್ಟ್ ಪುಣ್ಯ ಆರಂಭ

ನಟಿ ಸಂಜನಾ ಗಲ್ರಾನಿ ಹೊಸದಾಗಿ ಫೌಂಡೇಷನ್ ಆರಂಭಿಸಿದ್ದಾರೆ. ಸಂಜನಾ ಗಲ್ರಾನಿ ಫೌಂಡೇಷನ್ ಹೆಸರಿನಲ್ಲಿ ಫೌಂಡೇಷನ್ ಆರಂಭಿಸಿ ಜನರಿಗೆ ನೆರವಾಗಲು ಸಿದ್ಧರಾಗಿದ್ದಾರೆ.

ಫೌಂಡೇಷನ್‌ನಲ್ಲಿ ಸದ್ಯ ಪ್ರಾಜೆಕ್ಟ್ ಪುಣ್ಯ - ನೆರವಿನ ಹಸ್ತ ಎಂಬ ಹೆಸರಲ್ಲಿ ಹೊಸ ಯೋಜನೆ ನಡೆಯಲಿದೆ. ಡೊನೇಟ್ ಕ್ಲೋತ್ಸ್ ಎನ್ನುವ ಇನಿಷಿಯೇಟುವ್ ತೆಗೆದುಕೊಳ್ಳಲಾಗಿದ್ದು, ಇದರಲ್ಲಿ ಬಳಸಿದ ಬಟ್ಟೆ, ಹೊಸ ಬಟ್ಟೆ, ಶೂ, ಶಾಲಾ ಬ್ಯಾಗ್, ಪುಸ್ತಕ, ಸ್ಟೇಷನರಿ, ಮನೆ ಬಳಕೆ ವಸ್ತು ನೀಡಲು ಉದ್ದೇಶಿಸಲಾಗಿದೆ.

ಸೈಡ್‌ ಎಫೆಕ್ಟ್ ಇಲ್ಲ, ಕಾಂತಿ ಹೆಚ್ಚುತ್ತೆ: ಪ್ಲಾಸ್ಮಾ ನೀಡೋದು ನನ್ನ ಜವಾಬ್ದಾರಿ ಎಂದ ನಟಿ

ದಾನ ಮಾಡುವಾಗ ನೀವು ನೀಡುವ ಬಟ್ಟೆ ತೊಳೆಯಲಾಗಿದೆ, ಹರಿಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಪಡೆಯುವವರಿಗೆ ಧರಿಸಲು ಬಟ್ಟೆ ಇರದಿದ್ದರೂ ಹರಿದ ಬಟ್ಟೆಯನ್ನು ನೀಡುವುದಿಲ್ಲ, ಅವರಿಗೂ ಗೌರವ ನೀಡಬೇಕು. ಇದನ್ನು ಬಡವರು ಅಗತ್ಯ ಇರುವ ಜನರಿಗೆ ಹಂಚಲಾಗುತ್ತದೆ ಎಂದಿದ್ದಾರೆ.

View post on Instagram
View post on Instagram
View post on Instagram